ನವದೆಹಲಿ, ಜೂ. 1: ಭಾರತದಲ್ಲಿ ಅತ್ಯಂತ ಆಕರ್ಷಣೀಯ ಸ್ಥಳಗಳಿದ್ದರೂ ಸ್ವಚ್ಛತೆ ಕೊರತೆ ಸವಾಲಿಗೆ ಪರಿಣಮಿಸಿದೆ. ಈ ಬಗ್ಗೆ ದೂರು ಕೇಳಿ ಬರುತ್ತಲೇ ಇದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜಗಳನ್ನು ಎಸೆಯುವುದು, ನೈರ್ಮಲ್ಯ ಕಾಪಾಡದೆ ಇರುವ ಬಗ್ಗೆ ಅನೇಕ ವಿಡಿಯೊಗಳು ವೈರಲ್ ಆಗಿವೆ. ಇದೀಗ ಉತ್ತರಾಖಂಡ ಚಾರಣದ ಹಾದಿಯಲ್ಲಿ ವಿದೇಶಿ ಪ್ರವಾಸಿಯೊಬ್ಬರು ಪ್ಲಾಸ್ಟಿಕ್, ತ್ಯಾಜ್ಯ ಹೆಕ್ಕಿ ಸ್ವಚ್ಛಗೊಳಿಸುತ್ತಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಇದು ಬೇಜವಾಬ್ದಾರಿ ಪ್ರವಾಸೋದ್ಯಮ, ನಾಗರಿಕ ಪ್ರಜ್ಞೆಯ ಕೊರತೆ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಸ್ವಚ್ಛತೆ ಪಾಲಿಸದಿರುವವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅನೇಕರು ಆಗ್ರಹಿಸಿದ್ದಾರೆ.
ಇಂಗ್ಲೆಂಡ್‌ನ ಪ್ರವಾಸಿಗರೊಬ್ಬರು ಉತ್ತರಾಖಂಡದ ಸ್ಥಳಕ್ಕೆ ಚಾರಣ ಮಾಡಲು ತೆರಳಿದ್ದರು. ಆದರೆ ಹಾದಿಯುದ್ದಕ್ಕೂ ಬಿದ್ದ ಪ್ಲಾಸ್ಟಿಕ್ ಬಾಟಲಿಗಳು, ಆಹಾರದ ಪ್ಯಾಕೆಟ್‌ಗಳು ನೋಡಿ ಅವರು ದಂಗಾಗಿ ಹೋಗಿದ್ದಾರೆ. ಸುಂದರ ಪ್ರವಾಸಿ ಸ್ಥಳದಲ್ಲಿ ಈ ರೀತಿ ಕಸ ತುಂಬಿರುವ ಬಗ್ಗೆ ಅವರು ಆತಂಕ ವ್ಯಕ್ತ ಪಡಿಸಿದ್ದಾರೆ. ನಂತರ ಅಲ್ಲಿದ್ದ ಕೆಲವು ಕಸವನ್ನು ಆಯ್ದು ಚೀಲಗಳಲ್ಲಿ ತುಂಬಿಕೊಂಡಿದ್ದಾರೆ.
ವಿಡಿಯೊ ನೋಡಿ:
ಕಸದಿಂದ ತುಂಬಿದ ಚೀಲಗಳನ್ನು ಹೊತ್ತುಕೊಂಡು, ನೈಸರ್ಗಿಕ ಭೂದೃಶ್ಯವನ್ನು ನೋಡುತ್ತ ಅವರು ಸಾಗಿದ್ದಾರೆ. ಅವರು ಪ್ಲಾಸ್ಟಿಕ್ ಬಾಟಲಿಗಳು, ಆಹಾರ ಪ್ಯಾಕೆಟ್ ಡಬ್ಬಿಗಳು ಮತ್ತು ಮಾರ್ಗದಲ್ಲಿ ಹರಡಿರುವ ಇತರ ಕಸವನ್ನು ಎತ್ತಿಕೊಳ್ಳುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ದೃಶ್ಯ ತ್ವರಿತವಾಗಿ ಆನ್‌ಲೈನ್‌ನಲ್ಲಿ ಗಮನ ಸೆಳೆಯಿತು. ಸಾವಿರಾರು ವೀಕ್ಷಕರು ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
ಮದುವೆಗೆ ಕುಂಕುಮ ತರಲು ಮರೆತ ವರ; ಆಮೇಲಾಗಿದ್ದೇನು?
ಸ್ಥಳೀಯ ಪ್ರವಾಸಿಗರ ವರ್ತನೆಯ ಬಗ್ಗೆ ನೆಟ್ಟಿಗರು ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ನೆಟ್ಟಿಗರೊಬ್ಬರು, ʼʼಅವರ ಬಗ್ಗೆ ಹೆಮ್ಮೆ, ನಮ್ಮ ಬಗ್ಗೆ ಅಸಹ್ಯ...ನಮಗೆ ಮೂಲಭೂತ ನಾಗರಿಕ ಪ್ರಜ್ಞೆಯನ್ನು ಕಲಿಸಲು ವಿದೇಶಿಯರು ಬೇಕುʼʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ʼʼಪ್ರಕೃತಿಯನ್ನು ಆನಂದಿಸುತ್ತಾರೆ. ಆದರೆ ಅದನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ಮರೆಯುತ್ತಾರೆʼʼ ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು, ʼʼಪ್ರಕೃತಿಯನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿʼʼ ಎಂದು ಕಮೆಂಟ್ ಮಾಡಿದ್ದಾರೆ.