ಬೆಂಗಳೂರು, ಮಾ. 22: ಈ ವರ್ಷ ರಾಹು, ಕೇತುವಿನ ಪ್ರಭಾವ ಸಿಂಹ ರಾಶಿಗೆ ಹೆಚ್ಚಾಗಿಯೇ ಇರಲಿದ್ದು, ಗಣನೀಯ ಬದಲಾವಣೆ ಆಗಲಿದೆ. ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದರೂ ಅನಾವಶ್ಯಕ ಖರ್ಚುಗಳು ಜಾಸ್ತಿಯಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಯಾವುದೇ ಹೆಜ್ಜೆಯನ್ನು ಇಡುವುದು ಉತ್ತಮ. ಸುಖಾ ಸುಮ್ಮನೇ ಕೆಲವೊಂದು ಆರೋಪ ಹಾಗೂ ಸನ್ನಿವೇಶಗಳನ್ನು ನೀವು ಎದುರಿಸಬೇಕಾಗಿ ಬರಬಹುದು. ಕೆಲಸದ ಒತ್ತಡ, ಸಿಟ್ಟು , ಕೋಪ ಇತ್ಯಾದಿ ಸಮಸ್ಯೆಗಳು ಹೆಚ್ಚಾಗಬಹುದು. ಈ ವರ್ಷ ನಿಮಗೆ ಅಶುಭ ಫಲವೇ ಹೆಚ್ಚಾಗಿ ಇದ್ದು, ಶಿವನ ಆರಾಧನೆ ಮಾಡುವುದು ಒಳಿತು ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ತಿಳಿಸಿದ್ದಾರೆ.