ಬೆಂಗಳೂರು: ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಚಿತ್ರ ʼಕೆಡಿ ದಿ ಡೆವಿಲ್ʼ (KD Movie) ಚಿತ್ರದ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ನಿರ್ದೇಶಕ ಪ್ರೇಮ್ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಹಿಂದಿ ಆಡಿಯನ್ಸ್ ಕೂಡ ಸಿಕ್ಕಾಪಟ್ಟೆ ಬೈಯಲು ಶುರು ಮಾಡಿದ್ದರು. ಈ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಇದೀಗ ತಮ್ಮ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಕೊನೆಗೂ ನಟಿ ನೋರಾ ಫತೇಹಿ ಅವರು ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಈ ಬಗ್ಗೆ ನಟಿ ಹೇಳಿದ್ದೇನು ಎಂಬುದರ ಬಗ್ಗೆ ʼವಿಶ್ವವಾಣಿ ಟಿವಿ ಸ್ಪೆಷಲ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ನಿರೂಪಕ ಸುಜಯ್ ರಾಜ್ ವಿವರವಾಗಿ ತಿಳಿಸಿದ್ದಾರೆ.