ಬೆಂಗಳೂರು, ಏ. 21: ಹೆಚ್ಚಾಗಿ ಮುಖದಲ್ಲಿ ಮೊಡವೆ ಅಥವಾ ಟ್ಯಾನ್ ಆದಾಗ ಕೆಮಿಕಲ್ ಪ್ರಾಡಕ್ಟ್‌ಗಳ ಮೊರೆ ಹೊಗಿ ಸರ್ಕಸ್ ಮಾಡುತ್ತೇವೆ. ಆದರೆ ವಿವಿಧ ರೀತಿಯ ಐಸ್ ಕ್ಯೂಬ್ ಬಳಸಿ ಮನೆಯಲ್ಲೇ ಪರಿಹಾರ ಪಡೆದುಕೊಳ್ಳಬಹುದು. ಸೌತೆ ಕಾಯಿಯ ಸಿಪ್ಪೆ ಸುಳಿದು ಮಿಕ್ಸ್ ಜಾರಿನಲ್ಲಿ ಗ್ರೈನ್ ಮಾಡಿ ಐಸ್ ಟ್ರೇ ಒಳಗೆ ಇಟ್ಟರೆ ಸೌತೆ ಕಾಯಿ ಐಸ್ ಕ್ಯೂಬ್ ಸಿದ್ಧವಾಗುತ್ತದೆ, ಇದನ್ನು ಮುಖಕ್ಕೆ ಮಸಾಜ್ ಮಾಡಬಹುದು. ಇದೇ ರೀತಿ ವಿವಿಧ ಹಣ್ಣುಗಳನ್ನು ಬಳಕೆ ಮಾಡಿಯೂ ಐಸ್ ಕ್ಯೂಬ್ ಸಿದ್ಧವಾಗಿಟ್ಟು ಮುಖಕ್ಕೆ ಮಸಾಜ್ ಮಾಡುವ ಮೂಲಕ ಕಾಂತಿ ಹೆಚ್ಚಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.