ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಂದೇ ಭಾರತ್ ಸ್ಲೀಪರ್ ಕೋಚ್‌ನ ನೈರ್ಮಲ್ಯ ಕಂಡು ಅಚ್ಚರಿಗೆ ಒಳಗಾದ ವಿದೇಶಿ ಮಹಿಳೆ: ವಿಡಿಯೊದಲ್ಲಿ ಹೇಳಿದ್ದೇನು?

Viral Video: ಭಾರತೀಯ ರೈಲ್ವೆ ಸೇವೆಯಾದ 'ವಂದೇ ಭಾರತ್ ಸ್ಲೀಪರ್' ಕೋಚ್' ನ ಸ್ವಚ್ಛತೆಯ ಬಗ್ಗೆ ವಿದೇಶಿ ಮಹಿಳೆ ಕೊಂಡಾಡಿದ್ದಾರೆ. ಹಳೆಯ ಕೋಚ್ , ಕೊಳಕು ಶೌಚಾಲಯ ಇರಬಹುದು ಎಂದು ಊಹಿಸಿ ರೈಲು ಹತ್ತಿದ ಮಹಿಳೆ ಅಲ್ಲಿನ ಗುಣಮಟ್ಟ ಕಂಡು ನಿಜಕ್ಕೂ ಆಶ್ಚರ್ಯ ವೆನೆಸಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ವಂದೇ ಭಾರತ್ ಸ್ಲೀಪರ್ ಕೋಚ್ ನ ಸೌಲಭ್ಯ ಬಗ್ಗೆ ಕೊಂಡಾಡಿದ ವಿದೇಶಿ ಮಹಿಳೆ

ನವದೆಹಲಿ,ಜು.23: ಲಕ್ಷಾಂತರ ವಿದೇಶಿ ಪ್ರವಾಸಿಗರನ್ನು ಭಾರತವು ಸೆಳೆಯುತ್ತಿದೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಐತಿಹಾಸಿಕ ಸ್ಥಳ, ವೈವಿಧ್ಯತೆಯನ್ನು ಅನುಭವಿಸಿ ಭಾರತವನ್ನು ಬಿಟ್ಟು ಹೋಗದಷ್ಟು ಆಕರ್ಷಿತರಾಗುತ್ತಾರೆ.. ಮುಖ್ಯವಾಗಿ ಇಲ್ಲಿನ ಮೂಲಭೂತ ಸೌಕರ್ಯಗಳು, ಸಾರಿಗೆ ವ್ಯವಸ್ಥೆ, ಕ್ಷಣ ಮಾತ್ರದಲ್ಲಿ ಅಗತ್ಯವಸ್ತುಗಳನ್ನು ತಲುಪಿಸುವ ಆನ್ ಲೈನ್ ಆ್ಯಪ್ ಗಳು ಬಗ್ಗೆ ವಿದೇಶಿಗರು ಹೊಗಳುತ್ತಿರುತ್ತಾರೆ. ಇದೀಗ ಭಾರತೀಯ ರೈಲ್ವೆ ಸೇವೆಯಾದ 'ವಂದೇ ಭಾರತ್ ಸ್ಲೀಪರ್' ಕೋಚ್' ನ ಸ್ವಚ್ಛತೆಯ ಬಗ್ಗೆ ವಿದೇಶಿ ಮಹಿಳೆ ಕೊಂಡಾಡಿದ್ದಾರೆ. ಹಳೆಯ ಕೋಚ್ , ಕೊಳಕು ಶೌಚಾಲಯ ಇರಬಹುದು ಎಂದು ಊಹಿಸಿ ರೈಲು ಹತ್ತಿದ ಮಹಿಳೆ ಅಲ್ಲಿನ ಗುಣಮಟ್ಟ ಕಂಡು ನಿಜಕ್ಕೂ ಆಶ್ಚರ್ಯ ವೆನೆಸಿದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral Video) ಆಗುತ್ತಿದೆ.

ವಂದೇ ಭಾರತ್ ಸ್ಲೀಪರ್ ಕೋಚ್ ಆರಂಭವಾದ ಆರು ತಿಂಗಳ ನಂತರ ವಿದೇಶಿ ಮಹಿಳೆಯೊಬ್ಬರು ಇದರಲ್ಲಿ ಪ್ರಯಾಣಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆದ ಅನುಷಾ ಇತ್ತೀಚೆಗೆ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಗುವಾಹಟಿಯಿಂದ ಕೋಲ್ಕತ್ತಾಗೆ ಪ್ರಯಾಣಿಸಿದ್ದಾರೆ.

ವಿಡಿಯೋ ನೋಡಿ:



ಜನವರಿಯಲ್ಲಿ ಈ ರೈಲು ಉದ್ಘಾಟನೆಯಾದ ಸಂದರ್ಭದಲ್ಲಿಯೂ ಅವರು ಈ ಹಿಂದೆ ಪ್ರಯಾಣಿಸಿದ್ದರು. ಆದರೆ, ಆರು ತಿಂಗಳ ನಂತರ ರೈಲು ಗುಣಮಟ್ಟ ಕಳೆದುಕೊಂಡಿರಬಹುದು, ಸ್ವಚ್ಛತೆ ಇರದೇ ಇರಬಹುದು ಎಂದೆಲ್ಲಾ ಯೋಚಿಸಿದ್ದರು. ಆದರೆ ಬೋಗಿ ಹತ್ತಿದ ಕೂಡಲೇ ಅಚ್ಚರಿಗೆ ಒಳಗಾಗಿದ್ದಾರೆ. ರೈಲು ಈಗಲೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿತ್ತು. ರೈಲು ಹತ್ತಿದ ತಕ್ಷಣ ಅವರಿಗೆ ಬಿಸಿ ಚಹಾ ನೀಡಲಾಯಿತು. ಬಳಿಕ ಕೋಚ್ ವೀಕ್ಷಣೆ ಮಾಡಿದಾ ಆಘಾತಕ್ಕೊಳಗಾಗಿದ್ದೇನೆ. ಕ್ಯಾಬಿನ್ ದೊಡ್ಡದಾಗಿದೆ, ಆಧುನಿಕವಾಗಿತ್ತು, ಆರು ತಿಂಗಳ ನಂತರವೂ ನಿಜವಾಗಿಯೂ ಒಂದು ಕಲೆ ಇರಲಿಲ್ಲ ಅಂದರು.

Viral Video: ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಯಾವುದೇ ರೈಲಿನ ಅಸಲಿ ನಿರ್ವಹಣೆ ಗೊತ್ತಾಗುವುದು ಅಲ್ಲಿನ ಶೌಚಾಲಯ ಹೇಗಿದೆ ಎಂಬುದರ ಮೇಲೆ, ಅನುಷಾ ರೈಲಿನ ಶೌಚಾಲಯವನ್ನು ಪರೀಕ್ಷಿಸಿದಾಗ ಬಹಳಷ್ಟು ಸ್ವಚ್ಛತೆಯಿಂದ ಕೂಡಿತ್ತು. ಫಸ್ಟ್ ಎಸಿ ಕೋಚ್‌ನಲ್ಲಿ ಅತ್ಯಂತ ಸ್ವಚ್ಛವಾದ ಪ್ರತ್ಯೇಕ 'ಶವರ್ ಏರಿಯಾ ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಹಾರವು ಕೂಡ ಮೊದಲ ಪ್ರಯಾಣ ಮಾಡಿದ ಅನುಭದಂತೆ ರುಚಿಕರ ವಾಗಿತ್ತು. ಒಟ್ಟಿನಲ್ಲಿ ವಂದೇ ಭಾರತ್ ಪ್ರಯಾಣ ಸುಖಕರವಾಗಿತ್ತು ಎಂದಿದ್ದಾರೆ.

ಹಲವು ಬಳಕೆದಾರರು ಈ ವಿಮರ್ಶೆಯನ್ನು ಮೆಚ್ಚಿಕೊಂಡಿದ್ದು ಬಳಕೆದಾರರೊಬ್ಬರು ರೈಲು ಗಳನ್ನು ಸ್ವಚ್ಛವಾಗಿಡಲು ಪ್ರಯಾಣಿಕರು ಸಮಾನ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದರು. ಮತ್ತೊಬ್ಬರು ''ಇದು ಪ್ರಯಾಣಿಕರ ಕರ್ತವ್ಯ'' ಎಂದು ಬರೆದಿದ್ದಾರೆ..