ಸಹರಾನ್‌ಪುರ, ಮೇ 15: "ವೈದ್ಯೋ ನಾರಾಯಣೋ ಹರಿ"ಎನ್ನುವ ಮಾತನ್ನು ನೀವು ಕೇಳಿರಬಹುದು. ಇದೀಗ ವೈದ್ಯ ಕೀಯ ಕ್ಷೇತ್ರದಲ್ಲಿ ಮಾನವೀಯತೆ ಮೆರೆದಿರುವ ಘಟನೆಯೊಂದು ಸಹರಾನ್ ಪುರದಲ್ಲಿ (Saharanpur) ನಡೆದಿದೆ. ಮಹಿಳಾ ವೈದ್ಯರೊಬ್ಬರು ಆರೋಗ್ಯ ಕೇಂದ್ರದಲ್ಲಿ ನವಜಾತ ಶಿಶುವನ್ನು ಉಳಿಸಲು ಬಾಯಿಯಿಂದ ಬಾಯಿ ಕೊಟ್ಟು ಉಸಿರಾಟ ನೀಡಿದ ಘಟನೆಯೊಂದು ನಡೆದಿದೆ. ಸದ್ಯ ವೈದ್ಯರ ಸಮಯ ಪ್ರಜ್ಞೆ ಯಿಂದ ಮಗುವಿನ ಪ್ರಾಣ ಉಳಿದಿದ್ದು ನೆಟ್ಟಿಗರು ವೈದ್ಯರ ಪ್ರಮಾಣಿಕತೆಯ ವ್ಯಕ್ತಿತ್ವಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ನಾನೌಟಾ ಆರೋಗ್ಯ ಕೇಂದ್ರ ದಲ್ಲಿ ಈ ಘಟನೆ ನಡೆದಿದೆ. ಮಗು ಹುಟ್ಟಿದ ತಕ್ಷಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಮಗುವಿನ ಉಸಿರಾಟ ನಿಂತು ಮೃತ ಪಟ್ಟಂತೆ ಕಂಡ ನವಜಾತ ಶಿಶುವಿಗೆ ತಮ್ಮ ಬಾಯಿಯಿಂದ ಉಸಿರಾಟ ನೀಡಿ ವೈದ್ಯೆಯೊಬ್ಬರು ಮರು ಜೀವ ನೀಡಿದ್ದಾರೆ.
ವಿಡಿಯೋ ನೋಡಿ:
ದಾದನ್‌ಪುರ ಗ್ರಾಮದ ನಿವಾಸಿ ಆಯೇಷಾ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಯಶಸ್ವಿಯಾಗಿ ಪೂರ್ಣಗೊಂಡಿದ್ದರೂ, ಮಗು ಜನನದ ನಂತರ ಅಳಲು ಅಥವಾ ಉಸಿರಾಟದ ಸಮಸ್ಯೆ ಉಂಟಾಯಿತು. ಇದರಿಂದ ಮನೆಯವರು ಕೂಡ ಆತಂಕಕ್ಕೆ ಒಳಗಾಗಿದ್ದರು. ಲಭ್ಯವಿರುವ ವೈದ್ಯಕೀಯ ಉಪಕರಣಗಳನ್ನು ಬಳಸಿಕೊಂಡು ಅಲ್ಲಿನ ವೈದ್ಯರು ಆಮ್ಲಜನಕ ಬೆಂಬಲವನ್ನು ನೀಡಿದರೂ ನವಜಾತ ಶಿಶುವಿನ ಸ್ಥಿತಿ ಸುಧಾರಿಸಲಿಲ್ಲ.
Viral Video: ಗಡಿ ದಾಟಿ ಭಾರತದೊಳಗೆ ಸುಲಭವಾಗಿ ಕಾಲಿಡಬಹುದು ಎಂದ ಪಾಕಿಸ್ತಾನ ಪತ್ರಕರ್ತೆಗೆ ತರಾಟೆ
ಕೂಡಲೇ ಸ್ಥಳದಲ್ಲಿದ್ದ ಡಾ. ರುಮಾ ಅವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು ತಡಮಾಡದೆ ಮಗುವಿಗೆ ಬಾಯಿಯಿಂದ ಉಸಿರು ನೀಡುತ್ತಾ ಎದೆಯನ್ನು ಮೆಲ್ಲನೆ ಒತ್ತಿದ್ದಾರೆ. ನವಜಾತ ಶಿಶು ಅಂತಿಮವಾಗಿ ಅಳಲು ಆರಂಭಿಸಿದೆ.. ವೈದ್ಯರ ಈ ಸಾಹಸದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.ಆಸ್ಪತ್ರೆ ಸಿಬ್ಬಂದಿಯೂ ಈ ದೃಶ್ಯ ರೆಕಾರ್ಡ್ ಮಾಡಿದ್ದು ರಕ್ಷಣಾ ಪ್ರಯತ್ನವನ್ನು ಸೆರೆಹಿಡಿದಿದೆ, ಸದ್ಯ ವೈದ್ಯರ ಸಮರ್ಪಣೆ ಭಾವಕ್ಕೆ ಪ್ರಶಂಸೆ ಸಿಕ್ಕಿದೆ.