ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಛೇ ಇವನೆಂತಾ ಪಾಪಿ; ದೇವಾಲಯದ ಬಳಿ ಕುಳಿತಿದ್ದ ಭಿಕ್ಷುಕಿಯ ಮೇಲೆ ಹಲ್ಲೆ ನಡೆಸಿದ ಅಂಗಡಿ ಮಾಲೀಕ

Viral Video: ಮಹಿಳಾ ಭಿಕ್ಷುಕಿಯೊಬ್ಬರ ಮೇಲೆ ವ್ಯಕ್ತಿಯೋರ್ವ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯೊಂದಿಗೆ ಕುಳಿತಿದ್ದ ಆಕೆಯ ಮಕ್ಕಳು ದೇವಾಲಯದ ಹೊರಗೆ ನಿಲ್ಲಿಸಿದ್ದ ಬೈಕನ್ನು ಮುಟ್ಟಿದ್ದಾರೆ ಎನ್ನುವ ಕಾರಣಕ್ಕೆ ಭೀಕರವಾಗಿ ಥಳಿಸಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ದೇವಾಲಯದ ದ್ವಾರದ ಬಳಿ ಕುಳಿತಿದ್ದ ಮಹಿಳಾ ಭಿಕ್ಷುಕಿಯ ಮೇಲೆ ಹಲ್ಲೆ

ಪಂಜಾಬ್‌,ಆ. 14: ಕಪುರ್ತಲಾದಲ್ಲಿರುವ ಮಾತಾ ಶ್ರೀ ಭದ್ರಕಾಳಿ ದೇವಸ್ಥಾನದ ಆವರಣದ ಬಳಿ ಅಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳಾ ಭಿಕ್ಷುಕಿಯೊಬ್ಬರ ಮೇಲೆ ವ್ಯಕ್ತಿಯೋರ್ವ ಕ್ರೂರವಾಗಿ ಹಲ್ಲೆಯನ್ನು ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಹಿಳೆಯೊಂದಿಗೆ ಕುಳಿತಿದ್ದ ಆಕೆಯ ಮಕ್ಕಳು ದೇವಾಲಯದ ಹೊರಗೆ ನಿಲ್ಲಿಸಿದ್ದ ಬೈಕನ್ನು ಮುಟ್ಟಿದ್ದಾರೆ ಎನ್ನುವ ಕಾರಣಕ್ಕೆ ಭೀಕರವಾಗಿ ಥಳಿಸಿದ್ದಾನೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.

ದೇವಾಲಯದ ದ್ವಾರದ ಬಳಿ ಕುಳಿತಿದ್ದ ಮಹಿಳಾ ಭಿಕ್ಷುಕಿಯ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಬೈಕ್ ಮಾಲೀಕ ಜಗಳವಾಡಿದ್ದಾನೆ. ಭಿಕ್ಷುಕಿ ಮಹಿಳೆಯನ್ನು ನೆಲಕ್ಕೆ ತಳ್ಳಿ ಚಪ್ಪಲಿಯಿಂದ ಬಾರಿಸಿದ್ದಾನೆ. ಅಷ್ಟೇ ಅಲ್ಲದೆ ಕಾಲಿನಿಂದ ತೀವ್ರವಾಗಿ ಒದ್ದಿರುವ ದೃಶ್ಯವು ವಿಡಿಯೊದಲ್ಲಿದೆ.

ವಿಡಿಯೋ ನೋಡಿ:



ಕಪೂರ್ಥಲಾದ ಮಾತಾ ಶ್ರೀ ಭದ್ರಕಾಳಿ ದೇವಾಲಯದ ಹೊರ ಭಾಗದಲ್ಲಿ ಈ ಘಟನೆ ನಡೆದಿದೆ. ದೇವಾಲಯದ ದ್ವಾರದ ಬಳಿ ಕುಳಿತಿದ್ದ ಮಹಿಳೆಯನ್ನು ಬೈಕ್ ನ ಮಾಲೀಕ ನೆಲಕ್ಕೆ ತಳ್ಳಿ ತನ್ನ ಪಾದರಕ್ಷೆಗಳಿಂದ ಹೊಡೆಯುವುದನ್ನು ಕಾಣಬಹುದು. ಕೆಲವು ಭಕ್ತರು ಮತ್ತು ದಾರಿಹೋಕರು ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ, ಆರೋಪಿ ಹಿಂತಿರುಗಿ ಬಂದು ಮಹಿಳೆಯನ್ನು ಮತ್ತೆ ಒದ್ದಿದ್ದಾನೆ.

Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ

ಕೇವಲ ಮಕ್ಕಳು ತಿಳಿಯದೇ ಬೈಕ್ ಮುಟ್ಟಿದ್ದಾರೆ ಅನ್ನುವ ಕಾರಣಕ್ಕೆ ಮಹಿಳೆಗೆ ಹಲ್ಲೆ ನಡೆಸಿ ರುವುದು ತಪ್ಪು. ಈ ಘಟನೆ ಸಾರ್ವಜನಿಕರಲ್ಲಿ ಕೋಪವನ್ನು ಹುಟ್ಟುಹಾಕಿದ್ದು ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಘಟನೆಯಿಂದ ಭಯಭೀತರಾದ ಮಹಿಳೆ ಆರಂಭದಲ್ಲಿ ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಲಿಲ್ಲ. ವಿಡಿಯೊ ವೈರಲ್ ಆದ ಬಳಿಕ ಪೊಲೀಸರೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

​"ಹಲ್ಲೆಯಲ್ಲಿ ಭಾಗಿಯಾಗಿರುವ ವ್ಯಕ್ತಿಯನ್ನು ಶೇಖುಪುರ ನಿವಾಸಿ ಪವನ್ ಕುಮಾರ್ ಎಂದು ಗುರುತಿಸಲಾಗಿದೆ". ಈತ ದೇವಾಲಯದ ಎದುರಲ್ಲೇ ಅಂಗಡಿಯೊಂದನ್ನು ನಡೆಸುತ್ತಿದ್ದಾನೆ. ಆರೋಪಿ ವಿಕಾಸ್ ಶರ್ಮಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಕರುಣೆ ಇಲ್ಲದ ರಾಕ್ಷಸ ಈತ ಎಂದು ಕಿಡಿಕಾರಿದ್ದಾರೆ..