ಬೆಂಗಳೂರು, ಏ. 3: ಜೀವನದಲ್ಲಿ ಕಷ್ಟಗಳು ಬರುವುದು ಸಾಮಾನ್ಯ. ಆದರೆ ನಮ್ಮ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಂಡಾಗ ಯಾವುದೇ ಸನ್ನಿವೇಶವನ್ನು ಎದುರಿಸಬಹುದು. ಸಕಾರಾತ್ಮಕ ಯೋಚನೆ ಅನ್ನೋದು ನಮ್ಮ ಜೀವನವನ್ನು ಬದಲಾಯಿಸುವ ಪ್ರಮುಖ ಹಂತ. ನಮ್ಮ ಖುಷಿಯಾದ ದಿನವನ್ನು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುವುದರಿಂದಲೂ ನಮ್ಮ ಆತಂಕ, ನೋವುಗಳಿಂದ ಹೊರ ಬರಬಹುದು. ದಿನ ನಿತ್ಯದಲ್ಲಿ ನಮಗೆ ಖುಷಿ ಕೊಟ್ಟ ವಿಚಾರಗಳು ಯಾವುದು ಎಂಬುದನ್ನು ನೆನಪಿಸುವ ಮೂಲಕ ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸಬಹುದು ಎಂದು ಪಾಸಿಟಿವ್ ಸೈಕಾಲಜಿಸ್ಟ್ ಡಾ. ನವೀನ್ ನೆಲ್ಲಂಗಲ ತಿಳಿಸಿದ್ದಾರೆ. ʼವಿಶ್ವವಾಣಿ ಹೆಲ್ತ್ʼ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಈ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.