ರಾಂಚಿ: ಇತ್ತೀಚೆಗೆ ದಿಯೋಘರ್‌ನಲ್ಲಿ ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯಲ್ಲಿ ಕೋತಿಯೊಂದು ದುಃಖ ವ್ಯಕ್ತಪಡಿಸಿದ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.ವೈರಲ್ ಆದ ವಿಡಿಯೊದಲ್ಲಿ ಕೋತಿಯೊಂದು ತನಗೆ ಪ್ರತಿದಿನ ಊಟ ಕೊಡುತ್ತಿದ್ದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದನ್ನು ಸೆರೆಹಿಡಿಯಲಾಗಿದೆ(Viral Vide). ವರದಿ ಪ್ರಕಾರ, ಮುನ್ನಾ ಸಿಂಗ್ ಎಂಬ ವ್ಯಕ್ತಿ ವಿಶೇಷವಾಗಿ ಕೋತಿಗಳ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಹೆಸರುವಾಸಿಯಾಗಿದ್ದನಂತೆ. ಅವನು ಆಗಾಗ್ಗೆ ಅವುಗಳಿಗೆ ರೊಟ್ಟಿ ಮತ್ತು ಇತರ ಆಹಾರವನ್ನು ನೀಡುತ್ತಿದ್ದನಂತೆ. ಇತ್ತೀಚೆಗೆ ಸಿಂಗ್ ನಿಧನ ಹೊಂದಿದ್ದಾಗ, ಅವನ ದೇಹವನ್ನು ಅಂತಿಮ ವಿಧಿವಿಧಾನಗಳಿಗಾಗಿ ಹೊರಗೆ ಇಡಲಾಗಿತ್ತು. ಆ ವೇಳೆ ಕೋತಿಯೊಂದು ಅವನ ಶವನ ಬಳಿಗೆ ಬಂದು ಅವನ ದೇಹಕ್ಕೆ ಚುಂಬಿಸಿ ಶೋಕ ವ್ಯಕ್ತಪಡಿಸಿದೆಯಂತೆ.
ಕೋತಿ ಮುನ್ನಾ ಸಿಂಗ್ ಶವದ ಪಕ್ಕದಲ್ಲಿ ಗಂಟೆಗಟ್ಟಲೆ ಕುಳಿತಿತ್ತಂತೆ. ಆ ಹೃದಯಸ್ಪರ್ಶಿ ದೃಶ್ಯ ನೋಡಿ ಗ್ರಾಮಸ್ಥರು ಕೂಡ ಮರುಗಿದರಂತೆ. ಇಷ್ಟೇ ಅಲ್ಲದೇ ಅದು ಅವನ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿಯೂ ಕೂಡ ಸೇರಿಕೊಂಡಿತಂತೆ.
ವಿಡಿಯೊ ಇಲ್ಲಿದೆ ನೋಡಿ...
ಈ ಹೃದಯಸ್ಪರ್ಶಿ ದೃಶ್ಯದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. "ಈ ದೃಶ್ಯ ಅಗಲಿದ ಆತ್ಮಕ್ಕೂ ಕೋತಿಗೂ ಇರುವ ಸಂಬಂಧದ ಬಗ್ಗೆ ಬಹಳಷ್ಟು ಹೇಳುತ್ತದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಜೈ ಭಜರಂಗಬಲಿ" ಎಂದು ಇತರರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಂದೇ ಭಾರತ್ ರೈಲಿನಲ್ಲಿ ಈ ದಂಪತಿ ಮಾಡಿದ ಕೆಲ್ಸಕ್ಕೆ ನೆಟ್ಟಿಗರು ಫುಲ್ ಗರಂ-ವಿಡಿಯೊ ಫುಲ್ ವೈರಲ್
2022ರಲ್ಲಿ ಇದೇ ರೀತಿಯ ಘಟನೆ ಶ್ರೀಲಂಕಾದ ಬಟ್ಟಿಕಲೋವಾದಲ್ಲಿ ನಡೆದಿದ್ದು, ಅದರ ವಿಡಿಯೊ ವೈರಲ್ ಆಗಿತ್ತು. ಅದರಲ್ಲಿ ಕೋತಿ ತನ್ನ ಆರೈಕೆ ಮಾಡಿದ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಗೌರವ ಸಲ್ಲಿಸುತ್ತಿರುವುದನ್ನು ತೋರಿಸಲಾಗಿತ್ತು. ವೈರಲ್ ವಿಡಿಯೊದಲ್ಲಿ ಕೋತಿ ದೇಹದಿಂದ ಹಾರವನ್ನು ತೆಗೆದುಹಾಕಲು ಪ್ರಯತ್ನಿಸುವುದು ಮತ್ತು ಅವನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.