ಮದುವೆ ಸಮಾರಂಭಗಳಲ್ಲಿ ಮದುಮಗಳು ಸೀರೆ, ಜ್ಯುವೆಲ್ಲರಿ ಹಾಕಿ ಸಿದ್ಧವಾದರೆ ಸಾಕಾಗುವುದಿಲ್ಲ. ಮದುವೆಗೆ (wedding) ಮುನ್ನವೇ ತಲೆಗೂದಲ ಆರೈಕೆ, ಮುಖದ ಆರೈಕೆ ಮಾಡಬೇಕಾಗುತ್ತದೆ. ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ದೀಪ ನಾಗೇಶ್ (Deepa Nagesh) ಅವರು ವಧುವಿನ ಮೇಕಪ್ (Bridal makeup) ತ್ವಚೆ ಮತ್ತು ತಲೆಗೂದಲಿನ ಆರೈಕೆಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿ ಹಾಗೂ ಸಲಹೆಗಳನ್ನು ನೀಡಿದ್ದಾರೆ. ಹಾಗಂತ ಮದುವೆ ನಿಶ್ಚಯವಾದ ಕೂಡಲೇ ಪಾರ್ಲರ್‌ಗಳಿಗೆ ಹೋಗಬೇಕಾಗಿಲ್ಲ. ಬದಲಿಗೆ ಮನೆಯಲ್ಲೇ ಸರಳ ವಿಧಾನಗಳನ್ನು ಪಾಲಿಸಬಹುದು. 3ಡಿ ಮೇಕಪ್ ಉತ್ತಮವೇ? ಎಚ್‌ಡಿ ಮೇಕಪ್ ಉತ್ತಮವೇ? ಎಂಬ ಬಗ್ಗೆ ತಿಳಿಸಿದ್ದಾರೆ. ದೇಹವನ್ನು ಹೈಡ್ರೇಟ್ ಆಗಿಡಲು ಹೆಚ್ಚೆಚ್ಚು ನೀರು ಸೇವಿಸಬೇಕು, ಹಸಿ ಹಾಲನ್ನು ಬೆಳಗ್ಗೆ ಮುಖಕ್ಕೆ ಹಚ್ಚಬೇಕು ಹೀಗೆ ಇತ್ಯಾದಿ ಅನೇಕ ಸಲಹೆಗಳನ್ನು ಅವರು ನೀಡಿದ್ದಾರೆ.