ನವದೆಹಲಿ,ಎ.9: ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ? ಎನ್ನುವ ಗಾದೆ ಮಾತೊಂದು ಇದೆ. ಈ ಮಾತು ಮಕ್ಕಳ ವಿಚಾರದಲ್ಲಿ ಬಹಳ ಮುಖ್ಯವಾಗುತ್ತದೆ. ಮಕ್ಕಳಲ್ಲಿ ಸಣ್ಣ ವಯಸ್ಸಿ ನಿಂದಲೇ ಸರಿ - ತಪ್ಪು ತಿದ್ದಿದರೆ ದೊಡ್ಡವರಾದಾಗ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಇಲ್ಲೊಬ್ಬ 12 ವರ್ಷದ ಬಾಲಕ ತನ್ನ ತಾಯಿಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ (Viral News) ನಡೆದಿದೆ.
ಆಹಾರದ ವಿಚಾರಕ್ಕೆ ಸಂಬಂಧಿಸಿದಂತೆ 12 ವರ್ಷದ ಬಾಲಕನೊಬ್ಬ ತನ್ನ ತಾಯಿಯ ಮೇಲೆಯೇ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದಾನೆ. ಅತೀಯಾದ ತೂಕ ಹೊಂದಿದ ಬಾಲಕನೊಬ್ಬ ತನ್ನ ತಾಯಿ ಹೆಚ್ಚು ಆಹಾರ ನೀಡಲು ನಿರಾಕರಿಸಿದರೆಂದು ಆಕೆಯ ಮೇಲೆ ದೈಹಿಕವಾಗಿ ಆಕ್ರಮಣ ಕಾರಿಯಾಗಿ ವರ್ತಿಸುತ್ತಿರುವುದನ್ನು ಕಾಣಬಹುದು.
ವಿಡಿಯೋ ನೋಡಿ:
ಬಾಲಕನನು ತನಗೆ ತನಗೆ ಹೆಚ್ಚಿನ ಆಹಾರ ಬೇಕೆಂದು ಹಠ ಮಾಡಿದ್ದಾನೆ. ಆದರೆ ಆತನ ತಾಯಿ ಆರೋಗ್ಯದ ದೃಷ್ಟಿಯಿಂದ ಆಹಾರ ನೀಡಲು ನಿರಾಕರಿಸಿದ್ದಾಳೆ. ಇದಕ್ಕೆ ಬಾಲಕ ಆಕೆಯ ಮೇಲೆ ದೈಹಿಕವಾಗಿ ಆಕ್ರಮಣಕಾರಿಯಾಗಿ ವರ್ತಿಸಿದ್ದಾನೆ ಆಕ್ರೋಶಗೊಂಡ ಬಾಲಕ ತಾಯಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಈ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಕೆಲವರು ಆಘಾತ ವ್ಯಕ್ತಪಡಿಸಿ ಕಠಿಣ ಶಿಸ್ತಿಗೆ ಕರೆ ನೀಡಿದರೆ, ಇನ್ನೂ ಅನೇಕರು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.
ನೆಟ್ಟಿಗರು ಈ ಬಗ್ಗೆ ನಾನಾ ರೀತಿಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಈ ಮಗುವಿಗೆ ದ್ವೇಷವಲ್ಲ, ಸಹಾಯ ಬೇಕು... ಎಂದಿದ್ದಾರೆ. ಮತ್ತೊಬ್ಬರು ಬಾಲಕನ ಅತಿಯಾದ ತೂಕ ಮತ್ತು ಆತನ ವರ್ತನೆಯನ್ನು ನೋಡಿದರೆ ಆತನಿಗೆ ಮಾನಸಿಕ ಚಿಕಿತ್ಸೆ ಅಗತ್ಯವಿದೆ ಎಂದು ಬರೆದಿದ್ದಾರೆ.