ವಾಷಿಂಗ್ಟನ್, ಮೇ 9: ವನ್ಯ ಜೀವಿ ಮತ್ತು ಮನುಷ್ಯರ ಸ್ನೇಹ ಬಾಂಧವ್ಯ ಸಾರುವ ಅನೇಕ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿರುತ್ತವೆ. ಮಾತು ಬಾರದ ಮೂಕ ಪ್ರಾಣಿಗಳಿಗೂ ಮನುಷ್ಯನ ಭಾಷೆ ಅರ್ಥವಾಗುತ್ತದೆ. ಅವುಗಳಿಗೆ ಒಮ್ಮೆ ಪ್ರೀತಿ ತೋರಿಸಿದರೆ ಸಾಕು ಯಾವ ಸಂದರ್ಭದಲ್ಲೂ ಕೈ ಬಿಡದೇ ಪ್ರೀತಿ ನೀಡುತ್ತವೆ. ಇದೀಗ ಅಮೆರಿಕದ ಸಿಯಾಟಲ್‌ನ ಗ್ಯಾಬಿ ಮನ್ ಎಂಬ ಬಾಲಕಿಯೇ ಉತ್ತಮ ಉದಾಹರಣೆ. ಆಕೆ ಕಾಗೆಗಳೊಂದಿಗೆ ಸ್ನೇಹ ಬೆಳೆಸಿದ್ದು, ಅವುಗಳೂ ಆಕೆಯ ಗೆಳೆತನಕ್ಕೆ ಸ್ಪಂದಿಸಿವೆ.
ಮನುಷ್ಯರು ನಾಯಿ, ಬೆಕ್ಕು, ಕೋತಿಗಳೊಂದಿಗೆ ಸ್ನೇಹ ಮಾಡಿರುವುದನ್ನು ಕೇಳಿರಬಹುದು. ಆದರೆ ಕಾಗೆಯೊಂದಿಗೆ ಫ್ರೆಂಡ್‌ಶಿಪ್ ಅಂದಾಗ ನಿಮಗೂ ಅಚ್ಚರಿ ಎನಿಸಬಹುದು. ಹೌದು. ಸಿಯಾಟಲ್ ನಿವಾಸಿ ಗಾಬಿ ಮಾನ್ ಕೇವಲ ಎಂಟು ವರ್ಷದವಳಿದ್ದಾಗ ಶಾಲಾ ಬಸ್ ನಿಲ್ದಾಣದ ಹತ್ತಿರ ಕಾಗೆಗಳಿಗೆ ಆಹಾರ ಹಾಕಲು ಆರಂಭಿಸಿದ್ದಾಳೆ. ಇದನ್ನೇ ಅಭ್ಯಾಸವಾಗಿ ಆಕೆ ಬೆಳೆಸಿಕೊಂಡಿದ್ದು ಈಗ ಕಾಗೆಗಗಳು ಆಕೆಯ ಬೆಸ್ಟ್ ಪ್ರೆಂಡ್ ಆಗಿವೆ.
ಬಾಲಕಿ ಪ್ರತಿ ದಿನ ಶಾಲೆಯಿಂದ ಬಂದು ಕಾಗೆಗಳಿಗೆ ಅಕ್ಕಿ,ಕಡಲೆಕಾಯಿ ಹೀಗೆ ವಿವಿಧ ತಿನಿಸುಗಳನ್ನು ಹಾಕುತ್ತಿದ್ದಳು. ಆಕೆ ಆಹಾರದ ಚೂರು, ಅಕ್ಕಿ, ಕಡಲೆಯನ್ನು ನೆಲದ ಮೇಲೆ ಎಸೆಯುತ್ತಿದ್ದಳು. ಕಾಲಾನಂತರದಲ್ಲಿ ಕಾಗೆಗಳು ಪ್ರತಿದಿನ ಅವಳ ಮನೆಯ ಬಳಿ ಅವಳಿಗಾಗಿ ಕಾಯುತ್ತಾ ಒಟ್ಟುಗೂಡಲು ಪ್ರಾರಂಭಿಸಿದವು.
ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!
ಕಾಗೆಗಗಳು ತಮಗೆ ಆಹಾರ ನೀಡುವುದನ್ನು ಗಮನಿಸಿ ಅದಕ್ಕೆ ಪ್ರತಿಯಾಗಿ ಬಾಲಕಿಗೆ ಉಡುಗೊರೆ ನೀಡುತ್ತಿದ್ದವು. ಬಾಲಕಿ ಆಹಾರ ನೀಡುತ್ತಿದ್ದ ಪ್ರದೇಶದಲ್ಲಿ ಯಾವುದಾದರೂ ವಸ್ತು ತಂದು ಇಡುತ್ತಿ ದ್ದವು. ಕೆಲವು ಕಾಗದದ ತುಣುಕುಗಳು, ಸ್ಕ್ರೂಗಳಂತಹ ವಸ್ತುಗಳು,ಕಿವಿಯೋಲೆಗಳು ಇತ್ಯಾದಿ ಉಡುಗೊರೆಗಳನ್ನು ಆಕೆಗಾಗಿ ತರುತ್ತಿದ್ದವು.
ಬಾಲಕಿ ಗ್ಯಾಬಿ ಕೂಡ ಈ ಎಲ್ಲ ವಸ್ತುಗಳನ್ನು ಕೂಡಿಟ್ಟು ಜೋಡಿಸಿ ಇಟ್ಟಿದ್ದಾಳೆ. ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಒಮ್ಮೆ ಗಾಬಿ ಕ್ಯಾಮೆರಾ ಲೆನ್ಸ್ ಕ್ಯಾಪ್ ಕಳೆದುಕೊಂಡಿದ್ದಳು. ಸ್ವಲ್ಪ ಸಮಯದ ನಂತರ ಕಾಗೆಗಳು ಅದನ್ನು ಹುಡುಕಿ ತಂದು ಕೊಟ್ಟಿವೆ. ಸದ್ಯ ಗಾಬಿ-ಕಾಗೆ ಪ್ರೀತಿಯ ಭಾಂದವ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಕ್ಷಿ ತಜ್ಞರ ಪ್ರಕಾರ, ಕಾಗೆಗಳು ಮನುಷ್ಯರ ಮುಖವನ್ನು ಹೆಚ್ಚು ವರ್ಷಗಳ ವರೆಗೆ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ತಮಗೆ ಏನೇ ಒಳ್ಳೆಯದು ಮಾಡಿದರೆ ಏನನ್ನಾದರೂ ನೀಡಲು ಅವುಗಳು ಬಯಸುತ್ತವೆ.