ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

SSLC Results 2026: 625 ಅಂಕ ಪಡೆದ ದಾವಣಗೆರೆಯ ಭರತ್‌ನ ಫಸ್ಟ್ ರಿಯಾಕ್ಷನ್ ಹೇಗಿತ್ತು?

SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು ರಾಜ್ಯದ ಏಳು ವಿದ್ಯಾರ್ಥಿಗಳು ಪಡೆದಿದ್ದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ ಕೂಡ ಒಬ್ಬರಾಗಿದ್ದಾರೆ. 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಮಿಂಚಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಯಾರು? ತನ್ನ ಓದಿನಲ್ಲಿ ಸವಾಲುಗಳೇನಿತ್ತು ಎಂದು ಖುದ್ದಾಗಿ ವಿದ್ಯಾರ್ಥಿ ಭರತ್ ಜಿ ಅವರೇ ವಿಶ್ವವಾಣಿ ಟಿವಿ ಜೊತೆ ಮಾತನಾಡಿದ್ದಾರೆ.

SSLC ಟಾಪರ್ ದಾವಣಗೆರೆಯ ಭರತ್‌

ದಾವಣಗೆರೆ,ಏ.23: ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತರದಿಂದ ಕಾಯುತ್ತಿದ್ದ ಎಸ್ ಎಸ್ ಎಲ್ ಸಿ‌ (SSLC Result) ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಜಿಲ್ಲಾವಾರು ಫಲಿತಾಂಶದ ಬಗ್ಗೆ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಈ SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕವನ್ನು ರಾಜ್ಯದ ಏಳು ವಿದ್ಯಾರ್ಥಿಗಳು ಪಡೆದಿದ್ದು ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಶ್ರೀ ವಿದ್ಯಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಭರತ್ ಜಿ ಕೂಡ ಒಬ್ಬರಾಗಿದ್ದಾರೆ. 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿ ಮಿಂಚಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಯಾರು? ತನ್ನ ಓದಿನಲ್ಲಿ ಸವಾಲುಗಳೇನಿತ್ತು ಎಂದು ಖುದ್ದಾಗಿ ವಿದ್ಯಾರ್ಥಿ ಭರತ್ ಜಿ ಅವರೇ ವಿಶ್ವವಾಣಿ ಟಿವಿ ಜೊತೆ ಮಾತನಾಡಿದ್ದಾರೆ.

SSLC ಟಾಪರ್ ದಾವಣಗೆರೆಯ ಭರತ್‌ ನ ಫಸ್ಟ್ ರಿಯಾಕ್ಷನ್:



ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆಯ ಬಾಲಕ ಭರತ್ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಶಾಲೆ, ಗ್ರಾಮ ಮತ್ತು ಜಿಲ್ಲೆಯಾದ್ಯಂತ ಆತನ ಸಾಧನೆಯನ್ನು ಶ್ಲಾಘಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಭರತ್ ಮನೆಯಲ್ಲಿ ಪೋಷಕರು ಬಹಳನೇ ಖುಷಿ ಪಟ್ಟಿದ್ದು ಈ ಸಾಧನೆಯನ್ನು ತನ್ನ ಶಿಕ್ಷಕರು ಹಾಗೂ ಪೋಷಕರಿಗೆ ಆರ್ಪಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Karnataka SSLC Results: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರೂ ಸ್ಟ್ರೆಚರ್‌ನಲ್ಲಿ ಮಲಗಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಗೆ ಉತ್ತಮ ಅಂಕ

ನಿರೀಕ್ಷೆಯಂತೆ 625 ಅಂಕ ಪಡೆದಿರುವುದಕ್ಕೆ ಖುಷಿಯಾಗಿದೆ. ನಮ್ಮ ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ‌ ಪಾಠ ಮಾಡುತ್ತಿದ್ದರು. ನನ್ನ ಇಂದಿನ ರಿಸಲ್ಟ್​ಗೆ ಶಾಲೆಯ ಎಲ್ಲಾ ಶಿಕ್ಷಕರೇ ಕಾರಣ. ಅಂದಿನ ಪಾಠ ಅಂದೇ ಓದುತ್ತಿದ್ದೆ, ಯಾವುದೇ ರೀತಿಯ ಟೆನ್ಷನ್ ಮಾಡಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ. ಯಾವುದೇ ಟ್ಯೂಷನ್ ಹೋಗದೆ ಶಾಲೆಯಲ್ಲೇ ಸ್ಪೇಷಲ್ ಕ್ಲಾಸ್ ಆಂಟೆಂಡ್ ಆಗುತ್ತಿದೆ. ಗಣಿತ ಸ್ವಲ್ಪ ಕಷ್ಟ ಅನಿಸಿದರೂ 625 ಅಂಕ ಬಂದಿದೆ ಎಂದು ಖುಷಿ ಪಟ್ಟರು

ಏಕಾಗ್ರತೆ ಇಟ್ಟು ಚೆನ್ನಾಗಿ ಓದಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಮುಂದೆ ಎಂಬಿಬಿಎಸ್ ಪಡೆದು ವೈದ್ಯನಾಗಬೇಕೆಂಬ ಕನಸನ್ನು ಹೊಂದಿದ್ದೇನೆ ಎಂದು ತಿಳಿಸಿದ್ದಾರೆ. ಸದ್ಯ ಪೋಷಕರು ಹಾಗೂ ಶಿಕ್ಷಕರ ನಿರೀಕ್ಷೆಗೂ ಮೀರಿ ಭರತ್ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ.