ಛತ್ರಪತಿ ಸಂಭಾಜಿನಗರ: ದರೋಡೆಕೋರರ ಗುಂಪೊಂದು ಮಹೀಂದ್ರಾ ಥಾರ್ ಎಸ್‌ಯುವಿಯಿಂದ ಎಟಿಎಂ (ATM) ದೋಚಲು ಯತ್ನಿಸಿ ವಿಫಲವಾಗಿದೆ. ಥಾರ್ ವಾಹನಕ್ಕೆ ಹಗ್ಗ ಕಟ್ಟಿ ಎಳೆಯಲು ಮುಂದಾಗಿದ್ದಾರೆ. ಈ ವೇಳೆ ಹಗ್ಗ ತುಂಡಾದ ಕಾರಣ ಎಟಿಎಂ ದೋಚಲು ವಿಫಲವಾಗಿದ್ದು, ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ರೆಕಾರ್ಡ್(Viral Video) ಆಗಿದೆ.
ಶಹನೂರ್ವಾಡಿ ದರ್ಗಾ ಪ್ರದೇಶದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಶಾಖೆಯಲ್ಲಿ ಸೋಮವಾರ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ನಾಲ್ವರು ಮುಸುಕುಧಾರಿ ವ್ಯಕ್ತಿಗಳು ಥಾರ್‌ನಲ್ಲಿ ಬರುತ್ತಿರುವುದು ಕಂಡುಬಂದಿದೆ. ಪೊಲೀಸರ ಪ್ರಕಾರ, ದರೋಡೆಕೋರರು ಎಟಿಎಂ ಸುತ್ತಲೂ ಹಗ್ಗ ಕಟ್ಟಿ ತಮ್ಮ ವಾಹನಕ್ಕೆ ಜೋಡಿಸಿ ಯಂತ್ರವನ್ನು ಅದರ ಕ್ಯಾಬಿನ್‌ನಿಂದ ಹೊರಗೆ ಎಳೆಯಲು ಪ್ರಯತ್ನಿಸಿದ್ದಾರೆ. ಆದರೆ, ಈ ಸಮಯದಲ್ಲಿ ಹಗ್ಗ ಮುರಿದುಹೋಯಿತು. ಇದರಿಂದಾಗಿ ದರೋಡೆಕೋರರ ತಂಡವು ಎಟಿಎಂ ಅನ್ನು ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಬೇಕಾಯಿತು.
ವಿಡಿಯೊ ವೀಕ್ಷಿಸಿ:
#ChhatrapatiSambhajinagar: ATM Theft Attempt Foiled
— #ChhatrapatiSambhajinagar (@sambhajinagarm) August 5, 2025
• In Chhatrapati Sambhajinagar, a group of masked thieves attempted to steal an ATM by attaching it to a #Thar SUV with a belt, but the belt snapped during the attempt, causing them to flee the scene. pic.twitter.com/lHML8jgeTt
ಪರಾರಿಯಾಗುವ ಮುನ್ನ, ಶಂಕಿತರು ಸ್ಕ್ರೂಡ್ರೈವರ್ ಬಳಸಿ ಎಟಿಎಂ ತೆರೆಯಲು ಪ್ರಯತ್ನಿಸಿದರು. ಅಲ್ಲದೆ, ಬೂತ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳನ್ನು ಹಾನಿಗೊಳಿಸಿದರು. ಅವರ ಪ್ರಯತ್ನಗಳ ಹೊರತಾಗಿಯೂ, ದರೋಡೆಕೋರರು ಹಣವನ್ನು ಪಡೆಯಲು ಅಥವಾ ಯಂತ್ರವನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ.
ಈ ಸುದ್ದಿಯನ್ನೂ ಓದಿ: Viral Video: ಪ್ರವಾಹದ ನಡುವೆ ಬಾಹುಬಲಿ ಸಿನಿಮಾದಂತೆ ಮಗುವನ್ನು ತಲೆಯ ಮೇಲೆ ಹೊತ್ತು ಸಾಗಿದ ತಂದೆ- ವೈರಲ್ ವಿಡಿಯೊ ನೋಡಿ
ಇನ್ನು ಈ ಸಂಬಂಧ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ವಿಶಾಲ್ ಹರಿದಾಸ್ ಇಂದುರ್ಕರ್ ಅವರು ಜವಾಹರನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ದೂರು ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ಕಳ್ಳತನ, ಕ್ರಿಮಿನಲ್ ದುಷ್ಕೃತ್ಯ ಮತ್ತು ಸಾಮಾನ್ಯ ಉದ್ದೇಶ ಸೇರಿದಂತೆ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಶಂಕಿತರನ್ನು ಗುರುತಿಸಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.