ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗುರುಗ್ರಾಮದಲ್ಲಿ ಭೀಕರ ಅಪಘಾತ; ವೇಗವಾಗಿ ಬಂದ ಕಾರ್‌ ಹರಿದು ತಾಯಿಯ ಕಣ್ಣೆದುರೇ ಉಸಿರು ಚೆಲ್ಲಿದ 2 ವರ್ಷದ ಕಂದಮ್ಮ

Viral News: ಹರಿಯಾಣದ ಗುರುಗ್ರಾಮ್‌ನ ಸೆಕ್ಟರ್ 6ರ ಮನೆಯೊಂದರ ಹೊರಗೆ ಅಕ್ಕನೊಂದಿಗೆ ಆಟವಾಡುತ್ತಿದ್ದ ಎರಡು ವರ್ಷದ ಬಾಲಕಿಗೆ ವೇಗವಾಗಿ ಬಂದ ಕಾರ್‌ ಡಿಕ್ಕಿ ಹೊಡೆದಿದ್ದು, ಅಲ್ಲೇ ಅಸುನೀಗಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ತಾಯಿಯ ಕಣ್ಣೆದುರೇ ವೇಗವಾಗಿ ಬಂದ ಕಾರು ಹರಿದು ಮಗು ಸಾವು

ಚಂಡೀಗಢ, ಸೆ. 8: ತಾಯಿಯ ಕಣ್ಣಿದುರೇ ಎರಡು ವರ್ಷದ ಮಗುವೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಹರಿಯಾಣದ ಗುರುಗ್ರಾಮದ ಸೆಕ್ಟರ್ 6ರ ಮನೆಯೊಂದರ ಹೊರಗೆ ಅಕ್ಕನೊಂದಿಗೆ ಆಟವಾಡುತ್ತಿದ್ದ ಎರಡು ವರ್ಷದ ಬಾಲಕಿಯ ಮೇಲೆ ವೇಗವಾಗಿ ಬಂದ ಕಾರ್‌ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿ (Viral News) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಸಂಭವಿಸಿದ ತಕ್ಷಣ ತಾಯಿ ಧಾವಿಸಿ ಎತ್ತಿಕೊಂಡಾಗ ಮಗು ನಿಶ್ಚಲವಾಗಿತ್ತು. ತಕ್ಷಣವೇ ಕುಟುಂಬಸ್ಥರು ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು.

ಸೋಮವಾರ (ಸೆಪ್ಟೆಂಬರ್‌ 7) ರಾತ್ರಿ ಗುರುಗ್ರಾಮ್‌ನ ಸೆಕ್ಟರ್ 6 ಬಳಿ ಈ ಘಟನೆ ನಡೆದಿದೆ. ಅದ್ರಿಜಾ ಮತ್ತು ಆಕೆಯ ಸಹೋದರಿ ಧ್ವಿಜಾ ರಾತ್ರಿ 9 ಗಂಟೆಗೆ ಮನೆಯ ಹೊರಗೆ ಆಟವಾಡುತ್ತಿದ್ದರು. ಈ ಮಕ್ಕಳ ತಾಯಿ ಕೆಲವು ಹೆಜ್ಜೆ ದೂರದಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದರು. ಮಕ್ಕಳು ಆಟವಾಡುತ್ತಿದ್ದಂತೆ ವೇಗವಾಗಿ ಬಂದ ಕಾರೊಂದು ಹಠಾತ್ತನೆ ಬಲಕ್ಕೆ ತಿರುವು ಪಡೆದುಕೊಂಡಿದೆ. ಈ ವೇಳೆ ಹಿರಿಯ ಮಗು ಧ್ವಿಜಾ ಪಕ್ಕಕ್ಕೆ ಸರಿದು ಅಪಾಯದಿಂದ ಪಾರಾಗಿದ್ದಾಳೆ. ಆದರೆ 2 ವರ್ಷದ ಅದ್ರಿಜಾ ಕಾರಿನ ಚಕ್ರಕ್ಕೆ ಸಿಲುಕಿದೆ.

ಅಪಘಾತದ ದೃಶ್ಯ:



​ಅಪಘಾತ ಸಂಭವಿಸಿದ ಕೂಡಲೇ ಮಗುವನ್ನ‌ ವಿಹಾರ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕಾರ್‌ ಚಲಾಯಿಸುತ್ತಿದ್ದ 30 ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ

ಮಗುವಿನ ತಂದೆ ವೀರೇಂದ್ರ ತಿವಾರಿ ಮಾತನಾಡಿ, ʼʼಅಪಘಾತ ಎಸಗಿದ ಚಾಲಕ ಅದೇ ಗ್ರಾಮದ ನಿವಾಸಿ. ಘಟನೆಗೆ ಐದು ನಿಮಿಷಗಳ ಮೊದಲು ಆತ ಅದೇ ರಸ್ತೆಯಲ್ಲಿ ಹಾದು ಹೋಗಿದ್ದ. ಆ ವೇಳೆ ನನ್ನ ಪತ್ನಿ ಇಬ್ಬರು ಮಕ್ಕಳನ್ನು ಪಕ್ಕಕ್ಕೆ ಎಳೆದಿದ್ದಳು. ರಸ್ತೆಯ ತಿರುವಿನಲ್ಲಿ ಮಕ್ಕಳಿದ್ದಾರೆ ಎಂಬುದು ಗೊತ್ತಿದ್ದರೂ, ಎರಡನೇ ಬಾರಿ ಬರುವಾಗ ಕಾರನ್ನು ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾನೆʼʼ ಎಂದು ದೂರಿದ್ದಾರೆ.

ಸೆಕ್ಟರ್ -5 ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 106 ಮತ್ತು 281 ಅಡಿಯಲ್ಲಿ ಕಾರ್‌ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಅಪಘಾತಕ್ಕೀಡಾದ ಕಾರನ್ನು ಜಪ್ತಿ ಮಾಡಲಾಗಿದೆ. ರಸ್ತೆಯಲ್ಲಿ ಕತ್ತಲಾಗಿದ್ದರಿಂದ ಮಕ್ಕಳು ಕಾಣಿಸಲಿಲ್ಲ ಎಂದು ಚಾಲಕ ವಿಚಾರಣೆ ವೇಳೆ ತಿಳಿಸಿದ್ದಾನೆ.