ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕಾರ್‌ನಿಂದ ಕಸ ಎಸೆದ ಪ್ರವಾಸಿಗರು; ರಸ್ತೆ ಮಧ್ಯದಲ್ಲೇ ತಡೆದು ಕಸ ವಾಪಸ್ ಕೊಟ್ಟ ಸಾಮಾಜಿಕ ಕಾರ್ಯಕರ್ತ!

Viral Video: ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡದೇ ಇರುವುದು, ಜವಾಬ್ದಾರಿತನದಿಂದ ವರ್ತಿಸದೇ ಇರುವುದು ಹೀಗೆ ನಾನಾ ದೂರುಗಳು ಕೇಳಿ ಬರುತ್ತಲೇ ಇವೆ. ಅದರಲ್ಲೂ ಪ್ರವಾಸಿ ಸ್ಥಳದಲ್ಲಿ ಕೆಲ ಪ್ರಯಾಣಿಕರು ಮನಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಸ್ಸೂರಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರ್ ನಿಂದ ಪ್ಲಾಸ್ಟಿಕ್ ಕಸವನ್ನು ರಸ್ತೆಗೆ ಎಸೆದ ಪ್ರವಾಸಿಗರೊಬ್ಬರನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ತಡೆದು ಬುದ್ದಿ ಮಾತು ಹೇಳಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ...

ರಸ್ತೆ ಮಧ್ಯದಲ್ಲೇ ತಡೆದು ಕಸ ವಾಪಸ್ ಕೊಟ್ಟ ಸಾಮಾಜಿಕ ಕಾರ್ಯಕರ್ತ

​ಡೆಹ್ರಾಡೂನ್, ಮೇ 25: ಇತ್ತೀಚೆಗೆ ಶಿಕ್ಷಣವಂತರ ಸಂಖ್ಯೆ ಹೆಚ್ಚಾದರೂ ನಾಗರಿಕ ಪ್ರಜ್ಞೆ ಕೊರತೆ ಹೆಚ್ಚುತ್ತಿದೆ.ಸಾರ್ವಜನಿಕ ಸ್ಥಳದಲ್ಲಿ ಶಿಸ್ತು ಕಾಪಾಡದೇ ಇರುವುದು, ಜವಾಬ್ದಾರಿತನದಿಂದ ವರ್ತಿಸದೇ ಇರುವುದು ಹೀಗೆ ನಾನಾ ದೂರುಗಳು ಕೇಳಿ ಬರುತ್ತಲೇ ಇವೆ. ಅದರಲ್ಲೂ ಪ್ರವಾಸಿ ಸ್ಥಳದಲ್ಲಿ ಕೆಲ ಪ್ರಯಾಣಿಕರು ಮನ ಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮಸ್ಸೂರಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕಾರ್ ನಿಂದ ಪ್ಲಾಸ್ಟಿಕ್ ಕಸವನ್ನು ರಸ್ತೆಗೆ ಎಸೆದ ಪ್ರವಾಸಿಗರೊಬ್ಬರನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ತಡೆದು ಬುದ್ದಿ ಮಾತು ಹೇಳಿದ್ದಾರೆ. ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ಸಾರ್ವಜನಿಕ ಸ್ವಚ್ಛತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ.

ಸುಂದರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮುನ್ನ ಪ್ರಯಾಣಿಕರು ನಾಗರಿಕ ಪ್ರಜ್ಞೆಯನ್ನು ಕೂಡ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದೀಗ ಪ್ರವಾಸಿಗರೊಬ್ಬರಿಗೆ ಸಮಾಜಿಕ ಕಾರ್ಯಕರ್ತರೊಬ್ಬರು ಬುದ್ದಿ ಕಲಿಸಿದ್ದು ಕಸ ಎಸೆದ ವ್ಯಕ್ತಿಗೆಯೇ ಕಸ ವಾಪಸ್ಸು ನೀಡಿ ಬುದ್ದಿಮಾತು ಹೇಳಿದ್ದಾರೆ. ಇವರ ಈ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಸಿಕ್ಕಿದೆ.

ವಿಡಿಯೋ ನೋಡಿ:



ಮಸ್ಸೂರಿಯ ಜನಪ್ರಿಯ ಗಿರಿಧಾಮದ ಮೂಲಕ ಪ್ರಯಾಣಿಸುವಾಗ ರಸ್ತೆ ಬದಿಯಲ್ಲಿ ಪ್ರವಾಸಿಗ ರೊಬ್ಬರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆದಿದ್ದಾರೆ. ಇದನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತ ಮತ್ತು ಪ್ರತಿಷ್ಠಾನದ ಸಂಸ್ಥಾಪಕ ಅನೂಪ್ ನೌಟಿಯಾಲ್ ವಾಹನ ನಿಲ್ಲಿಸಿ ಅವರನ್ನು ತಡೆದಿದ್ದಾರೆ. ಪ್ರವಾಸಿಗರು ಟ್ಯಾಕ್ಸಿಯಿಂದ ಪ್ಲಾಸ್ಟಿಕ್ ಕಪ್ ಮತ್ತು ಚಮಚವನ್ನು ರಸ್ತೆಗೆ ಎಸೆದಿದ್ದಾರೆ. ತಕ್ಷಣವೇ ಅನೂಪ್ ಅವರು ತಮ್ಮ ವಾಹನವನ್ನು ನಿಲ್ಲಿಸಿ, ರಸ್ತೆಯಲ್ಲಿದ್ದ ಆ ಪ್ಲಾಸ್ಟಿಕ್ ಕಸವನ್ನು ಕೈಗೆತ್ತಿ ಕೊಂಡಿದ್ದಾರೆ‌‌ ಮುಂದೆ ಹೋಗಿ ಆ ಪ್ರವಾಸಿಗರ ವಾಹನವನ್ನು ತಡೆದು ಅತ್ಯಂತ ಶಾಂತಿ ಯುತವಾಗಿಯೇ ಆ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಾರಿನೊಳಗಿದ್ದ ಪ್ರವಾಸಿಗರಿಗೆ ಮರಳಿ ನೀಡಿದ್ದಾರೆ.

Viral Video: ವೇದಿಕೆಯಲ್ಲೇ ಆ್ಯಂಕರ್‌ಗೆ ಚಪ್ಪಲಿಯಿಂದ ಹೊಡೆದ ಖ್ಯಾತ ಗಾಯಕಿ

ಮುಂದೆ ಹೀಗೆ ಮಾಡದಂತೆ ಪ್ರವಾಸಿಗರನ್ನು ಶಾಂತವಾಗಿ ವಿನಂತಿಸಿದ್ದು ಸಾರ್ವಜನಿಕ ಸ್ಥಳಗಳನ್ನು ಗೌರವಿಸುವಂತೆ ಅವರು ಹೇಳಿದರು. ಪ್ರವಾಸಿಗರು ಕಸವನ್ನು ಹಿಂದಕ್ಕೆ ಸ್ವೀಕರಿಸಿ ಕ್ಷಮೆ ಕೇಳಿದ್ದಾರೆ. ಸದ್ಯ ಅನೂಪ್ ನೌಟಿಯಾಲ್ ಅವರು ಅಪ್‌ಲೋಡ್ ಮಾಡಿದ ಇನ್‌ಸ್ಟಾಗ್ರಾಮ್ ಪೋಸ್ಟ್ ಕೆಲವು ದಿನಗಳಲ್ಲಿ 262,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ದಾಟಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಭಾರತೀ ಯರು ದೇಶವನ್ನು ತಮ್ಮ ಸ್ವಂತ ಮನೆ ಎಂದು ಪರಿಗಣಿಸುವುದಿಲ್ಲ.. ಬರೆದಿದ್ದಾರೆ. ಮತ್ತೊಬ್ಬರು ನಮ್ಮ ಶಿಕ್ಷಣ ಪದ್ಧತಿಯಲ್ಲಿ ನಾಗರಿಕ ಪ್ರಜ್ಞೆ ಬಗ್ಗೆ ಅರಿವು ಮೂಡಿಸಬೇಕು ಎಂದು ಬರೆದಿದ್ದಾರೆ.