ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೊಲೀಸರ ಕೈಯಿಂದ ತಪ್ಪಿಸಿದ ಸರಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಸೆಕ್ಯುರಿಟಿ ಗಾರ್ಡ್‌; ವಿಡಿಯೊ ವೈರಲ್‌

Viral Video: ಉತ್ತರ ಪ್ರದೇಶದ ಅಲಿಗಢದಲ್ಲಿ ಸರಕಳ್ಳನನ್ನು ಸೆಕ್ಯುರಿಟಿ ಗಾರ್ಡ್‌ ಸೆರೆ ಹಿಡಿದ ಘಟನೆ ನಡೆದಿದೆ. ಅಪರಾಧಿ ನೋಯ್ಡಾದ 'ಪೂರ್ವಾಂಚಲ್ ರಾಯಲ್ ಸಿಟಿ' ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು ಪೊಲೀಸರ ಕಣ್ಣು ತಪ್ಪಿಸಿ ನೋಯ್ಡಾದ ಪೂರ್ವಾಂಚಲ್ ರಾಯಲ್ ಸಿಟಿಯಲ್ಲಿ ಓಡಾಡುತ್ತಿದ್ದ.

ಪೊಲೀಸರ ಕೈಯಿಂದ ತಪ್ಪಿಸಲು ಯತ್ನಿಸಿದ ಸರಕಳ್ಳ

ಲಖನೌ, ಜು. 30: ಇತ್ತೀಚೆಗೆ ದಿನಕ್ಕೊಂದು ವಿಚಿತ್ರ ಕಳವು ಪ್ರಕರಣಗಳು ವರದಿಯಾಗುತ್ತಲೇ (Viral News) ಇವೆ‌. ಇದೀಗ ಉತ್ತರ ಪ್ರದೇಶದ ಅಲಿಗಢದಲ್ಲಿ ಸರಕ‍ಳವು ಮಾಡಿ ತಪ್ಪಿಸಿಕೊಂಡು ಓಡಾಡಿದ ಅಪರಾಧಿಯನ್ನು ಸೆಕ್ಯುರಿಟಿ ಗಾರ್ಡ್‌ ಸಿನಿಮೀಯ ರೀತಿಯಲ್ಲಿ ಸೆರೆ ಹಿಡಿದಿದ್ದಾರೆ. ನೋಯ್ಡಾದ 'ಪೂರ್ವಾಂಚಲ್ ರಾಯಲ್ ಸಿಟಿ' ಕಟ್ಟಡವೊಂದರಲ್ಲಿ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿಯ ಚಾಣಾಕ್ಷತನದಿಂದ ಕಳ್ಳ ಸೆರೆ ಸಿಕ್ಕಿದ್ದಾನೆ. ಪೊಲೀಸರ ಪ್ರಕಾರ, ಆರೋಪಿಯು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಪೊಲೀಸರ ಕಣ್ಣು ತಪ್ಪಿಸಿ ನೋಯ್ಡಾದ ಪೂರ್ವಾಂಚಲ್ ರಾಯಲ್ ಸಿಟಿಯಲ್ಲಿ ಓಡಾಡುತ್ತಿದ್ದ.

ಆತ ಇರುವ ಜಾಗವನ್ನು ಪತ್ತೆ ಹಚ್ಚಿದ ಪೊಲೀಸರು ಪರಿಶೀಲಿಸಲು ಬಂದಿದ್ದರು. ಆದರೆ ಆರೋಪಿಯು ಡೆಲಿವರಿ ತಲುಪಿಸಲು ಬಂದಾಗ ಪೊಲೀಸರು ಇರುವುದನ್ನು ಗಮನಿಸಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಇದನ್ನು ಗಮನಿಸಿದ ತಕ್ಷಣ ಓರ್ವ ಸೆಕ್ಯುರಿಟಿ ಗಾರ್ಡ್ ಆತನನ್ನು ಸುಮಾರು ದೂರದವರೆಗೆ ಬೆನ್ನಟ್ಟಿದ್ದಾರೆ. ಕೆಲವೇ ಕ್ಷಣಗಳಲ್ಲಿ ಉಳಿದ ಭದ್ರತಾ ಸಿಬ್ಬಂದಿ ಜತೆಯಾಗಿ ಆರೋಪಿಯನ್ನು ಸುತ್ತುವರಿದು ಹಿಡಿದಿದ್ದಾರೆ.

ವಿಡಿಯೊ ನೋಡಿ:



ಸಿಸಿಟಿವಿ ದೃಶ್ಯಗಳಲ್ಲಿ ಆತ ಕಟ್ಡಡದ ಹೊರಗೆ ವೇಗವಾಗಿ ಓಡುತ್ತಿರುವುದನ್ನು ತೋರಿಸಲಾಗಿದೆ. ಆದರೆ ಒಬ್ಬ ಭದ್ರತಾ ಸಿಬ್ಬಂದಿ ತಕ್ಷಣ ಆತನನ್ನು ಹಿಂಬಾಲಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ, ಹೆಚ್ಚಿನ ಸಿಬ್ಬಂದಿ ಬೆನ್ನಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದ್ದು ಆತನನ್ನು ಯಶಸ್ವಿಯಾಗಿ ಹಿಡಿದಿದ್ದಾರೆ. ಭದ್ರತಾ ಸಿಬ್ಬಂದಿಯ ತ್ವರಿತ ಕ್ರಮಕ್ಕಾಗಿ ಸೋಷಿಯಲ್ ಮೀಡಿಯಾ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ.

ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ

ಅಲಿಗಢದಲ್ಲಿ ಸರಕಳವು ಮಾಡಿ ತಪ್ಪಿಸಿಕೊಂಡಿದ್ದ ಆತನನ್ನು ಸೆರೆ ಹಿಡಿಯಲು ಹೊಂಚು ಹಾಕುತ್ತಿದ್ದರು. ಪೊಲೀಸರು ತಾಂತ್ರಿಕ ಕಣ್ಗಾವಲು ಮತ್ತು ಸ್ಥಳ ಟ್ರ್ಯಾಕಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಾ, ಅಲಿಗಢ ಪೊಲೀಸರು ಅವನ ಇರುವಿಕೆಯನ್ನು ಪತ್ತೆ ಹಚ್ಚಿದ್ದರು. ವಸತಿ ಸಂಕೀರ್ಣದಲ್ಲಿ ಆತ ಇರುವುದನ್ನು ಗಮನಿಸಿ ಅಲ್ಲಿಗೆ ಬಂದಿದ್ದರು. ಸದ್ಯ ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ.

ಈ ಕಳ್ಳನನ್ನು ಬೆನ್ನಟ್ಟುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು ಭದ್ರತಾ ಸಿಬ್ಬಂದಿಯ ಸಮಯ ಪ್ರಜ್ಞೆಗೆ ಮೆಚ್ಚಲೇ ಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.