ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೋಷಕರ ಬೇಜವಾಬ್ದಾರಿಯ ಪರಮಾವಧಿ: ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ

Viral Video: ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಲು ಎಷ್ಟೇ ಕ್ರಮ ಕೈಗೊಂಡರೂ ಹಲವಾರು ಇದನ್ನು ಗಾಳಿಗೆ ತೂರಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಒಂದೇ ಸ್ಕೂಟರ್ ನಲ್ಲಿ ಆರು ಮಕ್ಕಳು ಪ್ರಯಾಣ ಮಾಡಿದ್ದಾರೆ. ಈ ಆಘಾತಕಾರಿ ದೃಶ್ಯವು ಬೆಳಿಗ್ಗೆ 10:45 ರ ಸುಮಾರಿಗೆ ಪಾದರಾಯನಪುರ ಮುಖ್ಯ ರಸ್ತೆಯಲ್ಲಿ ಗೋರಿಪಾಳ್ಯ ಬಳಿ, ಟೋಟಲ್ ಎಂಜಿನಿಯರ್ ಆಟೋ ಗ್ಯಾಸ್ ಎದುರು ಸಂಭವಿಸಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ..

ಒಂದೇ ಸ್ಕೂಟರ್‌ನಲ್ಲಿ 6 ಮಕ್ಕಳ ಪ್ರಯಾಣ

ಬೆಂಗಳೂರು, ಏ. 27: ಪ್ರತಿ ವರ್ಷ ಸಾವಿರಾರು ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸಲು ಎಷ್ಟೇ ಕ್ರಮ ಕೈಗೊಂಡರೂ ಹಲವರು ಇದನ್ನು ಗಾಳಿಗೆ ತೂರಿ ನಿಯಮ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನಲ್ಲಿ ಒಂದೇ ಸ್ಕೂಟರ್‌ನಲ್ಲಿ 6 ಚಿಕ್ಕ ಮಕ್ಕಳು ಪ್ರಯಾಣಿಸಿದ್ದಾರೆ. ಅದೂ 10-12 ವರ್ಷದೊಳಗಿನ ಮಕ್ಕಳು. ಈ ಆಘಾತಕಾರಿ ದೃಶ್ಯವು ಬೆಳಗ್ಗೆ 10:45ರ ಸುಮಾರಿಗೆ ಪಾದರಾಯನಪುರ ಮುಖ್ಯ ರಸ್ತೆಯ ಗೋರಿಪಾಳ್ಯ ಬಳಿ, ಟೋಟಲ್ ಎಂಜಿನಿಯರ್ ಆಟೋ ಗ್ಯಾಸ್ ಎದುರು ಕಂಡು ಬಂದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗಿದೆ.

ಆರು ಚಿಕ್ಕ ಮಕ್ಕಳು ಒಂದೇ ಸ್ಕೂಟರ್‌ನಲ್ಲಿ ಸವಾರಿ ಮಾಡಿದ್ದಾರೆ. 10 ವರ್ಷದೊಳಗಿನ ಚಿಕ್ಕ ಹುಡುಗ ಸ್ಕೂಟರ್ ಚಲಾಯಿಸಿದ್ದಾನೆ. ಸುಮಾರು 10ರಿಂದ 12 ವರ್ಷದೊಳಗಿನ ಆರು ಮಂದಿ ಮಕ್ಕಳು KA05 JZ9065 ನೋಂದಣಿ ಸಂಖ್ಯೆಯ ಸ್ಕೂಟರ್‌ನಲ್ಲಿ ಹೆಲ್ಮೆಟ್ ಹಾಕ ಪಯಣಿಸಿದ್ದು, ಕಳವಳ ವ್ಯಕ್ತವಾಗಿದೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಬೆಂಗಳೂರು ಸಂಚಾರ ಪೊಲೀಸ್ ಮತ್ತು ನಗರ ಪೊಲೀಸರನ್ನು ಟ್ಯಾಗ್ ಮಾಡಿ ಈ ವಿಡಿಯೊ ಶೇರ್ ಮಾಡಲಾಗಿದೆ. ಸಿಲಿಕಾನ್ ಸಿಟಿ ಅಂದಾಗ ಅಲ್ಲಿ ಕಿಕ್ಕಿರಿದ ವಾಹನಗಳು ಸಾಲು ಇದ್ದೇ ಇರುತ್ತದೆ. ಹೀಗಿದ್ದರೂ ಆರು ಮಕ್ಕಳು ಸ್ಕೂಟರ್‌ನಲ್ಲಿ ತೆರಳಿದ್ದಾರೆ. ಈ ವಿಡಿಯೊ ನೋಡಿದ ಅನೇಕರು ಪೋಷಕರ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು?

ಒಬ್ಬ ಸಣ್ಣ ಬಾಲಕನು ಸ್ಕೂಟರ್‌ನ ಹ್ಯಾಂಡಲ್ ಹಿಡಿದು ಪ್ರಯಾಣ ಮಾಡುತ್ತಿದ್ದರೆ ಉಳಿದ ಐವರು ಆತನ ಹಿಂದೆ ಕುಳಿತಿದ್ದಾರೆ. ಹೆಲ್ಮೆಟ್ ಧರಿಸದೆ ಪ್ರಯಾಣಿಸಿದ್ದಾರೆ."ಪೋಷಕರನ್ನು ತಕ್ಷಣ ಬಂಧಿಸಿ" ಎಂದು ಈ ದೃಶ್ಯ ನೋಡಿದ ಅನೇಕರು ಆಗ್ರಹಿಸಿದ್ದಾರೆ.

ಪ್ರತ್ಯಕ್ಷ ದರ್ಶಿಯೊಬ್ಬರು ಈ ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಪೋಷಕರ ಕ್ರಿಮಿನಲ್ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಮೋಟಾರು ವಾಹನ ಕಾಯ್ದೆ ಮತ್ತು ಬಿಎನ್‌ಎಸ್ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಬಳಿ ಆಗ್ರಹಿಸಿದರು. ಬೆಂಗಳೂರಿನಲ್ಲಿ ಈಗಾಗಲೇ ಹೆಚ್ಚಿರುವ ದ್ವಿಚಕ್ರ ವಾಹನಗಳು ಅಪಘಾತಗಳಿಗೆ ಕಾರಣವಾಗುತ್ತಿದ್ದು, ಇಂತಹ ಘಟನೆ ಮತ್ತಷ್ಟು ಕಳವಳ ಉಂಟು ಮಾಡುತ್ತದೆ ಎಂದು ರಸ್ತೆ ಸುರಕ್ಷತಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.