ನವದೆಹಲಿ, ಡಿ. 30: ಭಾರತೀಯ ಸಿನಿಮಾರಂಗದಲ್ಲಿ ಬಾಲಿವುಡ್ ಚಿತ್ರಗಳಿಗೆ ಹಾಡುವ ಮೂಲಕ ಹಿರಿಯ ಗಾಯಕಿ ಶ್ವೇತಾ ಶೆಟ್ಟಿ(Shwetha Shetty) ಅವರು ಪ್ರಸಿದ್ಧರಾಗಿದ್ದಾರೆ. 90ರ ದಶಕದ ಜನಪ್ರಿಯ ಭಾರತೀಯ-ಜರ್ಮನ್ ಇಂಡಿ-ಪಾಪ್ ಗಾಯಕಿ ಹಾಗೂ ಹಿನ್ನೆಲೆ ಗಾಯಕಿ(Singer Shwetha Shetty)ಯಾಗಿ ಗುರುತಿಸಿಕೊಂಡಿದ್ದ ಇವರು 'ಜಾನಿ ಜೋಕರ್' ಮತ್ತು 'ದೀವಾನೆ ತೋ ದೀವಾನೆ ಹೈ'ನಂತಹ ಆಲ್ಬಮ್ ಸಾಂಗ್ ಅನ್ನು ಹಾಡುವ ಮೂಲಕವು ಖ್ಯಾತಿ ಪಡೆದಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ಹಾಡುವ ಮೂಲಕ ಫೇಮಸ್ ಆದ ಇವರು ಬಳಿಕ ಜರ್ಮನಿಯಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಅವರಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಲಭ್ಯವಾಗುತ್ತಿಲ್ಲ ಹಾಗಿದ್ದರೂ ಸೋಶಿಯಲ್ ಮಿಡಿಯಾದಲ್ಲಿ ಇವರು ಬಹಳ ಆ್ಯಕ್ಟಿವ್ ಆಗಿದ್ದಾರೆ. ಅಂತೆಯೇ ಇತ್ತೀಚೆಗಷ್ಟೇ ಗಾಯಕಿ ಶ್ವೇತಾ ಶೆಟ್ಟಿ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತನ್ನ ಸೋದರಸಂಬಂಧಿಯೊಬ್ಬರು ಇಳಿ ವಯಸ್ಸಿನಲ್ಲಿ ಮಹಿಳೆಯೊಂದಿಗೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದಾರೆ ಎಂಬ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ಪೋಸ್ಟ್ ಎಲ್ಲೆಡೆ ವೈರಲ್ (Viral News) ಆಗುತ್ತಿದೆ.
ಹ್ಯಾಂಬರ್ಗ್‌ನಲ್ಲಿ ವಾಸಿಸುತ್ತಿದ್ದ ಅವರು ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿ ಸುದ್ದಿಯಾಗಿದ್ದರು. ಇದೀಗ ಅದರ ಬೆನ್ನಲ್ಲೆ ತಮ್ಮ 81 ವರ್ಷದ ಸೋದರನು(ಕಸಿನ್) 71 ವರ್ಷದ ಮಹಿಳೆಯನ್ನು ಶೀಘ್ರವೇ ವಿವಾಹವಾಗಲಿದ್ದಾರೆ. ಈ ಜೋಡಿ ಅಮೆರಿಕದಲ್ಲಿ ನಡೆದ ಬಾಲಿವುಡ್ ಕರೋಕೆ ಪಾರ್ಟಿ ಯಲ್ಲಿ ಭೇಟಿಯಾಗಿದ್ದು ಈಗ ನಿಶ್ಚಿತಾರ್ಥವಾಗಿದ್ದಾರೆ. ಜೀವನದ ಯಾವುದೇ ಹಂತದಲ್ಲಿ ಪ್ರೀತಿ ಅರಳಬಹುದು ಎಂದು ಈ ಜೋಡಿ ಸಾಬೀತು ಮಾಡಿದೆ ಎಂದು ಬರೆದುಕೊಂಡಿದ್ದ ಪೋಸ್ಟ್ ಅನ್ನು ಗಾಯಕಿ ಶ್ವೇತಾ ಹಂಚಿಕೊಂಡಿದ್ದಾರೆ.
ತಮ್ಮ ಸೋದರ ಸಂಬಂಧಿಯು (ಕಸಿನ್) ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದರು ಅನೇಕ ವರ್ಷ ಒಬ್ಬಂಟಿಯಾಗಿ ಜೀವನ ಕಂಡುಕೊಂಡಿದ್ದಾರೆ. ಆದರೆ ಈಗ ಒಬ್ಬಂಟಿಗೆ ಒಬ್ಬರು ಸಂಗಾತಿ ಸಿಕ್ಕಿದ್ದಾರೆ. ಈ ಮೂಲಕ ಅವರು ಈಗ ತಮ್ಮ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಅವರಿಬ್ಬರು ಶೀಘ್ರವೇ ಮದುವೆ ಯಾಗಲಿದ್ದಾರೆ ಎಂದು ಪೋಸ್ಟ್ ನಲ್ಲಿ ಈ ಬಗ್ಗೆ ತಿಳಿಸಿದ್ದಾರೆ.
Viral Video: ಬೆಂಗಳೂರಿನ ಹೆವೀ ಟ್ರಾಫಿಕ್ ನಡುವೆಯೇ ಹೆಲ್ಮೆಟ್‌ನಿಂದ ಹೊಡೆದಾಡಿದ ಬೈಕ್ ಸವಾರರು: ವಿಡಿಯೋ ವೈರಲ್
ಈ ಮೂಲಕ ಗಾಯಕಿ ಶ್ವೇತಾ ಶೆಟ್ಟಿ ಅವರ ಪೋಸ್ಟ್ ನಲ್ಲಿ ಪ್ರೀತಿಗೆ ವಯಸ್ಸು, ಬಣ್ಣ, ಜಾತಿ, ಧರ್ಮ ಯಾವುದು ಅಡ್ಡಿ ಬರಲ್ಲ ಎಂದು ತಿಳಿಸಿದಂತಾಗಿದೆ. ಅವರು ತಮ್ಮ ಪೋಸ್ಟ್ ನಲ್ಲಿ ವಯಸ್ಸಾದ ಮೇಲೆ ಪ್ರೀತಿ ಮಾಡಿದರೆ ಅದನ್ನು ಅನುಮಾನಿಸುವವರು ಅಪಹಾಸ್ಯ ಮಾಡುವವರೆ ಈ ಜಗತ್ತಿನಲ್ಲಿ ತುಂಬಿಕೊಂಡಿದ್ದಾರೆ ಆದರೆ ಅದ್ಯಾವುದರ ಚಿಂತೆ ಪಡದೆ ನನ್ನ ತಂದೆಯ ಕುಟುಂಬದ ಸೋದರ ಸಂಬಂಧಿಯೊಬ್ಬರು ತಮ್ಮ 81ನೇ ಇಳಿ ವಯಸ್ಸಿನಲ್ಲಿ 71 ವರ್ಷದ ಮಹಿಳೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದನ್ನು ನೋಡುವುದು ಮನಸ್ಸಿಗೆ ಬಹಳ ಖುಷಿನೀಡಿದಂತಾಗಿದೆ. ಈ ಜೋಡಿಗೆ ಒಳ್ಳೆದಾಗಲಿ...ಎಲ್ಲಾ ಒಂಟಿ ಮಹಿಳೆಯರಿಗೆ ನಿರಾಸೆ ಬೇಡ.. ನಿಮ್ಮ ಮನಸ್ಸು ಮೆಚ್ಚುವವರು ಖಂಡಿತ ಸಿಗುತ್ತಾರೆ ಆ ಭರವಸೆ ಸದಾ ಇರಲಿ ಎಂದು ಅವರು ಬರೆದಿದ್ದಾರೆ.
ಈ ಪೋಸ್ಟ್‌ಗೆ ಕಂಡು ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಮನುಷ್ಯನು ತಾನು ಸುಖವಾಗಿರಲು ಹಣ , ಆಸ್ತಿ, ಪ್ರತಿಷ್ಟೆ ಎಂದೆಲ್ಲ ಹೋಗುತ್ತಾನೆ. ಆದರೆ ನಿಜವಾದ ಖುಷಿ ಸಿಗುವುದು ಸರಳ ಜೀವನದಲ್ಲಿ. ನಮ್ಮನ್ನು ಅರ್ಥ ಮಾಡಿಕೊಳ್ಳುವ ಸಂಗಾತಿ ಸಿಕ್ಕಾಗಲೇ ಜೀವನಕ್ಕೆ ಒಂದು ಅರ್ಥ ಸಿಗಲಿದೆ. ಈ ನಿಟ್ಟಿನಲ್ಲಿ ತಡವಾದರೂ ಒಳ್ಳೆ ಸಂಗಾತಿಯೇ ಅವರಿಗೆ ಸಿಕ್ಕಿದ್ದಾರೆ ಈ ಜೋಡಿ ಸುಖವಾಗಿರಲಿ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.