ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಶ್ವ ದಾಖಲೆ ಬರೆದ 7 ವರ್ಷದ ಅಸ್ಸಾಂ ಬಾಲಕಿ: ಮುಂಬೈ ಸಮುದ್ರದಲ್ಲಿ 13 ಕಿ.ಮೀ. ಈಜಿ ಸಾಧನೆ

Viral Video: 7 ವರ್ಷದ ಅಸ್ಸಾಂ ಬಾಲಕಿ ಇತಿಹಾಸ ನಿರ್ಮಿಸಿದ್ದು, ಐಕಾನಿಕ್ 13 ಕಿಲೋ ಮೀಟರ್ ಮುಂಬೈ ಸಮುದ್ರ ಮಾರ್ಗವನ್ನು ಕ್ರಮಿಸಿದ ಅತ್ಯಂತ ಕಿರಿಯ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಎಲಿಫೆಂಟಾ ದ್ವೀಪದಿಂದ ಗೇಟ್‌ವೇ ಆಫ್ ಇಂಡಿಯಾವರೆಗಿನ ಸುಮಾರು 13 ಕಿಲೋ ಮೀಟರ್ ದೂರದ ಸಮುದ್ರ ಮಾರ್ಗವನ್ನು‌ ಈಜಿದ ವಿಶ್ವದ ಮೊದಲ ಬಾಲಕಿ ಎನಿಸಿಕೊಂಡಿದ್ದಾಳೆ.

ವಿಶ್ವ ದಾಖಲೆ ಬರೆದ 7 ವರ್ಷದ ಅಸ್ಸಾಂ ಬಾಲಕಿ

ಮುಂಬೈ, ಫೆ. 14: ಸಾಧನೆಗೆ ಯಾವುದೇ ವಯಸ್ಸಿಲ್ಲ. ಶ್ರಮ ಪಟ್ಟರೆ ಯಾವುದು ಅಸಾಧ್ಯ ಅಲ್ಲ ಅನ್ನೋದನ್ನು ಈ ಪುಟ್ಟ ಬಾಲಕಿಯೇ ತೋರಿಸಿಕೊಟ್ಟಿದ್ದಾಳೆ. 7 ವರ್ಷದ ಅಸ್ಸಾಂ ಬಾಲಕಿ ಇತಿಹಾಸ ನಿರ್ಮಿಸಿದ್ದು, ಐಕಾನಿಕ್ 13 ಕಿಲೋ ಮೀಟರ್ ಮುಂಬೈ ಸಮುದ್ರ ಮಾರ್ಗವನ್ನು ಕ್ರಮಿಸಿದ ಅತ್ಯಂತ ಕಿರಿಯ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಎಲಿಫೆಂಟಾ ದ್ವೀಪದಿಂದ ಗೇಟ್‌ವೇ ಆಫ್ ಇಂಡಿಯಾವರೆಗಿನ ಸುಮಾರು 13 ಕಿಲೋ ಮೀಟರ್ ದೂರದ ಸಮುದ್ರ ಮಾರ್ಗವನ್ನು‌ ಈಜಿದ ವಿಶ್ವದ ಮೊದಲ ಬಾಲಕಿ ಆಗಿದ್ದಾಳೆ. ಈ ಬಾಲಕಿಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಅಸ್ಸಾಂನ ಏಳು ವರ್ಷದ ಕಿಯುಚೆಂಗನ್ ಫುಕೋನ್ ತನ್ನ ಸಣ್ಣ ವಯಸ್ಸಿನಲ್ಲಿಯೇ ಈ ಸಾಧನೆ ಮಾಡಿದ್ದಾಳೆ. ಎಲಿಫೆಂಟಾ ದ್ವೀಪದಿಂದ ಮುಂಬೈನ ಗೇಟ್‌ವೇ ಆಫ್ ಇಂಡಿಯಾಕ್ಕೆ ಸುಮಾರು 13 ಕಿಲೋ ಮೀಟರ್‌ಗಳನ್ನು 3 ಗಂಟೆ 29 ನಿಮಿಷಗಳಲ್ಲಿ ಕ್ರಮಿಸಿದ್ದಾಳೆ. ಬಾಲಕಿಯ ಸಾಧನೆ ಕಂಡು ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಫೆಬ್ರವರಿ 4ರಂದು ಮಧ್ಯಾಹ್ನ 2:36ಕ್ಕೆ ಎಲಿಫೆಂಟಾ ದ್ವೀಪದಿಂದ ಈಜಲು ಆರಂಭಿಸಿ, ಸಂಜೆ 6:05ಕ್ಕೆ ಗೇಟ್‌ವೇ ಆಫ್ ಇಂಡಿಯಾ ತಲುಪಿದ್ದಾಳೆ.

ವಿಡಿಯೊ ನೋಡಿ:



ಈ ಸವಾಲಿನ ಸಮುದ್ರ ಮಾರ್ಗವನ್ನು ಪೂರ್ಣಗೊಳಿಸಿದ ವಿಶ್ವದ ಅತ್ಯಂತ ಕಿರಿಯ ಬಾಲಕಿ ಈಕೆಯಾಗಿದ್ದಾಳೆ. ಈ ಪ್ರದೇಶವು ತೀವ್ರ ಪ್ರವಾಹಗಳಿಗೆ ಹೆಸರುವಾಸಿ. ಇದು ಅರೇಬಿಯನ್ ಸಮುದ್ರದಲ್ಲಿ ಹೆಚ್ಚು ಕಷ್ಟದ ಸಮುದ್ರ ಮಾರ್ಗಗಳಲ್ಲಿ ಒಂದಾಗಿದೆ. ಈ ಕಠಿಣ ಸಮುದ್ರ ಮಾರ್ಗವನ್ನು ಕ್ರಮಿಸಿದ ವಿಶ್ವದ ಅತ್ಯಂತ ಕಿರಿಯ ಈಜುಗಾರ್ತಿ ಮತ್ತು ಈ ಸಾಧನೆ ಮಾಡಿದ ಈಶಾನ್ಯ ಭಾರತದ ಮೊದಲ ಬಾಲಕಿ ಎಂಬ ದಾಖಲೆ ಇವಳದ್ದಾಗಿದೆ.

ಇದೆಂಥ ಕೃತ್ಯ? ಕೈಕಾಲುಗಳಿಗೆ ಸಂಕೋಲೆ ಬಿಗಿದಿದ್ದರೂ ದುಡಿಯುತ್ತಿರುವ ಕಾರ್ಮಿಕನ ವಿಡಿಯೊ ವೈರಲ್

ಮುಂಬೈಯ ಈ ಸಮುದ್ರ ಮಾರ್ಗವು ತೀವ್ರವಾದ ನೀರಿನ ಹರಿವು, ಅನಿರೀಕ್ಷಿತ ಅಲೆಗಳಿಗೆ ಹೆಸರುವಾಸಿ. ಇಂತಹ ಕಠಿಣ ಪರಿಸ್ಥಿತಿಯಲ್ಲೂ 7 ವರ್ಷದ ಕಿಯುಚೆಂಘನ್, ಅದ್ಭುತ ಧೈರ್ಯ ಪ್ರದರ್ಶಿಸಿದ್ದಾಳೆ. ಈ ಯುವ ಈಜುಗಾರ್ತಿ ಚಾರೈಡಿಯೊ ಜಿಲ್ಲೆಯ ಹೊಲೊಯವರು ಆಗಿದ್ದು 2ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ಹೇಮಂಗಾ ಫುಕನ್ ಮತ್ತು ರಿಮ್ಲಿ ಹಜಾರಿಕಾ ಫುಕನ್ ದಂಪತಿಯ ಪುತ್ರಿ. ಗುವಾಹಟಿಯ ಡಾ. ಝಾಕಿರ್ ಹುಸೇನ್ ಅಕ್ವಾಟಿಕ್ ಕಾಂಪ್ಲೆಕ್ಸ್‌ನಲ್ಲಿ ಕೋಚ್ ಬಾಬುಲ್ ಗುರುಂಗ್ ಅವರ ಮಾರ್ಗದರ್ಶನದಲ್ಲಿ ಈಕೆ ತರಬೇತಿ ಪಡೆಯುತ್ತಿದ್ದಾಳೆ.