ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಗಾದಿ ವರ್ಷ ಭವಿಷ್ಯ: ಮಕರ ರಾಶಿ ಮೇಲೆ ಏನು ಪರಿಣಾಮ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಾಭವ ನಾಮ ಸಂವತ್ಸರವು ಮಕರ ರಾಶಿಯವರಿಗೆ ಅಷ್ಟೊಂದು ಶುಭಕರವಾಗಿಲ್ಲ. ಆದರೆ ಮಧ್ಯೆ ಕೊಂಚ ನೆಮ್ಮದಿಯ ದಿನಗಳನ್ನು ಕೂಡ ಕಾಣಲು ಸಾಧ್ಯವಿದೆ ಎನ್ನುತ್ತಾರೆ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ. ಹೊಸ ಸಂವತ್ಸರವು ಮಕರ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳನ್ನು ಉಂಟು ಮಾಡಲಿದೆ? ಎನ್ನುವ ಕುರಿತು ಅವರು ನೀಡಿರುವ ಮಾಹಿತಿ ಇಲ್ಲಿದೆ.

ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ

ಬೆಂಗಳೂರು: ಪರಾಭವ ನಾಮ ಸಂವತ್ಸರದಲ್ಲಿ (Ugadi Year Prediction 2026) ಅತೀ ಕಡಿಮೆ ಅಂದರೆ ಕೇವಲ ಮೂರು ತಿಂಗಳ ಕಾಲ ಮಾತ್ರ ಮಕರ ರಾಶಿಯವರಿಗೆ (Capricorn) ಗುರು ಬಲ ಒಲಿಯಲಿದೆ. ಅದು ಜೂನ್ ನಿಂದ ಅಕ್ಟೋಬರ್ ವರೆಗೆ ಮಾತ್ರ. ಶನಿ ಮೂರನೇ ಮನೆಯಲ್ಲಿರುವುದರಿಂದ ಮಕರ ರಾಶಿಯವರು (Capricorn year Prediction) ಹೆಚ್ಚು ಮಾನಸಿಕ ಒತ್ತಡ ಅನುಭವಿಸಬೇಕಾಗುತ್ತದೆ. ಉದ್ಯೋಗ ಸಂಬಂಧಿತ ಒತ್ತಡಗಳು ಹೆಚ್ಚಾಗುವ ಸಾಧ್ಯತೆ ಇದೆ. ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯವಿದೆ. ಯಾರೊಂದಿಗೂ ಅನಾವಶ್ಯಕ ಕಲಹ ಮಾಡಿಕೊಳ್ಳಬೇಡಿ. ಈ ಸಂವತ್ಸರದಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಜೊತೆಗೆ ಅದೃಷ್ಟ ಕೈಕೊಡುವ ಸಾಧ್ಯತೆ ಇದೆ. ಹೀಗಾಗಿ ಪ್ರತಿಯೊಂದು ಕಾರ್ಯದಲ್ಲೂ ಎಚ್ಚರಿಕೆ ಬಹಳ ಮುಖ್ಯ. ತಾಯಿಯ ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಬೇಕು. ಆಸ್ತಿ ಕೈ ತಪ್ಪುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಕಾರ್ಯ ಮಾಡುವುದಾದರೂ ಸಮಯ ನೋಡಿ ಮಾಡುವುದು ಒಳ್ಳೆಯದು ಎನ್ನುತ್ತಾರೆ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ.

ವಿದ್ಯಾ ಇರ್ವತ್ತೂರು

View all posts by this author