ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉದರ ನಿಮಿತ್ತಂ ಬಹುಕೃತ ವೇಷಂ: ಪುಟ್ಟ ಮಗುವನ್ನು ಬೆನ್ನಿಗೆ ಕಟ್ಟಿ ಭಾರದ ಚೀಲ ಹೊರುತ್ತಿರುವ ತಾಯಿ

Viral News: ತಾಯಿಯ ಪ್ರೀತಿ ಮತ್ತು ಕರ್ತವ್ಯಕ್ಕೆ ಬೆಲೆ ಕಟ್ಟಲಾಗದು ಎಂಬುದಕ್ಕೆ ಸಾಕ್ಷಿಯಾಗಿ ಈ ದೃಶ್ಯ ಎಲ್ಲರ ಗಮನ ಸೆಳೆದಿದೆ. ತನ್ನ ಪುಟ್ಟ ಹೆಣ್ಣು ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಭಾರಿ ತೂಕದ ಚೀಲವನ್ನು ತಾಯಿ ಹೊರುತ್ತಿದ್ದಾಳೆ. ಒಂದು ನಿಮಿಷವೂ ವಿರಾಮ ಪಡೆದುಕೊಳ್ಳದೆ ಮಹಿಳೆ ಏಕಕಾಲದಲ್ಲಿ ಹೇಗೆ ಕೆಲಸ ಮತ್ತು ತಾಯ್ತನ ಎರಡನ್ನೂ ನಿರ್ವಹಿಸುತ್ತಾರೆ ಎಂಬುದನ್ನು ಈ ದೃಶ್ಯ ತೋರಿಸಿ ಕೊಟ್ಟಿದೆ.

ಮಗುವನ್ನು ಬೆನ್ನಿಗೆ ಕಟ್ಟಿ ಭಾರದ ಚೀಲ ಹೊರುವ ತಾಯಿ

ನವದೆಹಲಿ, ಮಾ. 3: ಪ್ರಪಂಚದಲ್ಲಿ ಸ್ವಾರ್ಥ ಇಲ್ಲದ ಜೀವ ಎಂದರೆ ಅದು ತಾಯಿ. ಈಕೆ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಮಗುವಿನ ರಕ್ಷಣೆ, ಪೋಷಣೆಗಾಗಿ ಶ್ರಮ ಪಡುತ್ತಾಳೆ. ಇದಕ್ಕೆ ಸಾಕ್ಷಿ ಎಂಬಂತೆ ತಾಯಿಯೊಬ್ಬರು ಪುಟ್ಟ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಕೆಲಸ ನಿರ್ವಹಿಸುತ್ತಿರುವ ವಿಡಿಯೊ ವೈರಲ್‌ ಆಗಿದೆ (Viral Video). ಈ ದೃಶ್ಯ ನೋಡುಗರ ಕಣ್ಣಂಚು ಒದ್ದೆಯಾಗಿಸಿದೆ.

ತಾಯಿಯ ಪ್ರೀತಿ ಮತ್ತು ಕರ್ತವ್ಯಕ್ಕೆ ಬೆಲೆ ಕಟ್ಟಲಾಗದು ಎಂಬುದಕ್ಕೆ ಸಾಕ್ಷಿಯಾಗಿ ಈ ದೃಶ್ಯ ಎಲ್ಲರ ಗಮನ ಸೆಳೆದಿದೆ. ತನ್ನ ಪುಟ್ಟ ಹೆಣ್ಣು ಮಗುವನ್ನು ಬೆನ್ನಿಗೆ ಕಟ್ಟಿಕೊಂಡೇ ಭಾರಿ ತೂಕದ ಚೀಲಗಳನ್ನು ಅವರು ಹೊತ್ತಿದ್ದಾರೆ. ಒಂದು ನಿಮಿಷವೂ ವಿಶ್ರಮಿಸಿದೆ ಅವರು ಏಕಕಾಲದಲ್ಲಿ ಕೆಲಸ ಮತ್ತು ತಾಯ್ತನ ಎರಡನ್ನೂ ನಿರ್ವಹಿಸಿದ್ದಾರೆ.

ದೊಡ್ಡ ಬಿಳಿ ಚೀಲಗಳನ್ನು ತುಂಬಿದ ಟ್ರಕ್ ಪಕ್ಕದಲ್ಲಿ ತಾಯಿ ನಿಂತಿರುವ ದೃಶ್ಯದೊಂದಿಗೆ ಈ ಕ್ಲಿಪ್ ಪ್ರಾರಂಭವಾಗುತ್ತದೆ. ಅವರು ಪುಟ್ಟ ಮಗುವನ್ನು ಬಟ್ಟೆಯಿಂದ ಬೆನ್ನಿಗೆ ಸುರಕ್ಷಿತವಾಗಿ ಕಟ್ಟಿ ಕೊಂಡಿದ್ದಾರೆ. ಇನ್ನೊಂದೆಡೆ ಲಾರಿಯಿಂದ ಇಳಿಸುವ ಬಿಳಿ ಬಣ್ಣದ ದೊಡ್ಡ ಗಾತ್ರದ ಚೀಲಗಳನ್ನು ತನ್ನ ಹೆಗಲ ಮೇಲೆ ಹೊರುತ್ತಿರುವುದು ಕಂಡು ಬಂದಿದೆ.

ಶ್ರೀಮಂತ ಹುಡುಗರು ಬಿಸಿ ಸಮೋಸ ಇದ್ದಂತೆ! ಸಂಗಾತಿ ಆಯ್ಕೆ ಬಗ್ಗೆ ಸಲಹೆ ನೀಡಿದ ಯುವತಿ!

ಆ ಚೀಲ ಹೆಚ್ಚುವರಿ ತೂಕವಿದ್ದರೂ ಸಹ, ಅವರು ಮಗುವನ್ನು ಬೆಂಬಲಿಸಲು ಒಂದು ಕೈಯನ್ನು ಹಿಂದೆ ಇಟ್ಟುಕೊಂಡಿದ್ದಾರೆ. ಒಂದು ಕೈ ಭಾರದ ಚೀಲಗಳನ್ನು ಹಿಡಿದಿದ್ದರೆ, ಮತ್ತೊಂದು ಕೈ ಮಗುವಿಗೆ ಆಸರೆ ನೀಡಿ ಗೋದಾಮಿನ ಒಳಗೆ ಹೆಜ್ಜೆ ಹಾಕುತ್ತಿದ್ದಾರೆ. ಆಕೆಯ ಹೆಜ್ಜೆಗಳು ನಿಧಾನವಾಗಿದ್ದರೂ ದೃಢವಾಗಿದೆ. ತೀವ್ರ ಒತ್ತಡದ ಹೊರತಾಗಿಯೂ, ಅವರು ನಿಲ್ಲುವುದಿಲ್ಲ ಅಥವಾ ಸಹಾಯವನ್ನು ಕೇಳುವುದಿಲ್ಲ.

ಫೆಬ್ರವರಿ 27ರಂದು ಹಂಚಿಕೊಳ್ಳಲಾದ ಈ ದೃಶ್ಯ ವನ್ನು ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಬಂದಿವೆ. ಬಳಕೆದಾರರೊಬ್ಬರು ಆಕೆ ತನ್ನ ಹೋರಾಟದಲ್ಲಿ ಗೆದ್ದಿರಬಹುದು, ಆದರೆ ನಮ್ಮ ಸಮಾಜ ಬದಲಾವಣೆ ಆಗಿಲ್ಲ ಎಂದು ಬರೆದುಕೊಂಡಿದ್ದಾರೆ. ನಿಜಕ್ಕೂ ಈ ದೃಶ್ಯ ಬೇಸರ ತರಿಸುವಂತಿದೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.