ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್‌; ಇರಾನ್‌-ಇಸ್ರೇಲ್‌ ಡೆಡ್ಲಿ ಅಟ್ಯಾಕ್‌ ವಿಡಿಯೊ ವೈರಲ್‌

ಇಸ್ರೇಲ್ ಪಡೆಗಳು ಇರಾನ್‌ನಾದ್ಯಂತ ನಾಗರಿಕ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡಿದ ನಂತರ, ಇರಾನ್ ಬಂದರು ನಗರ ಹೈಫಾ ಸೇರಿದಂತೆ ಇಸ್ರೇಲ್‌ನಾದ್ಯಂತದ ಗುರಿಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ಭಾನುವಾರ ಮುಂಜಾನೆ, ಇಸ್ರೇಲ್‌ನ ಮಿಲಿಟರಿ ಟೆಹ್ರಾನ್‌ನಲ್ಲಿರುವ ಇರಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮೇಲೆಯೂ ಡೆಡ್ಲಿಅಟ್ಯಾಕ್‌ ನಡೆಸಿದೆ ಎಂದು ಹೇಳಿಕೊಂಡಿದೆ.

ಇರಾನ್‌-ಇಸ್ರೇಲ್‌ ಪರಸ್ಪರ ಕ್ಷಿಪಣಿ ದಾಳಿ

Profile Rakshita Karkera Jun 15, 2025 10:23 AM

ಟೆಲ್‌ ಅವಿವ್‌: ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ ದಿನೇ ದಿನೇ ಉಗ್ರ ಸ್ವರೂಪ(Israel-Iran Conflict) ಪಡೆದುಕೊಳ್ಳುತ್ತಿದೆ. ಭಾನುವಾರ ರಾತ್ರಿ ಉಭಯ ರಾಷ್ಟ್ರಗಳು ಮತ್ತೆ ಪರಸ್ಪರ ಕ್ಷಿಪಣಿ ದಾಳಿ ನಡೆಸಿವೆ. ಇದು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಇಸ್ರೇಲ್ ಪಡೆಗಳು ಇರಾನ್‌ನಾದ್ಯಂತ ನಾಗರಿಕ ಮತ್ತು ಇಂಧನ ಮೂಲಸೌಕರ್ಯಗಳ ಮೇಲೆ ಬಾಂಬ್ ದಾಳಿ ಮಾಡಿದ ನಂತರ, ಇರಾನ್ ಬಂದರು ನಗರ ಹೈಫಾ ಸೇರಿದಂತೆ ಇಸ್ರೇಲ್‌ನಾದ್ಯಂತದ ಗುರಿಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ಭಾನುವಾರ ಮುಂಜಾನೆ, ಇಸ್ರೇಲ್‌ನ ಮಿಲಿಟರಿ ಟೆಹ್ರಾನ್‌ನಲ್ಲಿರುವ ಇರಾನ್ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಮೇಲೆಯೂ ಡೆಡ್ಲಿಅಟ್ಯಾಕ್‌ ನಡೆಸಿದೆ ಎಂದು ಹೇಳಿಕೊಂಡಿದೆ.

ಟೆಹ್ರಾನ್ನಲ್ಲಿ ಇಸ್ರೇಲಿ ಕ್ಷಿಪಣಿಯೊಂದು ವಸತಿ ಕಟ್ಟಡಕ್ಕೆ ಅಪ್ಪಳಿಸಿ 29 ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಇಸ್ರೇಲ್ನ ಮನೆಯೊಂದರ ಬಳಿ ಈ ಹಿಂದೆ ನಡೆದ ಪ್ರತ್ಯೇಕ ದಾಳಿಯಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.



ಇದಕ್ಕೆ ಪ್ರತಿಕ್ರಿಯೆಯಾಗಿ, ಟೆಹ್ರಾನ್ ಇಸ್ರೇಲ್ ಮೇಲೆ ಹೊಸ ಕ್ಷಿಪಣಿಗಳನ್ನು ಬಿಚ್ಚಿಟ್ಟಿತು. ಗೆಲಿಲಿ ಪ್ರದೇಶದ ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಇರಾನಿನ ಕ್ಷಿಪಣಿಗಳು ನಡೆಸಿದ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ತುರ್ತು ಅಧಿಕಾರಿಗಳು ತಿಳಿಸಿದ್ದಾರೆ. ಟೆಹ್ರಾನ್ ನಲ್ಲಿ ವಸತಿ ಸಮುಚ್ಚಯದ ಮೇಲೆ ನಡೆದ ದಾಳಿಯಲ್ಲಿ 29 ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಿಗ್ಗೆ, 200 ಇಸ್ರೇಲಿ ಯುದ್ಧ ವಿಮಾನಗಳು ಇರಾನ್ನ 4 ಪರಮಾಣು ಮತ್ತು 2 ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದವು. ಇದರಲ್ಲಿ ಅನೇಕ ಜನರು ಸಾವನ್ನಪ್ಪಿದರು. ನೂರಾರು ಜನರು ಗಾಯಗೊಂಡರು. ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ 6 ಇರಾನಿನ ಪರಮಾಣು ವಿಜ್ಞಾನಿಗಳು ಮತ್ತು 4 ಉನ್ನತ ಮಿಲಿಟರಿ ಕಮಾಂಡರ್ಗಳು ಸೇರಿದಂತೆ 20 ಮಿಲಿಟರಿ ಅಧಿಕಾರಿಗಳು ಸೇರಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: 1981ರಲ್ಲಿ ಬಾಗ್ದಾದ್, 2025ರಲ್ಲಿ ಟೆಹರಾನ್: ಇಸ್ರೇಲ್‌ನ ಒಂದೇ ರೀತಿಯ ಕಾರ್ಯಾಚರಣೆ ಹಿಂದಿನ ಸಂದೇಶವೇನು?

ಇಸ್ರೇಲ್ ದಾಳಿಗೆ ಪ್ರತಿಕ್ರಿಯೆಯಾಗಿ, ಇರಾನ್ ಮಧ್ಯಾಹ್ನ ಪ್ರತಿದಾಳಿ ನಡೆಸಿ 100 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿತು. ಇಸ್ರೇಲ್ ಸೇನೆ (IDF) ಎಲ್ಲಾ ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದೆ. ಇಲ್ಲಿಯವರೆಗೆ ಒಂದೇ ಒಂದು ಡ್ರೋನ್ ಇಸ್ರೇಲ್ ಗಡಿಯನ್ನು ತಲುಪಿಲ್ಲ. ಆದರೆ ಶುಕ್ರವಾರ ಸಂಜೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ರಾಜಧಾನಿ ಟೆಲ್ ಅವಿವ್ನಲ್ಲಿ ದೊಡ್ಡ ಹಾನಿ ಸಂಭವಿಸಿದೆ ಎಂದು ವರದಿಗಳಿವೆ.