ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಜಿಪ್‌ಲೈನ್‌ ಕ್ರೇಜ್‌ ನಿಮಗಿದ್ಯಾ? ಹಾಗಿದ್ರೆ ಹುಷಾರು! ಈ ಶಾಕಿಂಗ್‌ ವಿಡಿಯೊ ನೋಡಿ

ಮನಾಲಿಯಲ್ಲಿ ಜಿಪ್‌ಲೈನ್‌ ಮಾಡುತ್ತಿದ್ದ ಬಾಲಕಿ ಹಗ್ಗ ತುಂಡಾಗಿ ಬಿದ್ದಿರುವ ಘಟನೆ ವರದಿಯಾಗಿದೆ. ಹಗ್ಗ ತುಂಡಾಗಿ ಬಾಲಕಿ ಸುಮಾರು 30ಅಡಿ ಕಂದಕಕ್ಕೆ ಬಿದ್ದಿದ್ದಾಳೆ. ಈ ಭೀಕರ ಘಟನೆ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ನೋಡುಗರ ಆಘಾತ ವ್ಯಕ್ತಪಡಿಸಿದ್ದಾರೆ.

ಮನಾಲಿ: ಜಿಪ್‌ಲೈನ್‌, ಬಂಗೀ ಜಂಪ್‌ ಹೀಗೆ ಅಡ್ವೆಂಚರಸ್‌ ಚಟುವಟಿಕೆಗಳಲ್ಲಿ ಕೆಲವರಿಗೆ ಎಲ್ಲಿಲ್ಲದ ಆಸಕ್ತಿ ಇರುತ್ತದೆ. ಪ್ರಾಣ ಪಣಕ್ಕಿಟ್ಟು ಈ ಮೋಜಿನ ಆಟ ಬಹುತೇಕ ಯುವಕರ ಫೆವರಿಟ್‌ ಆಗಿರುತ್ತದೆ. ಆದರೆ ಗ್ರಹಚಾರ ಕೈ ಕೊಟ್ಟಾಗ ಇಂತಹ ಮೋಜಿನ ಆಟಗಳೇ ಪ್ರಾಣಕ್ಕೆ ಸಂಚಕಾರ ಆಗಬಹುದೆಂಬುದು ಬಹುತೇಕರಿಗೆ ತಿಳಿದಿಲ್ಲ. ಇದೀಗ ಅಂತಹದ್ದೇ ಒಂದು ಘಟನೆ ಮನಾಲಿಯಲ್ಲಿ ನಡೆದಿದೆ. ಜಿಪ್‌ಲೈನ್ ಹಗ್ಗ ತುಂಡಾಗಿ 30 ಅಡಿ ಆಳದ ಕಂದಕಕ್ಕೆ ಬಿದ್ದ ನಾಗ್ಪುರದ 12 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಳೆದ ವಾರ ಈ ಘಟನೆ ನಡೆದಿದ್ದು, ಆಕೆ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ದಾರುಣ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(viral video) ಆಗುತ್ತಿದೆ.



ಅಷ್ಟಕ್ಕೂ ಆಗಿದ್ದೇನು?

ಮೂಲಗಳ ಪ್ರಕಾರ, ತ್ರಿಶಾ ಬಿಜ್ವೆ ಎಂದು ಗುರುತಿಸಲಾದ ಬಾಲಕಿ ಮನಾಲಿಯಲ್ಲಿ ತನ್ನ ಕುಟುಂಬದೊಂದಿಗೆ ರಜೆ ಕಳೆಯುತ್ತಿದ್ದಳು. ಜಿಪ್‌ ಲೈನ್‌ ಬಗ್ಗೆ ಅಪಾರ ಕ್ರೇಜ್‌ ಹೊಂದಿದ್ದ ತ್ರಿಶಾ ಮನಾಲಿಯಲ್ಲಿ ಈ ಅಡ್ವೆಂಚರಸ್‌ ಆಟಕ್ಕೆ ಮುಂದಾಗಿದ್ದಾಳೆ. ಜಿಪ್‌ಲೈನ್‌ ಮಾಡ್ತಿದ್ದ ವೇಳೆ ಆಕೆ ಧರಿಸಿದ್ದ ಸರಂಜಾಮುಗೆ ಜೋಡಿಸಲಾದ ಹಗ್ಗ ತುಂಡಾಗಿ ಕೆಳಗೆ ಬಿದ್ದಿದ್ದಾಳೆ. ಜಿಪ್‌ಲೈನ್ ಅಪಘಾತದ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಗ್ಗ ತುಂಡಾಗಿ 12 ವರ್ಷದ ಬಾಲಕಿ ಕೆಳಗಿನ ಬಂಡೆಗಳ ಮೇಲೆ ಬಿದ್ದ ಭಯಾನಕ ಕ್ಷಣವನ್ನು ಸೆರೆಹಿಡಿಯಲಾಗಿದೆ. ಬಾಲಕಿಗೆ ಗಂಭೀರ, ಕೆಲವು ದಿನಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಆಕೆಯ ತಂದೆ ಪ್ರಫುಲ್ ಬಿಜ್ವೆ ಪಿಟಿಐಗೆ ದೃಢಪಡಿಸಿದ್ದಾರೆ. ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ದೃಢಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್‌; ಇರಾನ್‌-ಇಸ್ರೇಲ್‌ ಡೆಡ್ಲಿ ಅಟ್ಯಾಕ್‌ ವಿಡಿಯೊ ವೈರಲ್‌