ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಧನು ರಾಶಿಯವರ ಪಾಲಿಗೆ ಚಂದ್ರ ಗ್ರಹ ಕಾಮಧೇನು; ಈ ವರ್ಷ ಏನೆಲ್ಲ ಬದಲಾಗಲಿದೆ?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮ: ಧನು ರಾಶಿಗೆ ಚಂದ್ರನು ಮರಣದ ಮನೆಯ ಯಜಮಾನ ಆಗಿದ್ದಾನೆ. ಹಾಗಾದರೆ ಧನು ರಾಶಿಯವರ ಮೇಲೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎನ್ನುವ ಪ್ರಶ್ನೆಗೆ ಭಾರತೀಯ ಜ್ಯೋತಿಷ ವಿಜ್ಞಾನ ಸಂಶೋಧಕ ಮಹಾಬಲ ಮೂರ್ತಿ ಕೊಡ್ಲೆಕೆರೆ ಉತ್ತರಿಸಿದ್ದಾರೆ.

ಮಹಾಬಲ ಮೂರ್ತಿ ಕೊಡ್ಲೆಕೆರೆ

ಬೆಂಗಳೂರು, ಏ. 16: ಧನು ರಾಶಿಗೆ ಚಂದ್ರನು ಅನಿರೀಕ್ಷಿತವಾದ ಬದಲಾವಣೆಯನ್ನು ಉಂಟು ಮಾಡಬಹುದು. ಅನೇಕ ರಹಸ್ಯವಾದ ಸಂಗತಿಗಳನ್ನು ಚಂದ್ರನು ಈ ರಾಶಿಗೆ ಒದಗಿಸಲಿದ್ದು ಆರ್ಥಿಕ ಸ್ಥಿರತೆ ಮತ್ತು ಕೆಲಸಕಾರ್ಯದಲ್ಲಿ ಯಶಸ್ಸು ತರಬಹುದು. ಚಂದ್ರ ಮರಣದ ಮನೆಯ ಯಜಮಾನ‌ ಆಗಿದ್ದರೂ ವಿಶೇಷವಾದ ಧನಾತ್ಮಕ ಬದಲಾವಣೆಯನ್ನೇ ತರುತ್ತಾನೆ. ಇತರ ಗ್ರಹಗಳಾದ ಗುರು, ಶುಕ್ರ, ಮಂಗಳನ‌ ಪ್ರಭಾವ ಚಂದ್ರನ ಮೇಲೆ ಪ್ರಭಾವ ಬೀರಿ ಅದು ಧನಾತ್ಮಕ ವಾಗಿಯೂ ಪರಿಣಮಿಸಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.