'ಧುರಂಧರ್- 2' ಸಿನಿಮಾ ನೋಡಲು ಸಿನಿ ಪ್ರೇಮಿಗಳು ಮಾತ್ರವಲ್ಲ ತಾರೆಯರು ಮುಗಿಬಿದ್ದಿದ್ದಾರೆ. ನಟಿ ರಮ್ಯಾ ಸದ್ಯ ಸಿನಿಮಾ ನೋಡಿ ಸುದೀರ್ಘವಾಗಿ ಪೋಸ್ಟ್ ಮಾಡಿದ್ದಾರೆ. ಇದು ನೋಡಲು ಅತ್ಯಂತ ಬೋರಿಂಗ್ ಆದ ಯಾವುದೋ ವಿಷಯದ ಪಠ್ಯಪುಸ್ತಕದಂತಿದೆ. ಓದುತ್ತಾ ಹೋದಂತೆ ಅಧ್ಯಾಯಗಳು ಮುಗಿಯುವುದೇ ಇಲ್ಲ. ಒಂದು ಹಂತದಲ್ಲಂತೂ ನಮ್ಮ ಮೆದುಳು ಸುಸ್ತಾಗಿ, ತೆರೆಯ ಮೇಲೆ ನಡೆಯುತ್ತಿರುವ ಅತಿರೇಕದ ದೃಶ್ಯಗಳನ್ನು ಕಂಡು ಹತಾಶೆಯಿಂದ ನಗು ಬರಲು ಶುರುವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಬಗ್ಗೆ ʼವಿಶ್ವವಾಣಿ ಟಿವಿ ಸ್ಪೆಷಲ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ನಿರೂಪಕ ಸುಜಯ್ ರಾಜ್ ಈ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.