ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಒಂದೇ ಸ್ಕೂಟರ್‌ನಲ್ಲಿ ಐವರು ಯುವಕರ ಸ್ಟಂಟ್- ವಿಡಿಯೊ ನೋಡಿದ್ರೆ ಶಾಕ್‌ ಆಗುತ್ತೆ!

Dangerous stunt: ಒಂದೇ ಸ್ಕೂಟರ್‌ನಲ್ಲಿ ಐವರು ಯುವಕರು ಸ್ಟಂಟ್ ಪ್ರದರ್ಶಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಛತ್ತೀಸ್‍ಗಢದ ಬಿಜಾಪುರ್‌ನಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ಮಂದಿ ಸ್ಕೂಟರ್ ಚಲಾಯಿಸುತ್ತಿದ್ದರೆ, ಮತ್ತೊಬ್ಬ ಅವರ ಮೇಲೆ ನೇತಾಡಿದ್ದಾನೆ.

ಬಿಜಾಪುರ್: ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಿಸಲಾಗುತ್ತದೆ. ವಾಹನಗಳಿರುವುದು ರಸ್ತೆಯಲ್ಲಿ ಸ್ಟಂಟ್ ಮಾಡುವುದಕ್ಕಾಗಿಯಲ್ಲ. ಬದಲಾಗಿ ನಮಗೆ ಯಾವುದೇ ಸ್ಥಳಕ್ಕೆ ವೇಗವಾಗಿ ತಲುಪಲು ವಾಹನಗಳು ಸಹಾಯಕವಾಗಿದೆ. ಆದರೆ, ಕೆಲವು ದುಷ್ಕರ್ಮಿಗಳು ತಮ್ಮನ್ನು ತಾವು ಅಪಾಯಕ್ಕೆ ಸಿಲುಕಿಸುವುದಲ್ಲದೆ, ಬೇರೆಯವರನ್ನೂ ಕೂಡ ಅಪಾಯಕ್ಕೆ ಸಿಲುಕಿಸುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಐವರು ಯುವಕರು ಸ್ಕೂಟರ್‌ನಲ್ಲಿ (Scooter) ಸ್ಟಂಟ್ ಮಾಡಿರುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.

ಛತ್ತೀಸ್‍ಗಢದ ಬಿಜಾಪುರ್‌ನಲ್ಲಿ ಈ ಘಟನೆ ನಡೆದಿದೆ. ಐವರು ಯುವಕರು ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ್ದಾರೆ. ಈ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಕಿಡಿಕಾರಿದ್ಗಾರೆ. ಇಂತಹ ದುರ್ವರ್ತನೆ ತೋರಿದ ಯುವಕರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ವಿಡಿಯೊದಲ್ಲಿ, ನಾಲ್ಕು ಮಂದಿ ಒಂದೇ ಸ್ಕೂಟರ್‌ನಲ್ಲಿ ಕುಳಿತಿದ್ದರೆ ಇನ್ನೊಬ್ಬ ಅವರ ಹೆಗಲ ಮೇಲೆ ಮಲಗಿರುವ ರೀತಿ ನೇತಾಡಿದ್ದಾನೆ. ನಡು ರಸ್ತೆಯಲ್ಲೇ ಈ ರೀತಿ ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿರುವುದು ಅವರ ಜೀವಕ್ಕೆ ಮಾರಕವಾಗಿದೆ. ಅಷ್ಟೇ ಅಲ್ಲ, ಯಾರೊಬ್ಬರೂ ಹೆಲ್ಮೆಟ್ ಅನ್ನು ಕೂಡ ಧರಿಸಿಲ್ಲ. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದ ಒಬ್ಬ ವ್ಯಕ್ತಿ ವಿಡಿಯೊ ಚಿತ್ರೀಕರಣ ಮಾಡಿದ್ದು, ಸ್ಟಂಟ್ ಚೆನ್ನಾಗಿದೆ, ಒಳ್ಳೆಯದಾಗಲಿ ಎಂದು ಹೇಳಿದ್ದಾನೆ. ಇದಕ್ಕೆ ಈ ಯುವಕರು ಧನ್ಯವಾದ ತಿಳಿಸಿದ್ದಾರೆ.

ವಿಡಿಯೊ ವೀಕ್ಷಿಸಿ:



ವಿಡಿಯೊ ಚಿತ್ರೀಕರಣ ಮಾಡುವಾಗ ಸ್ಕೂಟರ್ ಚಲಾಯಿಸುತ್ತಿರುವ ತನ್ನ ಮುಖವನ್ನು ಕೈಯಿಂದ ಮುಚ್ಚಿಕೊಂಡಿದ್ದಾನೆ. ಸ್ಟಂಟ್ ಚೆನ್ನಾಗಿದೆ ಎಂದು ಹೇಳಿದಾಗ ಧನ್ಯವಾದ ಹೇಳುತ್ತಾ ಮುಂದೆ ಸಾಗಿದ್ದಾನೆ. ಈ ಘಟನೆಯು ಬಿಜಾಪುರ್ ನಗರದ ಹಳೆ ಪೆಟ್ರೋಲ್ ಪಂಪ್‍ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವ್ಯಾಪಕ ವೈರಲ್ ಆಗಿದೆ. ಸಾಕಷ್ಟು ಮಂದಿ ಇದಕ್ಕೆ ಟೀಕೆ ವ್ಯಕ್ಯಪಡಿಸಿದ್ದು, ಇಂಥವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಕಾನೂನಿನ ಬಗ್ಗೆ ಭಯವಿಲ್ಲದಿದ್ದರೆ, ಜನರು ಎಂತಹ ಕೃತ್ಯಗಳನ್ನು ಕೂಡ ಮಾಡಲು ಭಯಪಡಲ್ಲ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜಾಪುರ್ ಪೊಲೀಸರು, ಸ್ಟಂಟ್ ಮಾಡಿರುವ ನಾಲ್ಕು ಮಂದಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Viral Video: ಛೇ... ಇವೆರೆಂಥಾ ಮನಷ್ಯರು! ಗಾಯಗೊಂಡ ನವಿಲನ್ನು ರಕ್ಷಿಸುವ ಬದಲು ಗರಿಗಳನ್ನು ಕಿತ್ತ ಜನ