ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತರಕಾರಿ ಮಾರುತ್ತಿದ್ದ ಹುಡುಗ ಇಂದು ಕೋಟ್ಯಧಿಪತಿ, ಐಷಾರಾಮಿ ಮನೆಗಳ ಮಾಲಕ; ಈ ಯಶಸ್ಸಿನ ಹಿಂದಿದೆ ಕಠಿಣ ಪರಿಶ್ರಮ

Viral News: ತರಕಾರಿ ಮಾರುತ್ತಿದ್ದ ಯುವಕನೊಬ್ಬ ಇಂದು ಭಾರತ, ವಿದೇಶ ಸೇರಿ ಹಲವೆಡೆ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಕಷ್ಟದ ಜೀವನದಿಂದ ಹಿಡಿದು ಆರ್ಥಿಕ ಯಶಸ್ಸಿನವರೆಗಿನ ಈ ವ್ಯಕ್ತಿಯ ಪ್ರಯಾಣ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಈ ಬಾಲಕ ಯಾರು ಎಂಬ ಕುತೂಹಲ ನಿಮಗೆ ಇರಬಹುದು. ಅವರೇ ಚಾರ್ಟರ್ಡ್ ಅಕೌಂಟೆಂಟ್ (CA) ಅಭಿಷೇಕ್ ಆರ್. ವೈಶ್ಯ ಆಗಿದ್ದಾರೆ. ಅವರ ಸಾಹಸಗಾಥೆಯ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಮುಂಬೈ, ಮಾ. 20: ಶ್ರಮ ಪಟ್ಟರೆ ಯಾವುದೇ ಕೆಲಸ ಸಾಧ್ಯ ಎನ್ನುವ ಗಾದೆ ಮಾತನ್ನು ನೀವು ಕೇಳಿರಬಹುದು. ಇದಕ್ಕೆ ಸಾಕ್ಷಿ ಎಂಬಂತೆ ತರಕಾರಿ ಮಾರುತ್ತಿದ್ದ ಯುವಕನೊಬ್ಬ ಇಂದು ಕೋಟ್ಯಧಿಪತಿಯಾಗಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಕಷ್ಟದ ಜೀವನದಿಂದ ಹಿಡಿದು ಆರ್ಥಿಕ ಯಶಸ್ಸಿನವರೆಗಿನ ಈ ಯುವಕನ ಪ್ರಯಾಣ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ. ಈ ಯುವಕ ಯಾರು ಎಂಬ ಕುತೂಹಲ ನಿಮಗೆ ಇರಬಹುದು. ಅವರೇ ಚಾರ್ಟರ್ಡ್ ಅಕೌಂಟೆಂಟ್ (CA) ಅಭಿಷೇಕ್ ಆರ್. ವೈಶ್ಯ. ಅವರ ಜೀವನವು ಯುವ ಜನತೆಗೆ ಪ್ರೇರಣೆ.

ಕುಶಾಲ್ ಲೋಧಾ ಎಂಬವರು ಹಂಚಿಕೊಂಡ ಈ ಪೋಸ್ಟ್, ಅಭಿಷೇಕ್ ಚಿಕ್ಕ ವಯಸ್ಸಿನಲ್ಲಿಯೇ ಹೇಗೆ ಕೆಲಸ ಮಾಡಲು ಪ್ರಾರಂಭಿಸಿದರು ಎಂಬುದನ್ನು ತಿಳಿಸಿದೆ. ಅಭಿಷೇಕ್ 13-20 ವರ್ಷ ವಯಸ್ಸಿನವರೆಗೆ ತಂದೆಯೊಂದಿಗೆ ದಾದರ್‌ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ಬಳಿಕ ನೇರವಾಗಿ ಸಿಎ (CA) ತರಗತಿಗಳಿಗೆ ಹಾಜರಾಗುತ್ತಿದ್ದರು. ಆದರೆ ದಿನ ಅಲ್ಲಿಗೆ ಮುಗಿಯುತ್ತಿರಲಿಲ್ಲ. ನಿರಂತರ ಅಧ್ಯಯನದ ಬಳಿಕ‌ ರಾತ್ರಿ 11 ಗಂಟೆಗೆ ಮಲಗುತ್ತಿದ್ದರು.

ವೈರಲ್‌ ಪೋಸ್ಟ್‌:



ಅವರು ತಮ್ಮ ಕುಟುಂಬದಲ್ಲಿ ಒಟ್ಟು 5 ಜನರೊಂದಿಗೆ 150 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಅಂತಹ ಕಷ್ಟದ ದಿನದಲ್ಲಿಯೂ ಅಧ್ಯಯನ ಮಾಡಿ ಸಿಎಯಲ್ಲೇ ತೇರ್ಗಡೆಯಾಗಿದ್ದಾರೆ. ಅವರು ಸಿಎ ಆದ ತಕ್ಷಣ ತಂದೆಗೆ ತರಕಾರಿ ಮಾರುವುದನ್ನು ನಿಲ್ಲಿಸಲು ಸೂಚಿಸಿ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ.‌ ಸಿಎ ನಂತರ ಅಭಿಷೇಕ್ ವಿದೇಶಕ್ಕೆ ತೆರಳಿದ್ದು, ಒಮನ್‌ಲ್ಲಿ 6 ವರ್ಷಗಳ ಕಾಲ ಕೆಲಸ ಮಾಡಿ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಿದರು.

ಸೆಲ್ಫಿಗಾಗಿ ವಿದೇಶಿ ಮಹಿಳೆ ಹಿಂದೆ ಬಿದ್ದ ಯುವಕರು

ಸದ್ಯ ಅವರು ಭಾರತ, ದುಬೈ ಮತ್ತು ಒಮನ್‌ನಲ್ಲಿ ಐಷಾರಾಮಿ ಮನೆಗಳನ್ನು ಹೊಂದಿದ್ದಾರೆ. ಬಿಎಂಡಬ್ಲ್ಯು (BMW) ಮತ್ತು ಮರ್ಸಿಡಿಸ್ ಬೆಂಜ್‌ನಂತಹ ದುಬಾರಿ ಕಾರುಗಳನ್ನು ಬಳಸುತ್ತಿದ್ದಾರೆ. ಒಮನ್‌ನಲ್ಲಿ ಅತ್ಯಂತ ಜನಪ್ರಿಯವಾಗಿರುವ 'ಕ್ಲೌಡ್ ಕಿಚನ್' ಉದ್ಯಮವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಈ ಬಗ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಬಳಕೆದಾರರೊಬ್ಬರು "ಎಂತಹ ಸ್ಪೂರ್ತಿದಾಯಕ ಕಥೆ" ಎಂದು ಬರೆದರೆ, ಮತ್ತೊಬ್ಬರು "ಕಠಿಣ ಪರಿಶ್ರಮ ಎಲ್ಲದ್ದಕ್ಕೂ ದಾರಿ ಮಾಡಿಕೊಡುತ್ತದೆ" ಎಂದು ಹೇಳಿದ್ದಾರೆ.