ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

"ಭಾರತದಲ್ಲಿ ಇದನ್ನು ಊಹಿಸಿರಲಿಲ್ಲ"; ತಾಯಿಯ ಎದುರೇ ಅಮೆರಿಕ ಮಹಿಳೆಯ ಎದೆಗೆ ಕೈ ಹಾಕಿದ ಅಪ್ರಾಪ್ತ ಬಾಲಕ!

Viral News: ಅಮೆರಿಕ ಮೂಲದ ಮಹಿಳೆಗೆ ಅಪ್ರಾಪ್ತ ಬಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಭಾರತಕ್ಕೆ ಸ್ನೇಹಿತನ ಮದುವೆಗೆಂದು ಬಂದಿದ್ದ ಅಮೆರಿಕಾದ ಮಹಿಳೆಯೊಬ್ಬರಿಗೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಈ ಅನುಭವವಾಗಿದೆ. ನ್ಯೂಜೆರ್ಸಿಯ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭಾರತೀಯ ಮೂಲದ ಪ್ರಾಧ್ಯಾಪಕ ರಾಗಿರುವ ಗೌರವ್ ಸಬ್ನಿಸ್ ತಮ್ಮ ‌ಖಾತೆಯಲ್ಲಿ ಸಂತ್ರಸ್ಥ ಅಮೆರಿಕ ಮಹಿಳೆ ಕುರಿತ ಪೋಸ್ಟ್ ಶೇರ್ ಮಾಡಿದ್ದಾರೆ..

ದೆಹಲಿ ಮೆಟ್ರೋದಲ್ಲಿ ಅಮೆರಿಕಾ ಮಹಿಳೆಗೆ ಲೈಂಗಿಕ ದೌರ್ಜನ್ಯ

ನವದೆಹಲಿ,ಜ.19: ಮಹಿಳೆಯರ ಸುರಕ್ಷತೆ ಬಗ್ಗೆ ಎಷ್ಟೇ ಮಾತನಾಡಿದರೂ ದೌರ್ಜನ್ಯ ಪ್ರಕರಣಗಳು ಮುಂದು ವರಿಯುತ್ತಲೇ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅಮೆರಿಕ ಮೂಲದ ಮಹಿಳೆಗೆ ಅಪ್ರಾಪ್ತ ಬಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಭಾರತಕ್ಕೆ ಸ್ನೇಹಿತನ ಮದುವೆಗೆಂದು ಬಂದಿದ್ದ ಅಮೆರಿಕಾದ ಮಹಿಳೆಯೊಬ್ಬರಿಗೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ಈ ಅನುಭವವಾಗಿದೆ. ನ್ಯೂಜೆರ್ಸಿಯ ಸ್ಟೀವನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಭಾರತೀಯ ಮೂಲದ ಪ್ರಾಧ್ಯಾಪಕರಾಗಿರುವ ಗೌರವ್ ಸಬ್ನಿಸ್ ತಮ್ಮ ‌ಖಾತೆಯಲ್ಲಿ ಸಂತ್ರಸ್ಥ ಅಮೆರಿಕ ಮಹಿಳೆ ಕುರಿತ ಪೋಸ್ಟ್ ಶೇರ್ ಮಾಡಿದ್ದಾರೆ.

ಅಮೆರಿಕನ್ ಮಹಿಳೆಯೊಬ್ಬರು ಸ್ನೇಹಿತನ ಮದುವೆಗಾಗಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ದೆಹಲಿ ಮೆಟ್ರೋ ನಿಲ್ದಾಣದಲ್ಲಿ 14 ಅಥವಾ 15 ವರ್ಷದ ಹದಿಹರೆಯದ ಹುಡುಗನೊಬ್ಬ ತನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎಂದು ಅವರು ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ರೈಲಿನಲ್ಲಿ ಬಾಲಕನೊಬ್ಬ ತನ್ನ ತಾಯಿ ಮತ್ತು ಸಹೋದರಿಯೊಂದಿಗೆ ಇದ್ದನು. ಈ ಸಂದರ್ಭದಲ್ಲಿ ತನ್ನ ಜೊತೆಗೆ ಫೋಟೋ ಕೇಳಿದ್ದಾನೆ. ಕುಟುಂಬದವರು ಕೂಡ ಇದ್ದ ಕಾರಣ ಮಹಿಳೆ ಫೋಟೋ ಕೊಡಲು ಒಪ್ಪಿದ್ದಾರೆ. ಆದರೆ, ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಆ ಹುಡುಗ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ.



ಬಾಲಕ ನೋಡ ನೋಡುತ್ತಲೇ ತನ್ನ ಭುಜದ ಮೇಲೆ ಕೈಹಾಕಿದ್ದು ಬಳಿಕ ಆತ ನೇರವಾಗಿ ನನ್ನ ಸ್ತನಗಳನ್ನು ಹಿಡಿದು ತಮಾಷೆ ಮಾಡಿದಂತೆ ನಕ್ಕಿದ್ದಾನೆ. ಈ ವೇಳೆತಾನು ಕೋಪದಿಂದ ಅವನ ಕಾಲರ್ ಹಿಡಿದು ದೂರ ತಳ್ಳಿದೆ. ಈ ವೇಳೆ ಆತನ ತಾಯಿ ಕೂಡ. ಮಗನ ಪರವಾಗಿ ಮಾತ ನಾಡಿದ್ದಾರೆ. "ನೀವು ಅತಿಯಾಗಿ ವರ್ತಿಸುತ್ತಿದ್ದೀರಿ‌ ಅವನು ಈ ಹಿಂದೆ ಎಂದೂ ಹೊಂಬಣ್ಣದ (Blond) ಮಹಿಳೆಯನ್ನು ನೋಡಿಲ್ಲ, ಹಾಗಾಗಿ ಹೀಗೆ ಮಾಡಿದ್ದಾನೆ ಎಂದು ಮಗನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

viral video: ಬಾಂಗ್ಲಾದಲ್ಲಿ ನಿಲ್ಲದ ದೌರ್ಜನ್ಯ; ಹಿಂದೂ ಶಿಕ್ಷಕನ ಮನೆಗೆ ಬೆಂಕಿ

ಸದ್ಯ ಅಪ್ರಾಪ್ತ ಬಾಲಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಿಂದ ಬೇಸರಗೊಂಡ ಮಹಿಳೆ, "ಇನ್ನೊಮ್ಮೆ ನಾನು ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ನಿರ್ಧರಿಸಿದೆ. ಭಾರತದ ಸಂಸ್ಕೃತಿ ಮತ್ತು ಜನರು ಇಷ್ಟವಾದರೂ, ಈ ಒಂದು ಘಟನೆ ತನ್ನನ್ನು ಘಾಸಿಗೊಳಿಸಿದೆ.‌ ಸದ್ಯ ಭಾರತೀಯ ಮಹಿಳೆಯರ ರಕ್ಷಣೆ ಬಗ್ಗೆ ನನಗೆ ತುಂಬಾ ದುಃಖವಾಗಿದೆ ಎಂದಿದ್ದಾರೆ.. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.