ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫ್ಲಿಪ್‌ಕಾರ್ಟ್‌ನಲ್ಲಿ 95,000 ರುಪಾಯಿಯ ಸ್ಯಾಮ್‌ಸಂಗ್ ಟ್ಯಾಬ್ ಆರ್ಡರ್ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಹರಿದು ಹೋದ ಹಳೆಯ ಬುಕ್! ವಿಡಿಯೊ ನೋಡಿ

Viral Video: ಕೆಲವೊಮ್ಮೆ ಇ ಕಾರ್ಮಸ್ ವೆಬ್‌ಸೈಟ್‌ಗಳಲ್ಲಿ ನಾವು ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಬೇರೆ ಯಾವುದೇ ವಸ್ತು ಡೆಲಿವರಿ ಆಗುತ್ತದೆ. ಇದೀಗ ಗ್ರಾಹಕರೊಬ್ಬರಿಗೆ ಇದೇ ರೀತಿಯ ಅನುಭವವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಸುಮಾರು 95,000 ರುಪಾಯಿ ಮೌಲ್ಯದ ಪ್ರೀಮಿಯಂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಅನ್ನು ಆರ್ಡರ್ ಮಾಡಿ ಕೈ ಸುಟ್ಟುಕೊಂಡಿದ್ದಾರೆ. ಪ್ಯಾಕ್ ಒಳಗೆ ಬಂದಿದ್ದು ಹರಿದು ಹೋದ ಹಳೆಯ ಬುಕ್ ಇತ್ತು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಟ್ಯಾಬ್ ಆರ್ಡರ್‌ ಮಾಡಿದ ಗ್ರಾಹಕನಿಗೆ ಸಿಕ್ಕಿದ್ದು ಹರಿದು ಹೋದ ಹಳೆಯ ಬುಕ್

ನವದೆಹಲಿ, ಜು. 12: ಇತ್ತೀಚಿನ ದಿನದಲ್ಲಿ ಯಾವುದೇ ಅಗತ್ಯ ವಸ್ತು ಬೇಕೆಂದಾಗ ಆನ್‌ಲೈನ್ ಮೂಲಕವೇ ಖರೀದಿಸುತ್ತೇವೆ. ಆದರೆ ಇಲ್ಲಿ ಬೆಲೆ ಕಡಿಮೆ ಇದ್ದರೂ ಗುಣಮಟ್ಟದ ವಿಚಾರದ ಬಗ್ಗೆ ದೂರುಗಳು ಕೇಳಿಬರುತ್ತಲೇ ಇವೆ. ಕೆಲವೊಮ್ಮೆ ಇ ಕಾರ್ಮಸ್ ವೆಬ್‌ಸೈಟ್‌ಗಳಲ್ಲಿ ನಾವು ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಯಾವುದೇ ವಸ್ತು ನಮಗೆ ತಲುಪಿ ಬಿಡುತ್ತದೆ. ಇದೀಗ ಗ್ರಾಹಕರೊಬ್ಬರಿಗೆ ಇದೇ ರೀತಿಯ ಅನುಭವವಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಸುಮಾರು 95,000 ರುಪಾಯಿ ಬೆಲೆಯ ಪ್ರೀಮಿಯಂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಅನ್ನು ಆರ್ಡರ್ ಮಾಡಿದ್ದು ಪ್ಯಾಕ್ ಒಳಗೆ ಬಂದಿದ್ದು ಮಾತ್ರ ಹರಿದು ಹೋದ ಹಳೆಯ ಬುಕ್. ಈ ಅನ್‌ಬಾಕ್ಸಿಂಗ್ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಆನ್‌ಲೈನ್ ವೆಬ್‌ಸೈಟ್‌ನಲ್ಲಿ ಆರ್ಡರ್‌ ಮಾಡಿದ ಅನೇಕ ಸಂದರ್ಭಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ಇತ್ತೀಚೆಗೆ ಯುವಕನೊಬ್ಬ ದುಬಾರಿ ಬೆಲೆಯ ಮೊಬೈಲ್‌ ಆರ್ಡರ್ ಮಾಡಿದಾಗ ಬಾಕ್ಸಿಂಗ್‌‌ ಒಳಗೆ ಬಟ್ಟೆ ಒಗೆಯುವ ಸೋಪ್ ಇದ್ದದ್ದನ್ನು ಕಂಡು ಅಚ್ಚರಿ ವ್ಯಕ್ತಡಿಸಿದ್ದರು. ಇದೀಗ ಯುವಕ ಪ್ಯಾಕ್‌ ತೆರೆದಾಗ ಒಳಗೆ ಯಾವುದೇ ಟ್ಯಾಬ್ ಇರಲಿಲ್ಲ, ಬದಲಿಗೆ ಹರಿದು ಹೋದ ಹಳೆಯ ಎಕನಾಮಿಕ್ಸ್ ಪುಸ್ತಕವಿತ್ತು.

ವಿಡಿಯೊ ನೋಡಿ:



ಗ್ರಾಹಕ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ʼʼಸುಮಾರು 95,000 ರುಪಾಯಿ ಬೆಲೆಯ ಹೈ-ಎಂಡ್ ಟ್ಯಾಬ್ ಅನ್ನು ಆರ್ಡರ್ ಮಾಡಿದ್ದೆ. ಡೆಲಿವರಿ ಇರುವಾಗಲೇ ಅನ್‌ಬಾಕ್ಸಿಂಗ್ ವಿಡಿಯೊ ರೆಕಾರ್ಡ್ ಮಾಡಲು ನಾನು ನಿರ್ಧರಿಸಿದೆ. ಆದರೆ ಬಾಕ್ಸ್ ಓಪನ್ ಮಾಡಿದ ತಕ್ಷಣ ಇಬ್ಬರಿಗೂ ಶಾಕ್ ಕಾದಿತ್ತು. ಹೊಸ ಬ್ರ್ಯಾಂಡೆಡ್ ಟ್ಯಾಬ್ ಇರಬೇಕಾದ ಜಾಗದಲ್ಲಿ ಹಳೆಯ, ಉಪಯೋಗಿಸಿದ ಎಕನಾಮಿಕ್ಸ್ ಪುಸ್ತಕವಿತ್ತುʼʼ ಎಂದು ವಿವರಿಸಿದ್ದಾರೆ.

ಶಾಲೆಗೆ ಹೋಗಲು ಕಾಯುತ್ತಿದ್ದ ಅಪರಿಚಿತ ಬಾಲಕಿಗೆ ನೆರವಾದ ಬಾಲಕ

"95 ಸಾವಿರ ರುಪಾಯಿ ಟ್ಯಾಬ್ ಆರ್ಡರ್ ಮಾಡಿದ್ದೆ. ಆದರೆ ಫ್ಲಿಪ್‌ಕಾರ್ಟ್ ನನಗೆ ಹರಿದ ಮತ್ತು ಬಳಸಿದ ಅರ್ಥಶಾಸ್ತ್ರ ಪುಸ್ತಕವನ್ನು ನೀಡಿತು" ಎಂದು ಗ್ರಾಹಕ ತಿಳಿಸಿದ್ದಾರೆ. ಘಟನೆಯನ್ನು ಅರಿತ ಡೆಲಿವರಿ ಎಕ್ಸಿಕ್ಯೂಟಿವ್, ಈ ಪ್ಯಾಕೇಜ್ ಅನ್ನು ತಕ್ಷಣವೇ ಸೆಲ್ಲರ್‌ಗೆ ವಾಪಸ್ ಕಳುಹಿಸಲು ಒಪ್ಪಿಕೊಂಡಿದ್ದಾರೆ.

ವಿಡಿಯೊ ವೈರಲ್ ಆಗಿ ಇ-ಕಾಮರ್ಸ್ ಸಂಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಫ್ಲಿಪ್‌ಕಾರ್ಟ್ ತಕ್ಷಣವೇ ರೆಸ್ಪಾನ್ಸ್ ಮಾಡಿದೆ. ʼʼನಿಮ್ಮ ಆರ್ಡರ್ ವಿಷಯದಲ್ಲಿ ಇಂತಹ ಘಟನೆ ನಡೆದಿರುವುದಕ್ಕೆ ನಮಗೆ ತೀವ್ರ ವಿಷಾದವಿದೆ. ನಾವು ಇದನ್ನು ಬಗೆಹರಿಸುತ್ತೇವೆʼʼ ಎಂದಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಯಾವುದೇ ಇ-ಕಾಮರ್ಸ್ ಸೈಟ್‌ಗಳಿಂದ 1,000 ರುಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ಎಂದಿಗೂ ಖರೀದಿಸಬೇಡಿ ಎಂದು ಕೆಲವರು ಸಲಹೆ ನೀಡಿದ್ದಾರೆ.