ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sujay Shastry: ʻರಿಷಬ್‌ ನಾನು ಕ್ಲಾಸ್‌ಮೇಟ್ಸ್‌ʼ; ರಾಜ್‌, ರಿಷಬ್‌, ರಕ್ಷಿತ್‌ ಕೆಮಿಸ್ಟ್ರಿ ಬಗ್ಗೆ ಬಾಯ್ಬಿಟ್ಟ ಸುಜಯ್ ಶಾಸ್ತ್ರಿ

Sujay Shastry: ಸುಜಯ್ ಶಾಸ್ತ್ರಿ ಅವರು ಹಾಸ್ಯ ಪಾತ್ರಗಳ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. . ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೀಗ ʼವಿಶ್ವವಾಣಿ ನಿರೂಪಕ ಸುಜಯ್‌ ರಾಜ್‌ ಚಿಟ್‌ ಚಾಟ್‌ ವೇಳೆ ರಾಜ್‌, ರಿಷಬ್‌, ರಕ್ಷಿತ್‌ ಕೆಮಿಸ್ಟ್ರಿ ಬಗ್ಗೆ ಮಾತನಾಡಿದ್ದಾರೆ.

ಸುಜಯ್‌ ಶಾಸ್ತ್ರೀ

ಸುಜಯ್ ಶಾಸ್ತ್ರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ ಇವರು 2017 ರಲ್ಲಿ ತೆರೆಕಂಡ ಎಮ.ಜಿ.ಶ್ರೀನಿ ನಿರ್ದೇಶನದ `ಶ್ರೀನಿವಾಸ ಕಲ್ಯಾಣ' ಮತ್ತು 2019 ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಿಜಿ',`ಬೆಲ್ ಬಾಟಮ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಹಲವಾರು ವಿವಾರಗಳನ್ನು ಹಂಚಿಕೊಂಡಿದ್ದಾರೆ. ನಾನು ರಿಷಬ್‌, ಪ್ರಮೋದ್‌ ಎಲ್ಲ ಒಂದೇ ಕಾಲೇಜಿನಲ್ಲಿ ಓದಿದ್ದು. ಹೀಗಾಗಿ ನನಗೂ ಓದಿನ ಕಡೆ ಗಮನ ಕಡಿಮೆ ಆಗಿ ರಂಗಭೂಮಿ ಕಡೆಗೆ ಒಲವು ಬಂತು. ನಾನು ರಾಜ್‌, ರಿಷಬ್‌ ಅವರನ್ನೂ ತುಂಬಾ ಇಷ್ಟ ಪಡ್ತೀನಿ. ರಕ್ಷಿತ್‌ ಶೆಟ್ಟಿ ಮೇಲೆಯೂ ವ್ಯಾಮೋಹ ಇದೆ. ಅವರೆಲ್ಲರೂ ಅವರ ಅವರ ಜಾಗದಲ್ಲಿ ಸೆಟಲ್‌ ಆಗಿದ್ದಾರೆ ಎಂದು ಹೇಳಿದರು. ರಾಜ್‌, ರಿಷಬ್‌, ರಕ್ಷಿತ್‌ ಕೆಮಿಸ್ಟ್ರಿ ಬಗ್ಗೆ ಹೇಳಿದ್ದೇನು?

Yashaswi Devadiga

View all posts by this author