ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Money: ಉದ್ಯೋಗ ಬದಲಾಯಿಸಿದಾಗ ಪಿಎಫ್ ಹಣ ವರ್ಗಾವಣೆ ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ಒಂದು ಕಂಪೆನಿಯಿಂದ ಇನ್ನೊಂದು ಕಂಪೆನಿಗೆ ಉದ್ಯೋಗ ಬದಲಿಸಿದಾಗ ಪಿಎಫ್ ಹಣ ವರ್ಗಾವಣೆ ಮಾಡಿಕೊಳ್ಳುವುದು ಈಗ ಮತ್ತಷ್ಟು ಸುಲಭವಾಗಿದೆ. ಇಪಿಎಫ್ ತನ್ನ ಸದಸ್ಯರ ಪೋರ್ಟಲ್ ಅನ್ನು ನವೀಕರಿಸಿದ್ದು, ಇದರಿಂದ ಪಿಎಫ್ ಖಾತೆ ಹಣವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸಲು ಎರಡು ಸುಲಭ ಮಾರ್ಗಗಳಿವೆ. ಅವುಗಳ ಕುರಿತು ಮಾಹಿತಿ ಇಲ್ಲಿದೆ.

ವಿಶ್ವವಾಣಿ ಮನಿ

ಬೆಂಗಳೂರು: ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಯಾಗಿರುವ ಪಿಎಫ್ (PF) ಹಣ ವರ್ಗಾವಣೆ (PF Money trancefor) ಪ್ರಕ್ರಿಯೆ ಈಗ ಸರಳವಾಗಿದೆ ಎಂದು ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ್ ಪ್ರಸಾದ್ ಮಾಹಿತಿ ನೀಡಿದರು. ಭವಿಷ್ಯ ನಿಧಿ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಅನ್ನು ಇತ್ತೀಚೆಗೆ ನವೀಕರಿಸಲಾಗಿದ್ದು ಇದು ಪಿಎಫ್ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸುವುದು, ಕಾಗದ ಪತ್ರಗಳನ್ನು ಕಡಿಮೆ ಮಾಡುವುದು, ಉದ್ಯೋಗಿಗಳು ಯಾವುದೇ ವಿಳಂಬವಿಲ್ಲದೆ ಪಿಎಫ್ ಹಣ ಒಂದೇ ಕಡೆ ಸೇರಿಸಲು ಸಹಾಯ ಮಾಡುತ್ತದೆ. ಪಿಎಫ್ ಹೊಂದಿರುವ ಉದ್ಯೋಗಿಗಳು ಉದ್ಯೋಗ ಬದಲಾಯಿಸಿದಾಗ ಪಿಎಫ್ ಹಣವನ್ನು ಒಂದೇ ಕಡೆ ಸೇರಿಸುವುದರಿಂದ ತುರ್ತು ಅಗತ್ಯಗಳಿಗೆ ಹೆಚ್ಚಿನ ಮೊತ್ತವನ್ನು ಪಡೆಯಬಹುದು ಎಂದು ಅವರು ಹೇಳಿದರು. ಇದಕ್ಕಾಗಿ ಯುನಿವರ್ಸಲ್ ಅಕೌಂಟ್ ನಂಬರ್ ಬಳಸಿ ವೆಬ್ ಪೋರ್ಟಲ್ ನಲ್ಲಿ ಲಾಗಿನ್ ಆಗಿ ರಿಕ್ವೆಸ್ಟ್ ಫಾರ್ ಟ್ರಾನ್ಸ್ ಫಾರ್ಮ್ ಅಕೌಂಟ್ ಗೆ ಹೋಗಿ ಪಿಎಫ್ ಖಾತೆ ಹಣವನ್ನು ವರ್ಗಾಯಿಸಿಕೊಳ್ಳಬಹುದಾಗಿದೆ ಅಥವಾ ಕ್ಲೈಮ್ ಲಿಂಕ್ ಕ್ಲಿಕ್ ಮಾಡಿ ಫಾರ್ಮ್ 13 ಅನ್ನು ತುಂಬಿಸಿ ಕೂಡ ಇದನ್ನು ಮಾಡಬಹುದಾಗಿದೆ ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author