ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಈ ನಗರದಲ್ಲಿ ಮಹಿಳೆಯರಿಗೆ ಸುರಕ್ಷಿತೆಯೇ ಇಲ್ಲ; ವಿದೇಶಿ ಮಹಿಳೆ ಹೀಗೆ ಹೇಳಿದ್ದೇಕೆ?

Viral Video: ಭಾರತೀಯರು ವಿದೇಶಿಗರನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವ ದೊಡ್ಡ ಮಟ್ಟದ ಚರ್ಚೆಗಳು ಕೂಡ ನಡೆಯುತ್ತಿವೆ. ಇದೀಗ ಭಾರತದಲ್ಲಿ ಮೂರು ತಿಂಗಳ ಕಾಲ ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದ ಜಪಾನ್ ಮೂಲದ ಯುವತಿಯೊಬ್ಬಳು ತಮಗೆ ಎದುರಾದ ಅನುಭವವನ್ನು ಮುಕ್ತವಾಗಿ ಶೇರ್ ಮಾಡಿಕೊಂಡಿದ್ದಾರೆ. ಭಾರತದ ಆತಿಥ್ಯ ಹಾಗೂ ಅಲ್ಲಿನ ಜನರ ಪ್ರೀತಿಯನ್ನು ಮುಕ್ತ ಕಂಠದಿಂದ ಹೊಗಳಿದ ಅವರು ಅದೇ ಸಮಯದಲ್ಲಿ ಕಿರುಕುಳ ಎಸಗಿದ ಪ್ರಮುಖ ನಗರಗಳನ್ನು ಪಟ್ಟಿ ಮಾಡಿದ್ದಾರೆ.

ಈ ನಗರದಲ್ಲಿ ಮಹಿಳೆಯರಿಗೆ ಸುರಕ್ಷಿತ ಇಲ್ಲ ಎಂದ ವಿದೇಶಿ ಮಹಿಳೆ

ನವದೆಹಲಿ,ಜೂ.12: ಇತ್ತೀಚಿನ ದಿನದಲ್ಲಿ ಭಾರತೀಯರು ವಿದೇಶಿ ಸ್ಥಳದಲ್ಲಿ ಮನಬಂದಂತೆ ವರ್ತಿಸುತ್ತಿದ್ದಾರೆ ಎನ್ನುವ ಹಲವು ದೂರುಗಳು ಕೇಳಿಬಂದಿತ್ತು. ಅದರಲ್ಲೂ ಭಾರತೀಯರು ವಿದೇಶಿಗರನ್ನು ಹೇಗೆ ನೋಡಿಕೊಳ್ಳುತ್ತಾರೆ ಎನ್ನುವ ದೊಡ್ಡ ಮಟ್ಟದ ಚರ್ಚೆಗಳು ಕೂಡ ನಡೆಯುತ್ತಿವೆ. ಇದೀಗ ಭಾರತದಲ್ಲಿ ಮೂರು ತಿಂಗಳ ಕಾಲ ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದ ಜಪಾನ್ ಮೂಲದ ಯುವತಿಯೊಬ್ಬಳು ತಮಗೆ ಎದುರಾದ ಅನುಭವವನ್ನು ಮುಕ್ತವಾಗಿ ಶೇರ್ ಮಾಡಿಕೊಂಡಿದ್ದಾರೆ. ಭಾರತದ ಆತಿಥ್ಯ ಹಾಗೂ ಅಲ್ಲಿನ ಜನರ ಪ್ರೀತಿಯನ್ನು ಮುಕ್ತ ಕಂಠದಿಂದ ಹೊಗಳಿದ ಅವರು ಅದೇ ಸಮಯದಲ್ಲಿ ಕಿರುಕುಳ ಎಸಗಿದ ಪ್ರಮುಖ ನಗರಗಳನ್ನು ಪಟ್ಟಿ ಮಾಡಿದ್ದಾರೆ. ಸದ್ಯ ಇವರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.

ಭಾರತ ಎಂದಾಗ ಇದು ಆತಿಥ್ಯಕ್ಕೆ ಬಹಳಷ್ಟು ಹೆಸರು ವಾಸಿಯಾಗಿದೆ. ಇಲ್ಲಿನ ಜನರು ಬಹಳಷ್ಟು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ ಎಂದು ವಿದೇಶಿ ಪ್ರವಾಸಿಗರು ಕೊಂಡಾಡಿದ್ದು ಇದೆ. ಇದೀಗ ಮೂರು ತಿಂಗಳಿನ ಕಾಲ ಏಕಾಂಗಿಯಾಗಿ ಪ್ರವಾಸ ಕೈಗೊಂಡಿದ್ದ ಜಪಾನ್ ಮೂಲದ ಕಂಟೆಂಟ್ ಕ್ರಿಯೇಟರ್ ವೊಬ್ಬರು ಭಾರತದ ಹಲವು ವಿಚಾರವನ್ನು ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ವಾರಾಣಸಿ ಅಲ್ಲಿನ ಸ್ಥಳವೂ ಅವರಿಗೆ ಬಹಳಷ್ಟು ಇಷ್ಟವಾಗಿತ್ತು. ಆದರೆ ಇದು ನನ್ನ ಇಡೀ ಪ್ರವಾಸದ ಅತ್ಯಂತ ಅಪಾಯಕಾರಿ ಮತ್ತು ಕಿರುಕುಳದ ಪರಿಸ್ಥಿತಿಯನ್ನು ಅನುಭವಿಸಿದ ಸ್ಥಳವಾಗಿತ್ತು. ಇಲ್ಲಿ ತೀವ್ರ ಅಸುರಕ್ಷಿತ ಪರಿಸ್ಥಿತಿಯನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ.

ವಿಡಿಯೋ ನೋಡಿ:



ನೇಪಾಳ ಗಡಿಯ ಸಮೀಪವಿರುವ ರಕ್ಸೌಲ್ ನಗರದಲ್ಲೂ ಮಾನಸಿಕ ಒತ್ತಡ ಅನುಭವಿಸಿದ್ದೆ. ಸ್ಥಳೀಯ ಹೋಟೆಲ್‌ಗಳು ವಿದೇಶಿಯರಿಗೆ ವಾಸ್ತವ್ಯ ನೀಡಲು ನಿರಾಕರಿಸಿದ್ದು ಅತಿಯಾದ ಹಣವನ್ನು ಬೇಡಿದವು ಎಂದು ಅವರು ದೂರಿದ್ದಾರೆ. ಸಾಮಾನ್ಯವಾಗಿ ಮಹಿಳೆಯರಿಗೆ ಮಂಬೈ ಸುರಕ್ಷಿತ ನಗರ ಎಂದು ಹೇಳಿಕೊಳ್ಳುತ್ತಾರೆ. ಆದರೆ ಮುಂಬೈನಲ್ಲಿ ತಾವು ಲೈಂಗಿಕ ಕಿರುಕುಳವನ್ನು ಎದುರಿಸಬೇಕಾಗಿ ಬಂತು ಮತ್ತು ಅದು ತಮಗೆ ಅತ್ಯಂತ ಭಯಾನಕವಾದ ನೆನಪನ್ನು ಉಳಿಸಿದೆ ಎಂದು ಹನ್ನಾ ಹಂಚಿಕೊಂಡಿದ್ದಾರೆ.

Viral Video: ಇಂಡಿಗೋ ವಿಮಾನ ರದ್ದು; ಪುತ್ರನಿಗಾಗಿ 800 ಕಿ.ಮೀ ದೂರ ಕಾರು ಚಲಾಯಿಸಿದ ತಂದೆ!

ರಾಷ್ಟ್ರರಾಜಧಾನಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು. ಆದಾಗ್ಯೂ,ದೆಹಲಿ ಪರಿಸರವು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ. ತಮಗೆ ಯಾವುದೇ ಅಪರಾಧದ ಭಯ ಕಾಡದಿದ್ದರೂ, ಅಲ್ಲಿನ ವಾತಾವರಣ ಮತ್ತು ಮಾಲಿನ್ಯ ಅವರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ದೆಹಲಿಗೆ ಭೇಟಿ ನೀಡಿದ ಮೂರೂ ಬಾರಿಯೂ ಅನಾರೋಗ್ಯಕ್ಕೆ ಒಳಗಾಗಿದ್ದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಐದನೇ ಸ್ಥಳ ಗುವಾಹಟಿ ಪಟ್ಟಣದಲ್ಲಿ ತಮಗೆ ಯಾವುದೇ ದೊಡ್ಡ ಅನಾಹುತ ಸಂಭವಿಸದಿದ್ದರೂ ಇಲ್ಲಿ ಒಂಟಿಯಾಗಿ ಓಡಾಡಲು ತಮಗೆ ಅಷ್ಟಾಗಿ ಕಂಪರ್ಟ್ ಇರಲಿಲ್ಲ ಎಂದು ಅವರು 5ನೇ ಸ್ಥಾನದಲ್ಲಿ ಗುವಾಹಟಿಯನ್ನು ಹೆಸರಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ನಲ್ಲಿ ಅವರ ವೀಡಿಯೊವನ್ನು ನೋಡಿದ ಸಾಕಷ್ಟು ಜನರು ಕಳವಳ ವ್ಯಕ್ತಪಡಿಸಿದ್ದಾರೆ. ವಿದೇಶಿ ಮಹಿಳೆಗೆ ನಮ್ಮ ದೇಶದಲ್ಲಿ ಇಂತಹ ಅನುಭವ ಆಗಿರುವುದಕ್ಕೆ ನಿಜಕ್ಕೂ ನಾಚಿಕೆಯಾಗುತ್ತಿದೆ. ಇನ್ನು ಭಾರತೀಯರ ಮಹಿಳೆ ಯರ ರಕ್ಷಣೆ ಹೇಗೆ ಸಾಧ್ಯ ಎಂದು ಹಲವಾರು ಮಂದಿ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.