ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಎಲಾನ್ ಮಸ್ಕ್ ಜೊತೆ ಬೆಂಗಳೂರು ಮೂಲದ ಉದ್ಯಮಿಯ ಸೆಲ್ಫಿ-ಈ ಫೋಟೋದ ಅಸಲಿಯತ್ತೇನು?

Bengaluru businessman with Elon Musk: ಬೆಂಗಳೂರು ಮೂಲದ ಉದ್ಯಮಿ ದೀಪಕ್ ಕನಕರಾಜು, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರೊಂದಿಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಆದರ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದ್ದು,ಇದರ ಅಸಲಿಯತ್ತು ಹೊರಬಿದ್ದಿದೆ.

ಬೆಂಗಳೂರು: ಇತ್ತೀಚೆಗೆ ಕೃತಕ ಬುದ್ಧಿಮತ್ತೆ (AI) ದೈನಂದಿನ ಜೀವನದ ಒಂದು ಭಾಗವಾಗುತ್ತಿದೆ. ಅದು ಅನೇಕ ಕೆಲಸಗಳನ್ನು ವೇಗವಾಗಿ ಮತ್ತು ಸುಲಭವಾಗಿ ಮಾಡಲು ನಮಗೆ ಸಹಾಯ ಮಾಡುತ್ತಿದೆ. ಆದರೆ ಈ ಪ್ರಯೋಜನಗಳ ಜೊತೆಗೆ ಒಂದು ದೊಡ್ಡ ಸವಾಲು ಕೂಡ ಇದೆ. ಅದೇನೆಂದರೆ ನಕಲಿ ಸುದ್ದಿ (fake news). ಅಂದರೆ ಎಐ ಬಳಸಿ ಕೆಲವೇ ಸೆಕೆಂಡುಗಳಲ್ಲಿ ನೈಜವಾಗಿ ಕಾಣುವ ಚಿತ್ರಗಳು ಮತ್ತು ವಿಡಿಯೊಗಳನ್ನು ರಚಿಸಬಹುದು. ಹೀಗಾಗಿ ಕೆಲವೊಮ್ಮೆ ಸುಳ್ಳು ಸುದ್ದಿಗಳು ವೇಗವಾಗಿ ಹರಡುತ್ತವೆ.

ಇದೀಗ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಇತ್ತೀಚೆಗೆ AI ಹೇಗೆ ಜನರನ್ನು ಸುಲಭವಾಗಿ ದಾರಿ ತಪ್ಪಿಸುವಷ್ಟು ನೈಜ ಚಿತ್ರಗಳನ್ನು ರಚಿಸಬಹುದು ಎಂಬುದರ ಕುರಿತು ಬೆಳಕು ಚೆಲ್ಲಿದರು. ಉದ್ಯಮಿ ದೀಪಕ್ ಕನಕರಾಜು, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರೊಂದಿಗಿನ ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಹಾಗೆಯೇ ನೋಡಿದರೆ ನೈಜ ಫೋಟೋದಂತೆಯೇ ಕಾಣುತ್ತದೆ. ಆದರೆ, ಶೀರ್ಷಿಕೆಯಲ್ಲಿ ನಕಲಿ ಸುದ್ದಿಗಳು ಎಷ್ಟು ಸುಲಭವಾಗಿ ಗೊಂದಲವನ್ನುಂಟುಮಾಡಬಹುದು ಎಂಬುದನ್ನು ಎತ್ತಿ ತೋರಿಸುತ್ತದೆ ಎಂದು ಸ್ಪಷ್ಟಪಡಿಸಿತು.

ಕನಕರಾಜು, ಎಲಾನ್ ಅವರೊಂದಿಗೆ ಕ್ಯಾಶುಯಲ್ ಸಭೆ ನಡೆಸಿದೆ ಎಂದು ಬರೆದಿದ್ದಾರೆ. ಎಐಯ ನಿಜವಾದ ಅಪಾಯವೆಂದರೆ ರೋಬೋಟ್‌ಗಳು ಉದ್ಯೋಗಗಳನ್ನು ಕಸಿದುಕೊಳ್ಳುವುದಲ್ಲ. ಬದಲಾಗಿ ನಕಲಿ ಸುದ್ದಿಗಳು ಎಷ್ಟು ಸುಲಭವಾಗಿ ಹರಡುತ್ತವೆ ಎಂಬುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Pakistan Flood: ಪ್ರವಾಹದ ರಿಪೋರ್ಟಿಂಗ್‌ಗೆ ಹೋದ ಪಾಕ್‌ ಪತ್ರಕರ್ತೆಯ ಸ್ಥಿತಿ ಅಧೋಗತಿ! ಈ ಶಾಕಿಂಗ್‌ ವಿಡಿಯೊ ಇಲ್ಲಿದೆ

ಮಸ್ಕ್ ಜೊತೆ ಯಾವುದೇ ಸಭೆ ನಡೆದಿಲ್ಲ. ಈ ಚಿತ್ರವು ಸಂಪೂರ್ಣವಾಗಿ ಎಐ ರಚಿತವಾಗಿತ್ತು. ಆದರೂ, ಇದನ್ನು ಜನರು ನಿಜವೆಂದು ನಂಬಬಹುದು. ಮೆಲ್ನೋಟಕ್ಕೆ ನಿಜವೆಂದು ಕಾಣಬಹುದು. ಆದರೆ, ಸಂಶಯದಿಂದ ನೋಡಿದಾಗ ವ್ಯತ್ಯಾಸವನ್ನು ಗುರುತಿಸಲು ಸುಳಿವುಗಳು ಯಾವಾಗಲೂ ಇರುತ್ತವೆ. ಹೀಗಾಗಿ ನಾವು ಹೆಚ್ಚು ಸಂಶಯಾಸ್ಪದರಾಗಿರಬೇಕು ಎಂದು ಸಾಮಾಜಿಕ ಮಾಧ್ಯಮ ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ನಕಲಿ ಸುದ್ದಿಗಳು ಸತ್ಯವೆಂಬಂತೆ ಹರಡಬಹುದು ಎಂಬುದನ್ನು ಇದು ತೋರಿಸುತ್ತದೆ. ನಾವು ಅದನ್ನು ಎಷ್ಟು ಜವಾಬ್ದಾರಿಯುತವಾಗಿ ಬಳಸುತ್ತೇವೆ ಎಂಬುದು ಮುಖ್ಯ ಅಂತಾ ವ್ಯಕ್ತಿಯೊಬ್ಬರು ಹೇಳಿದರು. ಉದ್ಯೋಗ ಕದಿಯುವ ರೋಬೋಟ್‌ಗಳು ಮಾತ್ರವಲ್ಲ, ವೇಗವಾಗಿ ಹರಡುವ ನಕಲಿ ಸುದ್ದಿಗಳು ನಿಜಕ್ಕೂ ಅಪಾಯಕಾರಿ ಎಂದು ಮತ್ತೊಬ್ಬರಿ ಹೇಳಿದರು.

ಜುಲೈನಲ್ಲಿ, ಮಲೇಷಿಯಾದ ದಂಪತಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ಕೇಬಲ್ ಕಾರ್ ಸವಾರಿಯ ವಿಡಿಯೊವನ್ನು ವೀಕ್ಷಿಸಿದ ನಂತರ ಕೌಲಾಲಂಪುರದಿಂದ ಪೆರಾಕ್‌ಗೆ 370 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಿದರು. ಆದರೆ ಅವರು ಆ ಸ್ಥಳವನ್ನು ತಲುಪಿದಾಗ, ಅದು ಅಸ್ತಿತ್ವದಲ್ಲಿಲ್ಲ ಎಂದು ಅವರಿಗೆ ತಿಳಿದುಬಂದಿತು. ಆ ವಿಡಿಯೊವನ್ನು ಕೃತಕ ಬುದ್ಧಿಮತ್ತೆ ಬಳಸಿ ರಚಿಸಲಾಗಿತ್ತು. ಎಐ ವಿಡಿಯೊ ನೋಡಿ ದಂಪತಿ ಮೋಸ ಹೋಗಿದ್ದರು.