ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Health: ಮಳೆಗಾಲದಲ್ಲಿ ಮಧುಮೇಹಿಗಳು ವಹಿಸಲೇಬೇಕಾದ ಎಚ್ಚರಿಕೆ ಏನು? ಇಲ್ಲಿದೆ ತಜ್ಞರ ಸಲಹೆ

ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರು ಮಳೆಗಾಲದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕು. ಸ್ವಲ್ಪ ನಿರ್ಲಕ್ಷವು ಅಪಾಯಕಾರಿಯಾಗಬಹುದು ಎನ್ನುತ್ತಾರೆ ಮಧುಮೇಹ ತಜ್ಞ ಡಾ. ಸುಮನ್. ಮಳೆಗಾಲದಲ್ಲಿ ಮಧುಮೇಹಿಗಳು ಯಾವ ರೀತಿಯ ಆಹಾರ ಸೇವಿಸಬೇಕು? ದಿನಚರಿ ಪಾಲಿಸಬೇಕು ಎಂಬುದರ ಕುರಿತು ಅವರು ನೀಡಿರುವ ಮಾಹಿತಿ ಇಲ್ಲಿದೆ.

ಡಾ. ಸುಮನ್

ಬೆಂಗಳೂರು: ವಾಕಿಂಗ್ ಮಾಡೋದು ಕಷ್ಟ, ಕಾಲಲ್ಲಿ ನೀರು ತುಂಬಿಕೊಳ್ಳುತ್ತದೆ, ಗಾಯಗಳಾಗುತ್ತವೆ...ಹೀಗೆ ಮಳೆಗಾಲದಲ್ಲಿ ಮಧುಮೇಹಿಗಳು ಸಾಮಾನ್ಯವಾಗಿ ಹೇಳಿಕೊಂಡು ಬರುವ ಆರೋಗ್ಯ (Health tips) ಸಮಸ್ಯೆಗಳು. ಆದರೆ ಇದನ್ನು ಬಹಳ ಎಚ್ಚರಿಕೆಯಿಂದ ಮನೆಯಲ್ಲೇ ನಿರ್ವಹಿಸಬಹುದು. ಇದಕ್ಕಾಗಿ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ ಎನ್ನುತ್ತಾರೆ ಮಧುಮೇಹ ತಜ್ಞ ಡಾ. ಸುಮನ್ (Dr. Suman). 'ವಿಶ್ವವಾಣಿ ಹೆಲ್ತ್' (Vishwavani Health) ಯುಟ್ಯೂಬ್‌ ಚಾನೆಲ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಮಳೆಗಾಲದಲ್ಲಿ ಮಧುಮೇಹಿಗಳು ನಿರಂತರವಾಗಿ ಶುಗರ್ ಲೆವೆಲ್, ಕಾಲುಗಳ ಪರಿಶೀಲನೆ ನಡೆಸಬೇಕು. ಸಣ್ಣ ಪುಟ್ಟ ಗಾಯಗಳನ್ನು ಕೂಡ ನಿರ್ಲಕ್ಷಿಸಬಾರದು ಎಂದಿದ್ದಾರೆ. ಕಾಲಿನ ಬೆರಳಿನ ಮಧ್ಯೆ ಸ್ವಚ್ಛ ಮತ್ತು ತೇವಾಂಶ ಇರದಂತೆ ನೋಡಿಕೊಳ್ಳಬೇಕು. ಹೊರಗೆ ಹೋಗಿ ವ್ಯಾಯಾಮ ಮಾಡಲು ಸಾಧ್ಯವಾಗದವರು ಮನೆಯೊಳಗೆ ಮಾಡಬಹುದಾದ ದೈಹಿಕ ಚಟುವಟಿಕೆಗಳನ್ನು ಮಾಡಿ. ಮಳೆಗಾಲವೆಂದು ನೀರು ಕಡಿಮೆ ಕುಡಿಯಬೇಡಿ. ಆದಷ್ಟು ನೀರನ್ನು ಕೂಡ ಸೇವಿಸಿ. ಹೊರಗಿನ ಆಹಾರ ಸೇವನೆ ಮಾಡದೇ ಇರುವುದು ಒಳ್ಳೆಯದು. ವಾಕ್ ಮಾಡುವಾಗ ಕಾಲನ್ನು ಸಂಪೂರ್ಣ ಮುಚ್ಚುವ ಪಾದರಕ್ಷೆಗಳನ್ನು ಬಳಸಿ. ಒದ್ದೆ, ನೈಲಾನ್ ಸಾಕ್ಸ್ ಬಳಸಬೇಡಿ. ಮನೆಯ ಹಿತ್ತಿಲಿನಲ್ಲೇ ಬೆಳೆದ ತರಕಾರಿ, ಹಣ್ಣುಗಳನ್ನು ಸೇವಿಸಿ. ಇದರಿಂದ ಮಳೆಗಾಲದಲ್ಲೂ ಮಧುಮೇಹಿಗಳು ಆರೋಗ್ಯವಾಗಿ ಇರಬಹುದು ಎನ್ನುತ್ತಾರೆ ಡಾ. ಸುಮನ್.

ವಿದ್ಯಾ ಇರ್ವತ್ತೂರು

View all posts by this author