ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2 ವರ್ಷದ ಮಗುವಿನ ಪ್ರೀ-ಸ್ಕೂಲ್‌ಗೆ 1.5 ಲಕ್ಷ ರೂಪಾಯಿ ಪ್ರವೇಶ ಶುಲ್ಕ: ಖಾಸಗಿ ಶಾಲೆಗಳ ದುಬಾರಿ ರೇಟ್‌ ಕೇಳಿ ನೆಟ್ಟಿಗರು ಕಿಡಿ

Viral News: ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವ ಬಗ್ಗೆ ಅನೇಕ ದೂರುಗಳು ಕೇಳಿಬರುತ್ತಿವೆ. ಇದೀಗ ಸಣ್ಣ ವಯಸ್ಸಿನ ಮಕ್ಕಳಿಗೂ ಶಿಕ್ಷಣ ಇಷ್ಟೊಂದು ದುಬಾರಿಯೇ? ಎಂದು ಪ್ರಶ್ನಿಸುವಂತಹ ಮತ್ತೊಂದು ಘಟನೆ ವರದಿಯಾಗಿದೆ. ಗುಜರಾತ್‌ನ ಅಹಮದಾಬಾದ್‌ ಉದ್ಯಮಿ ಪ್ರೀತೇಶ್ ಲಖಾನಿ ತಮ್ಮ ಎರಡು ವರ್ಷದ ಮಗುವಿನ ಪ್ರೀ-ಸ್ಕೂಲ್‌ಗೆ 1.5 ಲಕ್ಷ ರೂಪಾಯಿ ಡೊನೇಷನ್ ಕೇಳಿದ್ದಾರೆ ಎನ್ನುವ ವಿಚಾರ ಬಹಿರಂಗಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಗಾಂಧಿನಗರ, ಸೆ. 24: ಇತ್ತೀಚೆಗೆ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಸೂಲಿ ಮಾಡುವ ಬಗ್ಗೆ ಅನೇಕ ದೂರುಗಳು ಕೇಳಿಬರುತ್ತಿವೆ. ಇದೀಗ ಸಣ್ಣ ವಯಸ್ಸಿನ ಮಕ್ಕಳ ಶಿಕ್ಷಣವೂ ಇಷ್ಟೊಂದು ದುಬಾರಿಯೇ? ಎಂದು ಪ್ರಶ್ನಿಸುವಂತಹ ಮತ್ತೊಂದು ಘಟನೆ (Viral News) ವರದಿಯಾಗಿದೆ. ಗುಜರಾತ್‌ನ ಅಹಮದಾಬಾದ್‌ನ ಉದ್ಯಮಿ ಪ್ರೀತೇಶ್ ಲಖಾನಿ ತಮ್ಮ ಎರಡು ವರ್ಷದ ಮಗುವಿನ ಪ್ರೀ-ಸ್ಕೂಲ್‌ಗೆ ಆಡ್ಮಿಷನ್ ಮಾಡಲು ತೆರಳಿದ್ದರು. ಆಗ ಶಾಲಾ ಆಡಳಿತ ಮಂಡಳಿಯು 1.5 ಲಕ್ಷ ರೂಪಾಯಿ ಡೊನೇಷನ್ ಕೇಳಿದೆ. ಖಾಸಗಿ ಶಾಲೆಗಳಲ್ಲಿ ದುಬಾರಿ ಹಣ ವಸೂಲಿ ಮಾಡುವ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್ ಮೂಲದ ಉದ್ಯಮಿ ತಮ್ಮ ಮಗಳನ್ನು ಪ್ರಿಸ್ಕೂಲ್‌ಗೆ ಸೇರಿಸಲು ಹೋದಾಗ ಎದುರಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಬೇರೆ ಬೇರೆ ಶಾಲೆ  ಬದಲಾಯಿಸುವ ಬದಲು ಮಗುವಿಗೆ ಒಂದೇ ಕಡೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗುವಂತಹ ಶಾಲೆಯನ್ನು ಹುಡುಕುವುದು ಅವರ ಉದ್ದೇಶವಾಗಿತ್ತು. ಆದರೆ ಇಲ್ಲಿಯ ಶುಲ್ಕ ವೆಚ್ಚ ನೋಡಿ ಅವರೇ ದಂಗಾಗಿ ಹೋಗಿದ್ದಾರೆ.

ವೈರಲ್‌ ಪೋಸ್ಟ್‌:



ಈ ಬಗ್ಗೆ ಪ್ರೀತೇಶ್ ಲಖಾನಿ ಪೋಸ್ಟ್ ಶೇರ್ ಮಾಡಿದ್ದು, ಸಣ್ಣ ಮಕ್ಕಳ ಪ್ರೀ-ಸ್ಕೂಲ್ ಶಿಕ್ಷಣ ಇಷ್ಟೊಂದು ದುಬಾರಿಯಾಗಬಾರದು. ಪ್ರವೇಶಾತಿಗಾಗಿ 1.5 ಲಕ್ಷ ರೂಪಾಯಿ ಡೊನೇಷನ್ ಕೇಳಲಾಗಿದ್ದು, ಇದರ ಜತೆಗೆ ಮೊದಲ ವರ್ಷದ ಶಾಲಾ ಶುಲ್ಕವೇ ಪ್ರತ್ಯೇಕವಾಗಿ 1.25 ಲಕ್ಷ ರೂಪಾಯಿ ಇದೆ ಎಂದು ಅವರು ತಿಳಿಸಿದ್ದಾರೆ.

ಸ್ಕೂಟರ್ ಸವಾರರನ್ನು ಉಳಿಸಲು ಹೋಗಿ ಬಸ್ ಪಲ್ಟಿ

ಆ ಶಾಲೆಯಲ್ಲಿ ಓದುವ ಮತ್ತೊಬ್ಬ ಪೋಷಕರೊಂದಿಗೆ ಮಾತನಾಡಿದ್ದಾಗಿ ಅವರು ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಪ್ರವೇಶಕ್ಕೆ ದೇಣಿಗೆ ಕಡ್ಡಾಯ. ಒಂದು ವೇಳೆ ನೀಡದಿದ್ದರೆ 2 ವರ್ಷದ ಮಗು ಮತ್ತು ಪೋಷಕರಿಗೆ 'ಅಸೆಸ್‌ಮೆಂಟ್' ಎಕ್ಸಮ್ ನಡೆಸಿ ಅದರಲ್ಲಿ ಫೇಲ್ ಮಾಡಿ ಮತ್ತಷ್ಟು ಹಣ ಪೀಕುತ್ತಾರೆ ಎಂದರು.

ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಒಬ್ಬರು, ​ʼʼಸಣ್ಣ ನಗರಗಳಲ್ಲೂ ದುಬಾರಿ ಲಕ್ಷದವರೆಗೆ ಡೊನೇಷನ್ ಕೇಳಲಾಗುತ್ತಿದೆ. ನಿಜಕ್ಕೂ ಬೇಸರದ ಸಂಗತಿʼʼ ಎಂದು ಕಾಮೆಂಟ್ ಮಾಡಿದ್ದಾರೆ.‌ ಮತ್ತೊಬ್ಬರು, ʼʼ2 ವರ್ಷದ ಮಕ್ಕಳು ಮನೆಯಲ್ಲಿ ಆಟ ವಾಡುತ್ತಾ ಖುಷಿಯಾಗಿರಬೇಕೆ ಹೊರತು ಬೆಂಚ್ ಮೇಲೆ ಕುಳಿತು ಪರೀಕ್ಷೆ ಎದುರಿಸಬಾರದುʼʼ ಎಂದು ಬರೆದಿದ್ದಾರೆ.