ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ 15 ಬೀದಿ ನಾಯಿಗಳಿಂದ ದಾಳಿ: ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

Viral Video: ಇತ್ತೀಚೆಗೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಮೀತಿ ಮೀರಿ ಹೋಗಿದೆ. ಸಾರ್ವಜನಿಕ ರಲ್ಲಿ ಇದು ತೀವ್ರ ಆತಂಕವನ್ನು ಕೂಡ ಮೂಡಿಸಿದೆ. ಇದೀಗ ಬೆಂಗಳೂರಿನ ರಾಮಮೂರ್ತಿ ನಗರದ ಬಳಿಯ ಹೊಯ್ಸಳ ನಗರದಲ್ಲಿ 15 ಕ್ಕೂ ಹೆಚ್ಚು ಬೀದಿ ನಾಯಿಗಳ ಗುಂಪೊಂದು ವಿದ್ಯಾರ್ಥಿನಿಯ ಮೇಲೆ ಹಠಾತ್ತನೆ ದಾಳಿಯನ್ನು ಮಾಡಿವೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆಗಮಿಸಿ ನಾಯಿಯನ್ನು ಓಡಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆ ಬೀದಿನಾಯಿಗಳ ಗುಂಪು ದಾಳಿ

ಬೆಂಗಳೂರು,ಮೇ 23: ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ವೃದ್ಧರು ಹೀಗೆ ಬೀದಿಗಳಲ್ಲಿ ಚಲಿಸುವಾಗ ಭಯದಿಂದಲೇ ಹೋಗಬೇಕಾದ ವಾತಾವರಣ ನಿರ್ಮಾಣವಾಗಿದೆ.‌ ಹಲವು ಪ್ರದೇಶದಲ್ಲಿ ಬೀದಿ ನಾಯಿಗಳು ಕಚ್ಚಿದ ಘಟನೆಗಳು ವರದಿಯಾಗಿ‌ವೆ.‌ ಇದಕ್ಕೆ ಸಾಕ್ಷಿ ಎಂಬಂತೆ ಬೆಂಗಳೂರಿನ ರಾಮಮೂರ್ತಿ ನಗರದ ಬಳಿಯ ಹೊಯ್ಸಳ ನಗರದಲ್ಲಿ ವಿದ್ಯಾರ್ಥಿನಿ ಮೇಘನಾ ಮೇಲೆ 15 ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿದ ಆಘಾತಕಾರಿ ಘಟನೆ (Viral Video) ಕಂಡು ಬಂದಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿ ಮೀತಿ ಮೀರಿ ಹೋಗಿದೆ. ಸಾರ್ವಜನಿಕರಲ್ಲಿ ಇದು ತೀವ್ರ ಆತಂಕವನ್ನು ಕೂಡ ಮೂಡಿಸಿದೆ. ಇದೀಗ ಬೆಂಗಳೂರಿನ ರಾಮಮೂರ್ತಿ ನಗರದ ಬಳಿಯ ಹೊಯ್ಸಳ ನಗರದಲ್ಲಿ 15 ಕ್ಕೂ ಹೆಚ್ಚು ಬೀದಿ ನಾಯಿಗಳ ಗುಂಪೊಂದು ವಿದ್ಯಾರ್ಥಿನಿಯ ಮೇಲೆ ಹಠಾತ್ತನೆ ದಾಳಿಯನ್ನು ಮಾಡಿವೆ. ಇದನ್ನು ನೋಡಿದ ಸ್ಥಳೀಯರು ಕೂಡಲೇ ಆಗಮಿಸಿ ನಾಯಿಯನ್ನು ಓಡಿಸಿದ್ದಾರೆ.

ವಿಡಿಯೋ ನೋಡಿ:



ವಿದ್ಯಾರ್ಥಿನಿಗೆ ದಾಳಿಯಲ್ಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಹಾನಿಯಾಗಿಲ್ಲ. ಆಕೆಯನ್ನು ಕೆ.ಆರ್. ಪುರಂ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇದರ ಭಯಾನಕ ಸಿಸಿಟಿವಿ ದೃಶ್ಯಗಳು ಸೆರೆಹಿಡಿದಿವೆ. ಇದಕ್ಕೂ ಮೊದಲೊಮ್ಮೆ ಬೆಂಗಳೂರಿನಲ್ಲಿ ಎಚ್ ಎಸ್ ಅರ್ ಲೇಔಟ್‌ ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಾಕುನಾಯಿ ದಾಳಿ ಮಾಡಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

Viral Video: ಕೇವಲ 2 ಸೆಕೆಂಡ್‌ನಲ್ಲಿ 700 ಕಿ.ಮೀ ವೇಗದ ರೈಲು ಪ್ರಯಾಣ: ವಿಶ್ವ ದಾಖಲೆ ನಿರ್ಮಿಸಿದ ಚೀನಾ!

ಈ ದಾಳಿಯಿಂದ ಆಕೆಯ ಮುಖ ಮತ್ತು ಕುತ್ತಿಗೆಯ ಬಳಿ 50 ಕ್ಕೂ ಹೆಚ್ಚು ಹೊಲಿಗೆಗಳು ಬಿದ್ದಿದ್ದು ತೀವ್ರ ಗಾಯ ಉಂಟಾಗಿತ್ತು. ನಾಯಿ ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿದ್ದು ಮಧ್ಯ ಪ್ರವೇಶಿಸಲು ಪ್ರಯತ್ನಿಸಿದ ವ್ಯಕ್ತಿಯ ಮೇಲೂ ಆ ಪ್ರಾಣಿ ದಾಳಿ ಮಾಡಿದೆ ಎಂದು ವರದಿಯಾಗಿದೆ. ಸದ್ಯ ಬೀದಿನಾಯಿಗಳ ಕಡಿವಾಣಕ್ಕೆ ಕ್ರಮ ಕೈಗೊಂಡರೂ ದಾಳಿಯ ಪ್ರಕರಣ ಮಿತಿ ಮೀರಿ ಹೋಗಿವೆ.