ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ: ಪೋಷಕರ ವಯಸ್ಸಿನ ಬಗ್ಗೆ ಇಂಟರ್‌ನೆಟ್‌ನಲ್ಲಿ ಜೋರಾಯ್ತು ಚರ್ಚೆ

Viral Video: ಆಂಧ್ರ ಪ್ರದೇಶದ 74 ವರ್ಷದ ಮಹಿಳೆಯೊಬ್ಬರು ಐವಿಎಫ್ ತಂತ್ರಜ್ಞಾನ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಕೆಲವು ದಶಕಗಳ ನಂತರ ಮಹಿಳೆ ಮಗು ಪಡೆದಿದ್ದು ಸಂಭ್ರಮದ ವಾತಾವರಣ ಮನೆ ಮಾಡಿದೆ. ಆದರೆ ಈ ವಯಸ್ಸಿನಲ್ಲೂ ಪೋಷಕರಾಗುತ್ತಿರುವ ಬಗ್ಗೆ ಜನರು ಮಿಶ್ರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ

ಅಮರಾವತಿ, ಆ. 28: ಆಧುನಿಕ ಜಗತ್ತಿನಲ್ಲಿ ಅನೇಕ ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಸಾಮಾಜಿಕಿ, ವೈಜ್ಞಾನಿಕ, ತಂತ್ರಜ್ಞಾನ ಕ್ಷೇತ್ರದಲ್ಲಿ ನಾವಿಂದು ಮುಂದಿದ್ದೇವೆ. ಅದಕ್ಕೆ ಉದಾಹರಣೆ ಎಂಬಂತೆ ಇದೀಗ ಆಂಧ್ರ ಪ್ರದೇಶದ 74 ವರ್ಷದ ಮಹಿಳೆಯೊಬ್ಬರು ಐವಿಎಫ್ ತಂತ್ರಜ್ಞಾನ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಘಟನೆ ನಡೆದಿದೆ. ಕೆಲವು ದಶಕಗಳ ನಂತರ ಮಹಿಳೆ ಮಗು ಪಡೆದಿದ್ದು ಸಂಭ್ರಮದ ವಾತಾವರಣ ಮನೆ ಮಾಡಿದೆ. ಆದರೆ ಈ ವಯಸ್ಸಿನಲ್ಲೂ ಪೋಷಕರಾಗುವ ಬಗ್ಗೆ ಜನರು ಮಿಶ್ರ ಅಭಿಪ್ರಾಯಗಳನ್ನು (Viral News) ಹಂಚಿಕೊಳ್ಳುತ್ತಿದ್ದಾರೆ.

74 ವರ್ಷದ ಮಹಿಳೆ ಮಂಗಾಯಮ್ಮ ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರ್ರಾಮಟ್ಟಿ ಮಂಗಾಯಮ್ಮ ಮತ್ತು ಅವರ ಪತಿ ರಾಜಾ ರಾವ್ ಅವರಿಗೆ ಮದಯವೆಯಾಗಿ ಹಲವು ವರ್ಷಗಳಾದರೂ ಮಗು ಆಗಿರಲಿಲ್ಲ. ಮಗುವನ್ನು ಹೊಂದಲು ಹಲವು ವರ್ಷಗಳಿಂದ ಪ್ರಯತ್ನಿಸಿದ್ದರು. ಆದಾಗ್ಯೂ, ಮಂಗಾಯಮ್ಮ ಗರ್ಭಿಣಿಯಾಗಿರಲಿಲ್ಲ.

ಅವಳಿ ಮಕ್ಕಳಿಗೆ ಜನ್ಮ ನೀಡಿದ 74 ವರ್ಷದ ಮಹಿಳೆ:



ಆಂಧ್ರ ಪ್ರದೇಶದ ಗುಂಟೂರಿನ ಎತ್ತಮಟ್ಟಿ ಎಂಬಲ್ಲಿ ಈ ಘಟನೆ ನಡೆದಿದೆ. ತಮ್ಮ ನೆರೆಹೊರೆಯ ಮಹಿಳೆಯೊಬ್ಬರು 55ನೇ ವಯಸ್ಸಿನಲ್ಲಿ ಕೃತಕ ಗರ್ಭಧಾರಣೆಯ ಮೂಲಕ ಜನ್ಮ ನೀಡಿದ ನಂತರ ಮಂಗಾಯಮ್ಮ ಅವರಿಗೂ ಮಗು ಹೊಂದಬೇಕು ಎನ್ನುವ ಆಸೆ ಮತ್ತೆ ಚಿಗುರಿತು. ಈ ತಂತ್ರಜ್ಞಾನದ ಮೂಲಕ ತಮಗೂ ಮಕ್ಕಳಾಗಬಹುದು ಎಂಬ ಭರವಸೆಯಿಟ್ಟುಕೊಂಡರು. ಹೀಗಾಗಿ ದಂಪತಿ ಗುಂಟೂರಿನಲ್ಲಿ ವೈದ್ಯರನ್ನು ಸಂಪರ್ಕಿಸಿದರು.

ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ದಾನಿಗಳ ಅಂಡಾಣು ಮತ್ತು ರಾಜಾ ರಾವ್ ಅವರ ವೀರ್ಯವನ್ನು ಬಳಸಿಕೊಂಡು ಐವಿಎಫ್ ಪ್ರಕ್ರಿಯೆಗೆ ಒಳಗಾದರು. ಬಳಿಕ ಚಿಕಿತ್ಸೆ ಮೂಲಕ ಈ ಇಳಿ ವಯಸ್ಸಿನಲ್ಲೂ ಮಂಗಾಯಮ್ಮ ಗರ್ಭಿಣಿಯಾಗಿದ್ದು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮೂಲಕ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರು. ವಯಸ್ಸನ್ನು ಗಮನದಲ್ಲಿಟ್ಟುಕೊಂಡು, ಮಂಗಾಯಮ್ಮ ಅವರನ್ನು ವೈದ್ಯಕೀಯ ಆರೈಕೆಯಲ್ಲಿ ಇರಿಸಲಾಗಿತ್ತು. ವಿವಿಧ ತಜ್ಞರು ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಆಸ್ಪತ್ರೆಯಲ್ಲಿಯೇ ಇರಲು ಸಲಹೆ ನೀಡಿದ್ದರು.

ಹೆರಿಗೆಯ ನಂತರ ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದರೂ, ವಯಸ್ಸಿನ ಕಾರಣದಿಂದ ಮಕ್ಕಳಿಗೆ ಹಾಲುಣಿಸಲು ಸಾಧ್ಯವಾಗಿಲ್ಲ. ಈ ಘಟನೆ ವೈರಲ್ ಆಗುತ್ತಿದ್ದಂತೆ ಇಂಟರ್‌ನೆಟ್‌ನಲ್ಲಿ ದಂಪತಿಯ ನಿರ್ಧಾರದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಮಗು ಪಡೆಯಲು ವಯಸ್ಸಿನ ಮಿತಿ ಇರಬೇಕೇ ಎಂದು ಅನೇಕರು ಜನರು ಪ್ರಶ್ನಿಸುತ್ತಿದ್ದಾರೆ.

ಒಬ್ಬರು, "ಪೋಷಕರು ತುಂಬಾ ವಯಸ್ಸಾದವರು. ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ʼʼ ಎಂದು ಕೇಳಿದ್ದಾರೆ. ಮತ್ತೊಬ್ಬರು "ಈ ಲೋಕದ ಜನರೇ ಹೀಗೆ. ಮಗುವಿಲ್ಲದಿದ್ದರೆ ಅಪಹಾಸ್ಯ ಮಾಡುತ್ತಾರೆ. ದೇವರು ಅವರನ್ನು ಆಶೀರ್ವದಿಸಿದರೆ, ನಕಾರಾತ್ಮಕವಾಗಿಯೂ ಕಾಮೆಂಟ್ ಮಾಡುತ್ತಾರೆ'' ಎಂದು ಬರೆದುಕೊಂಡಿದ್ದಾರೆ.