ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ; ನಿವೃತ್ತ ಪೊಲೀಸ್ ಅಧಿಕಾರಿಯ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ಫಿದಾ

ತಮಿಳುನಾಡಿನ 77ರ ವೃದ್ಧೆಯೊಬ್ಬರು ತಮ್ಮ ಪಿಂಚಣಿ ಹಣವನ್ನು ಕೋತಿಗಳ ಹಸಿವು ನೀಗಿಸಲು ಬಳಕೆ ಮಾಡುತ್ತಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯಾದ ಅವರು ಕಳೆದ ಹತ್ತು ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸದ್ಯ ಅವರ ನಿಸ್ವಾರ್ಥ ಸೇವೆಗೆ ಎಲ್ಲರೂ ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಭಾರಿ ವೈರಲ್ ಆಗಿದೆ.

ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ

ಚೆನ್ನೈ, ಜೂ‌. 23: ಅನೇಕರು ತಮ್ಮ ನಿವೃತ್ತಿ ನಂತರದ ದಿನವನ್ನು ಆರಾಮದಾಯಕವಾಗಿ ಅಥವಾ ಹವ್ಯಾಸಗಳ ಮುಳುಗುವ ಮೂಲಕ ಕಳೆಯಲು ಬಯಸುತ್ತಾರೆ. ಆದರೆ ತಮಿಳುನಾಡಿನ 77ರ ವೃದ್ಧೆಯೊಬ್ಬರು ಭಿನ್ನವಾಗಿ ತಮ್ಮ ಪಿಂಚಣಿ ಹಣವನ್ನು ಕೋತಿಗಳ ಹಸಿವು ನೀಗಿಸಲು ಬಳಕೆ ಮಾಡುತ್ತಿದ್ದಾರೆ. ಮಾಜಿ ಪೊಲೀಸ್ ಅಧಿಕಾರಿಯಾದ ವೃದ್ಧೆ ಕಳೆದ ಹತ್ತು ವರ್ಷಗಳಿಂದ ಈ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸದ್ಯ ಮಹಿಳೆಯ ನಿಸ್ವಾರ್ಥ ಸೇವೆಗೆ ಎಲ್ಲರೂ ಫಿದಾ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಭಾರಿ ವೈರಲ್ (Viral News) ಆಗುತ್ತಿದೆ.

ತಮಿಳುನಾಡಿನ ಮಧುರೈಯ 76 ವರ್ಷದ ಮಾಲತಿ ಈ ಸೇವೆ ಮಾಡುತ್ತಿದ್ದಾರೆ‌. ಪೊಲೀಸ್ ಅಧಿಕಾರಿಯಾಗಿದ್ದ ಇವರು ಪಿಂಚಣಿಯ ಬಹುಭಾಗವನ್ನು ಕೋತಿಗಳ ಆರೈಕೆಗಾಗಿ ಬಳಕೆ ಮಾಡುತ್ತಿದ್ದಾರೆ. ಪ್ರತಿ ಶನಿವಾರ ಮಧ್ಯಾಹ್ನ, ನೂರಾರು ಮಂಗಗಳು ದೇವಾಲಯದ ಆವರಣ ಮತ್ತು ಸುತ್ತಮುತ್ತಲಿನ ಬೆಟ್ಟಗಳಲ್ಲಿ ಸೇರುತ್ತವೆ. ಅವರ ಆಗಮನಕ್ಕಾಗಿ ಕಾತರದಿಂದ ಕಾಯುತ್ತ ಆಹಾರ ಸವಿದು ತಮ್ಮ ತಮ್ಮ ಜಾಗಕ್ಕೆ ತೆರಳುತ್ತವೆ.

ವಿಡಿಯೊ ನೋಡಿ:



2010ರಲ್ಲಿ ಅವರು ನಿವೃತ್ತರಾಗುವ ಮೊದಲು ಗಾಂಧಿಗ್ರಾಮ ವಿಶ್ವವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿ ಸೇವೆ ಸಲ್ಲಿಸುವುದು ಸೇರಿ ಹಲವು ವೃತ್ತಿಪರ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ‌. ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಿವೃತ್ತಿಯ ನಂತರ, ಅವರು ಪ್ರಾಣಿ ಕಲ್ಯಾಣದತ್ತ ತಮ್ಮ ಗಮನವನ್ನು ಹರಿಸಿದ್ದು 2015ರ ಸುಮಾರಿಗೆ ತಿರುಪ್ಪರಂಕುಂದರಂ ಮುರುಗನ್ ದೇವಸ್ಥಾನ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿದ್ದ ಕೋತಿಗಳು ಆಹಾರಕ್ಕಾಗಿ ಪರದಾಡುತ್ತಿರುವುದನ್ನು ಗಮನಿಸಿ ಅವುಗಳಿಗೆ ಆಹಾರ ನೀಡಲು ನಿರ್ಧರಿಸಿದ್ದಾರೆ.

ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ

ದೇವಾಲಯದ ಸುತ್ತಮುತ್ತಲಿನ ಬೆಟ್ಟಗಳ ಮೇಲಿರುವ ನೂರಾರು ಕೋತಿಗಳು ಅವರ ಆಗಮನಕ್ಕಾಗಿ ಕಾತರದಿಂದ ಕಾಯುತ್ತವೆ. ಆದರೆ ​ಆರೋಗ್ಯ ಸಮಸ್ಯೆಗಳಿಂದಾಗಿ ಮಾಲತಿ ಅವರಿಗೆ ಈಗ ದೂರದವರೆಗೆ ನಡೆಯುವುದು ಕಷ್ಟವಾಗುತ್ತಿದೆ. ಹಾಗಿದ್ದರೂ ಪ್ರತಿ ಶನಿವಾರ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ. ಈ ಸ್ಥಳದಲ್ಲಿ ಸುಮಾರು 350ರಿಂದ 400 ಕೋತಿಗಳು ಇವೆ. ಪ್ರತಿ ಶನಿವಾರ ಅಪರಾಹ್ನ 3:30ರ ಸುಮಾರಿಗೆ ಅವುಗಳನ್ನು ಕರೆಯುವಾಗ ಆಹಾರಕ್ಕಾಗಿ ಒಟ್ಟುಗೂಡುತ್ತವೆ. ನಿಜಕ್ಕೂ ಈ ಕೆಲಸ ತೃಪ್ತಿ ತಂದಿದೆ ಎಂದು ತಿಳಿಸಿದ್ದಾರೆ.

ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಒಬ್ಬರು, ʼʼನಿಮ್ಮ ನಿಸ್ವಾರ್ಥ ಸೇವೆಗೆ ಒಳಿತಾಗಲಿʼʼ ಎಂದು ಶುಭ ಹಾರೈಸಿದ್ದಾರೆ. ಮತ್ತೊಬ್ಬರು, ʼʼನೀವು ಬಹಳಷ್ಟು ಜನರಿಗೆ ಸ್ಫೂರ್ತಿʼʼ ಎಂದು ಬರೆದುಕೊಂಡಿದ್ದಾರೆ.