ಯುವತಿಯೊಬ್ಬಳು ತನ್ನ ಗೆಳೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ವಿವಾದದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಗೆ ಬೆಲ್ಟ್‌ನಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ಪ್ರಕಾರ, ಇಬ್ಬರೂ ವಿದ್ಯಾರ್ಥಿಗಳು ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳಾಗಿದ್ದು, ಗೆಳೆಯನ ವಿಷಯಕ್ಕೆ ಜಗಳವಾಡಿದ್ದಾರೆ ಎಂದು ತಿಳಿದು ಬಂದಿದೆ. ವಿಗಿಶಾ ಭಾರದ್ವಾಜ್ (ಮೋದಿನಗರ) ಮತ್ತು ವಂಶಿಕಾ ಸಾಂಗ್ವಾನ್ (ಮೀರತ್) ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಂಐಇಟಿ (ಮೀರತ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ) ದಲ್ಲಿ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿಗಳು. ವಂಶಿಕಾ ಗೆಳೆಯ ತುಷಾರ್ ಚೌಧರಿ ಕೂಡ ಅದೇ ಕಾಲೇಜಿನಲ್ಲಿ ಓದುತ್ತಿದ್ದಾನೆ.
ಬೆಲ್ಟ್‌ನಲ್ಲಿ ಹೊಡೆದ ವಿಡಿಯೋ
ಕೆಲವು ದಿನಗಳ ಹಿಂದೆ, ತುಷಾರ್ ಅವರ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ವಿಗೀಶಾ ಕಾಮೆಂಟ್ ಮಾಡಿದ್ದರಿಂದ ಇಬ್ಬರು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು ಎಂದು ವರದಿಯಾಗಿದೆ. ನವೆಂಬರ್ 24 ರಂದು ಎಂಐಇಟಿ ಕಾಲೇಜಿನ ಪರೀಕ್ಷಾ ಕೇಂದ್ರವು ದಿವಾನ್ ಕಾಲೇಜಿನಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ವಿಗೀಶಾ, ವಂಶಿಕಾ ಮತ್ತು ತುಷಾರ್ ಇತರ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆಯಲು ಹೋಗಿದ್ದರು. ಪರೀಕ್ಷೆ ಮುಗಿದ ಕೂಡಲೇ ವಂಶಿಕಾ ಮತ್ತು ವಿಗೀಶಾ ನಡುವೆ ವಾಗ್ವಾದ ನಡೆಯಿತು. ವಂಶಿಕಾ ತನ್ನ ಬೆಲ್ಟ್ ತೆಗೆದು ವಿಗೀಶಾಳನ್ನು ಹೊಡೆದಳು. ಇತರ ವಿದ್ಯಾರ್ಥಿಗಳು ಈ ಘಟನೆಯನ್ನು ಚಿತ್ರೀಕರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೆಲ್ಫಿ ನೀಡಲು ನಿರಾಕರಿಸಿದ ಹಾರ್ದಿಕ್ ಪಾಂಡ್ಯಯನ್ನು ನಿಂದಿಸಿದ ಅಭಿಮಾನಿ! ವಿಡಿಯೊ ವೈರಲ್
ವೈರಲ್ ಆದ ವಿಡಿಯೋ ಆಧರಿಸಿ ವಂಶಿಕಾ ಸಂಗ್ವಾನ್ ಅವರನ್ನು ಕಾಲೇಜಿನಿಂದ ಹೊರಹಾಕಲಾಗಿದೆ ಎಂದು ಎಂಐಇಟಿ ಕಾಲೇಜಿನ ವಕ್ತಾರ ಅಜಯ್ ಚೌಧರಿ. ವಂಶಿಕಾ ಅವರನ್ನು ಕಾಲೇಜು ಕ್ಯಾಂಪಸ್‌ಗೆ ಪ್ರವೇಶಿಸುವುದನ್ನು ಸಹ ನಿಷೇಧಿಸಲಾಗಿದೆ. ವಿಗೀಶಾ ಭಾರದ್ವಾಜ್ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.