ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Radha Bhagavati : ಅಮೃತಧಾರೆ ಟೈಮಲ್ಲೇ ನಾವಿಬ್ರೂ ಲವ್ವಲ್ಲಿ ಬಿದ್ವಿ; ನಟಿ ರಾಧಾ ಭಗವತಿ

Radha Bhagavati: ಜೀ ಕನ್ನಡದ 'ಅಮೃತಧಾರೆ' ಖ್ಯಾತಿಯ ರಾಣವ್ ಗೌಡ ಮತ್ತು ಕಲರ್ಸ್ ಕನ್ನಡದ 'ಭಾರ್ಗವಿ ಎಲ್ಎಲ್ ಬಿ' ನಟಿ ರಾಧಾ ಭಗವತಿ ನಿಶ್ಚಿತಾರ್ಥ ಮಾಡಿಕೊಂಡಿರೋದು ಗೊತ್ತೇ ಇದೆ. ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ದಿವಾನ್‌ ಹಾಗೂ ಮಲ್ಲಿ ಪಾತ್ರ ತುಂಬ ಫೇಮಸ್. ಜಯದೇವ್‌ ಹಾಗೂ ಮಲ್ಲಿ ಪಾತ್ರಧಾರಿ ಈಗ ರಿಯಲ್‌ ಲೈಫ್‌ನಲ್ಲಿಯೂ ಎಂಗೇಜ್‌ ಆಗಿದ್ದಾರೆ.

ರಾಧಾ ಭಗವತಿ

ಪ್ರಸ್ತುತ ʻಕಲರ್ಸ್‌ ಕನ್ನಡʼ ವಾಹಿನಿಯ ʻಭಾರ್ಗವಿ ಎಲ್‌ಎಲ್‌ಬಿʼ ಧಾರಾವಾಹಿಯಲ್ಲಿ ನಟಿಸುತ್ತಿರುವ ರಾಧಾ ಭಗವತಿ ʻಅಮೃತಧಾರೆʼ ಧಾರಾವಾಹಿ ಮೂಲಕ ಸಖತ್‌ ಫೇಮಸ್‌ ಆದರು. ಶೂಟಿಂಗ್ ಸೆಟ್‌ನಲ್ಲಿಯೇ ಮೊಳಕೆಯೊಡೆದ ತಮ್ಮ ಪ್ರೀತಿ, ರಾಣವ್ ತಾಯಿಯ ಒಂದು ಫೋನ್ ಕಾಲ್ ಹಾಗೂ ತಾವು ಮೊದಲು ಪ್ರಪೋಸ್ ಮಾಡಿದ ರೋಚಕ ಕ್ಷಣವನ್ನು ನಟಿ ರಾಧಾ ಹಂಚಿಕೊಂಡಿದ್ದಾರೆ. ಇಂಥಹ ಮೃದು ಭಾಷಿ ವ್ಯಕ್ತಿಯನ್ನು ನಾನು ನೋಡೇ ಇಲ್ಲ. ಅವರದ್ದು ಮಗುವಿನಂಥ ಮನಸ್ಸು. ಎಷ್ಟೋ ಮಂದಿ ಲೇಡೀಸ್​ ಅವರನ್ನು ಮುತ್ತುವರೆದುಕೊಂಡು ಇದ್ದರೂ, ಇವರು ಮಾತ್ರ ಸಕತ್​ ಸಾಫ್ಟ್​ ಆಗಿ ಮಾತನಾಡುವುದು ಎಲ್ಲವೂ ನನಗೆ ಇಷ್ಟವಾಯ್ತು ಎಂದು ಹೇಳಿಕೊಂಡಿದ್ದಾರೆ. ಇದೀಗ ʼವಿಶ್ವವಾಣಿ ನಿರೂಪಕ ಸುಜಯ್‌ ರಾಜ್‌ ನಟಿಯನ್ನು ಸಂದರ್ಶನ ಮಾಡಿದ್ದಾರೆ.

Yashaswi Devadiga

View all posts by this author