ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಘೋರ ದುರಂತ; ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವು: ಸಿಸಿಟಿವಿ ಕ್ಯಾಮರಾದಲ್ಲಿ ಭೀಕರ ದೃಶ್ಯ ಸೆರೆ

Viral Video: ಗುಜರಾತ್‌ನ ಸೂರತ್‌ನಲ್ಲಿರುವ ಅಕ್ಷಯ್ ರೆಸಾರ್ಟ್‌ನಲ್ಲಿ ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವನಪ್ಪಿದ್ದಾನೆ‌. ಮೋಜು ಮಸ್ತಿಗಾಗಿ ತೆರಳಿದ್ದ ಯುವಕ ಈಜುಕೊಳದ ಆಳವಾದ ಪ್ರದೇಶಕ್ಕೆ ಇಳಿದು ಪ್ರಾಣ ಕಳೆದುಕೊಂಡಿದ್ದಾನೆ. ಸೂರತ್‌ನ ಪಾಂಡೇಸರ ನಿವಾಸಿ ಪುರುಷೋತ್ತಮ್ ಅಶೋಕಭಾಯ್ ಚೌಧರಿ ಮೃತಪಟ್ಟ ಯುವಕ.

ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವು

ಗಾಂಧಿನಗರ, ಮಾ. 31: ಗುಜರಾತ್‌ನ ಸೂರತ್‌ನಲ್ಲಿ ರೆಸಾರ್ಟ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೂರತ್‌ನ ಅಕ್ಷಯ್ ರೆಸಾರ್ಟ್‌ನಲ್ಲಿ ಈಜುಕೊಳದಲ್ಲಿ ಮುಳುಗಿ 22 ವರ್ಷದ ಯುವಕ ಸಾವನಪ್ಪಿದ್ದಾನೆ‌. ಮೋಜು ಮಸ್ತಿಗಾಗಿ ತೆರಳಿದ್ದ ಯುವಕನು ಈಜುಕೊಳದಲ್ಲಿ ಆಳವಾದ ಪ್ರದೇಶಕ್ಕೆ ಇಳಿದು ಪ್ರಾಣ ಕಳೆದುಕೊಂಡಿದ್ದಾನೆ. ಸೂರತ್‌ನ ಪಾಂಡೇಸರ ನಿವಾಸಿ ಪುರುಷೋತ್ತಮ್ ಅಶೋಕಭಾಯ್ ಚೌಧರಿ ಮೃತಪಟ್ಟ ಯುವಕ.

ಈ ಘಟನೆ ಮಾರ್ಚ್ 23ರಂದು ಓಲ್ಪಾಡ್ ತಾಲೂಕಿನ ತಲಾದ್ ಗ್ರಾಮದಲ್ಲಿರುವ ಅಕ್ಷಯ್ ರೆಸಾರ್ಟ್‌ನಲ್ಲಿ ನಡೆದಿದೆ. ಸೂರತ್‌ನ ಯುವಕರ ಗುಂಪೊಂದು ರಜೆಯ ದಿನವನ್ನು ಕಳೆಯಲು ರೆಸಾರ್ಟ್‌ಗೆ ಭೇಟಿ ನೀಡಿತ್ತು. ಆ ಪೈಕಿ 22 ವರ್ಷದ ಪುರುಷೋತ್ತಮ್ ಚೌಧರಿ ಕೂಡ ಇದ್ದ. ಆತ ಮಧ್ಯಾಹ್ನದ ಸುಮಾರಿಗೆ ತಮ್ಮ ಸ್ನೇಹಿತನ ಜತೆ ಈಜುಕೊಳಕ್ಕೆ ತೆರಳಿದ್ದ.

ವಿಡಿಯೊ ನೋಡಿ:



ಸಿಸಿಟಿವಿ ಕ್ಯಾಮರಾದಲ್ಲಿ ಈ ಭಯಾನಕ ದೃಶ್ಯ ರೆಕಾರ್ಡ್ ಆಗಿದ್ದು, ಯುವಕ ಈಜುಕೊಳದೊಳಗೆ ಸಂಕಷ್ಟದಲ್ಲಿ ಸಿಲುಕಿರುವುದು ಕಂಡುಬಂದಿದೆ. ಆತ ನೀರಿನಲ್ಲಿ ತನ್ನ‌ ಪ್ರಾಣ ಉಳಿಸಿಕೊಳ್ಳಲು ಹೋರಾಡಿದ್ದಾನೆ. ಆದರೆ ಅಲ್ಲಿದ್ದ ಆತನ ಸ್ನೇಹಿತರು ಇದನ್ನು ಗಮನಿಸರಲಿಲ್ಲ. ಆತ ಪ್ರಜ್ಞೆ ತಪ್ಪಿ ಬಿದ್ದ ನಂತರವಷ್ಟೇ ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಆತನ ಸ್ನೇಹಿತರು ಇದನ್ನು ಗಮನಿಸಿ, ನೀರಿನಿಂದ ಹೊರ ತೆಗೆದು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ದಿದ್ದಾರೆ.

ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ

ಪುರುಷೋತ್ತಮ್‌ನನ್ನು ಉಳಿಸಲು ಪ್ರಯತ್ನಿಸಿದರೂ ಆಸ್ಪತ್ರೆಗೆ ತಲುಪಿದಾಗ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಧಿಕಾರಿಗಳು ಈ ಸಾವು ನೀರಿನಲ್ಲಿ ಮುಳುಗಿ ಸಂಭವಿಸಿದೆ ಎಂದು ದೃಢ ಪಡಿಸಿದ್ದಾರೆ. ಓಲ್ಪಾಡ್ ಪೊಲೀಸರು ಈ ಸಾವಿನ ಪ್ರಕರಣವನ್ನು ದಾಖಲಿಸಿದ್ದು, ಅಧಿಕಾರಿಗಳು ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ರೆಸಾರ್ಟ್‌ ಒಂದರಲ್ಲಿ ಯುವತಿಯರಿಬ್ಬರು ಈಜು ಕೊಳದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಖಾಸಗಿ ರೆಸಾರ್ಟ್‌ಗಳು ಮತ್ತು ಈಜು ಸೌಲಭ್ಯಗಳಲ್ಲಿ ಜೀವ ರಕ್ಷಕರು ಮತ್ತು ತುರ್ತು ವ್ಯವಸ್ಥೆಗಳ ಲಭ್ಯತೆಯ ಕುರಿತು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ‌.