ಬೆಂಗಳೂರು, ಮಾ. 24: ತುಲಾ ರಾಶಿಗೆ ಪರಾಭವ ಸಂವತ್ಸರವು ಬಹಳ ಶುಭದಾಯಕ ವರ್ಷ ಎಂದೇ ಹೇಳಬಹುದು. ಅಂದುಕೊಂಡ ಕೆಲಸ ಕಾರ್ಯಗಳು ನೆರವೇರಲಿದ್ದು, ಬಹಳಷ್ಟು ಲಾಭವನ್ನು ಗಳಿಸುತ್ತೀರಿ. ವ್ಯಾಪಾರ, ವ್ಯವಹಾರವನ್ನು ಮಾಡುವವರು ತಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಬಹುದು. ರಾಜಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗಲಿದೆ. ಜತೆಗೆ ಈ ಅವಧಿಯಲ್ಲಿ ನೀವು ಹೆಚ್ಚಿನ ಧನ ಸಂಪತ್ತನ್ನು ಗಳಿಸುವ ಸೂಚನೆ ಕೂಡ ಇದೆ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಈ ವರ್ಷ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಸಿಗುತ್ತವೆ ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.