ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ವಾನ ಪ್ರಿಯರು ಓದಲೇ ಬೇಕಾದ ಸ್ಟೋರಿ; ನಾಯಿಗಳಿಗಾಗಿಯೇ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ರಸ್ತೆಬದಿ ವ್ಯಾಪಾರಿ!

Viral News: ಸಾಮಾನ್ಯವಾಗಿ ಐಸ್ ಕ್ಯಾಂಡಿ, ಪೆಪ್ಸಿ ಇತ್ಯಾದಿಯನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಯನ್ನು ನೀವು ನೋಡಿರಬಹುದು. ಇದೀಗ ವ್ಯಾಪಾರಿಯೊಬ್ಬರು ಸಾಕು ನಾಯಿಗಳಿಗಾಗಿಯೇ ಶುಗರ್ ಫ್ರೀ ಕುಲ್ಫಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಶ್ವಾನ ಪ್ರಿಯರು ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ನೀಡುತ್ತಿದ್ದು ಕ್ಯೂಟ್ ಅಂಕಲ್ ಎಂದು ಕರೆಯುತ್ತಿದ್ದಾರೆ.

ನಾಯಿಗಳ ಆರೈಕೆಗಾಗಿ ಶುಗರ್‌ ಫ್ರೀ ಕುಲ್ಫಿ ತಯಾರಿಸುವ ವ್ಯಾಪಾರಿ

ಜೈಪುರ,ಸೆ.6: ಇಂದು ತಮ್ಮ ಮಕ್ಕಳಂತೆ ಸಾಕು ಪ್ರಾಣಿಗಳನ್ನು ಸಾಕಿ ಸಲಹುವವರು ಅನೇಕರು ಇದ್ದಾರೆ. ಅದಕ್ಕಾಗಿಯೇ ಪ್ರತ್ಯೇಕ ರೂಮ್,ಅಹಾರ ಎಂದು ಕಾಳಜಿ ವಹಿಸುತ್ತಾರೆ. ಇದೀಗ ಬೀದಿಬದಿ ವ್ಯಾಪಾರಿಯೊಬ್ಬರು ಸಾಕು ನಾಯಿಗಳಿಗಾಗಿಯೇ ಶುಗರ್ ಫ್ರೀ ಕುಲ್ಫಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಶ್ವಾನ ಪ್ರಿಯರು ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ನೀಡುತ್ತಿದ್ದು (Viral News) ವ್ಯಾಪಾರಿಯನ್ನು ನೆಟ್ಟಿಗರು ಕ್ಯೂಟ್ ಅಂಕಲ್ ಎಂದು ಕರೆಯುತ್ತಿದ್ದಾರೆ.

ಸಾಮಾನ್ಯವಾಗಿ ಐಸ್ ಕ್ಯಾಂಡಿ, ಪೆಪ್ಸಿ ಇತ್ಯಾದಿಯನ್ನು ಬೀದಿ ಬದಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಯನ್ನು ನೀವು ನೋಡಿರಬಹುದು. ಆದರೆ ಜೈಪುರದಲ್ಲಿ ವ್ಯಾಪಾರಿಯೊಬ್ಬರು ಸಾಕು ನಾಯಿಗಳು ಹಾಗೂ ಬೀದಿ ನಾಯಿಗಳಿಗಾಗಿಯೇ ಪ್ರತ್ಯೇಕವಾಗಿ ಸಕ್ಕರೆ ರಹಿತ ಕುಲ್ಫಿ ತಯಾರಿಸಿ ಎಲ್ಲರ ಮನ ಗೆದ್ದಿದ್ದಾರೆ. ನಾಯಿಗಳ ಆರೈಕೆಯ ಹಿತದೃಷ್ಟಿಯಿಂದ ಈ ವ್ಯಾಪಾರ ನಡೆಸಿದ್ದಕ್ಕಾಗಿ ಅವರು ಹೇಳಿಕೊಂಡಿದ್ದಾರೆ.

ವಿಡಿಯೋ ನೋಡಿ:



ಸಾಮಾನ್ಯವಾಗಿ ಸಕ್ಕರೆ ಪದಾರ್ಥಗಳು ನಾಯಿಗಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ವಿಚಾರವನ್ನು ಗ್ರಹಿಸಿ ನಾಯಿಗಳಿಗಾಗಿಯೇ ಸಕ್ಕರೆ ರಹಿತ ಕುಲ್ಫಿ ತಯಾರಿಸುತ್ತಿರುವ ಕಲ್ಪನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಕ್ಷಣವನ್ನು ವಿಕ್ರಮ್ ಮಿತ್ತರ್ ಎಂಬ ವ್ಯಕ್ತಿಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ. ಅವರು ವ್ಯಾಪಾರಿಯ ಬಳಿ ಹೋಗಿ ನೀವು ನಾಯಿಗಳಿಗಾಗಿಯೇ ವಿಶೇಷವಾಗಿ ಶುಗರ್ ಫ್ರೀ ಕುಲ್ಫಿ ಮಾಡುತ್ತೀರಾ? ವ್ಯಾಪಾರ ಹೇಗಿದೆ ಎಂದು ಕೇಳಿದಾಗ ಉತ್ತರಿಸಿದ ವ್ಯಾಪಾರಿ, ನಾಯಿಗಳಿಗೆ ಈ ಕುಲ್ಫಿಗೆ ಉತ್ತಮ ಬೇಡಿಕೆಯಿದೆ ಎಂದು ತಿಳಿಸಿದ್ದಾರೆ. ಇದನ್ನು ತಿಳಿದ ವಿಕ್ರಮ್, ತಮ್ಮ ಸಾಕುನಾಯಿ 'ತಾರಾ'ಗಾಗಿ ಒಂದು ಕುಲ್ಫಿ ಖರೀದಿಸಿದ್ದಾರೆ. ತಾರಾ ಕೆಲವೇ ಸೆಕೆಂಡುಗಳಲ್ಲಿ ಆ ಕುಲ್ಫಿಯನ್ನು ಸವಿದಿದೆ.

Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

"ಜೈಪುರದಲ್ಲಿ ನಾನು ಕಂಡ ಅತ್ಯಂತ ಅನಿರೀಕ್ಷಿತ ಚಿಂತನಶೀಲ ವಿಷಯಗಳಲ್ಲಿ ಇದು ಒಂದು" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಕುಲ್ಫಿ ಮಾರಾಟಗಾರನು ವಿಶೇಷವಾಗಿ ನಾಯಿ ಗಳಿಗಾಗಿ ಸಕ್ಕರೆ ರಹಿತ ಕುಲ್ಫಿಯನ್ನು ತಯಾರಿಸುತ್ತಾನೆ, ತುಂಬಾ ಸರಳವಾದ ಕಲ್ಪನೆ, ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಚಿಂತನಶೀಲವಾಗಿದೆ ಅಂದರು. ​ಸಾಕುನಾಯಿಗಳ ಮಾಲೀಕರು ಮಾತ್ರವಲ್ಲದೆ, ಬೀದಿ ನಾಯಿಗಳಿಗೆ ಉಣಿಸಲು ಬಯಸುವ ಸಾರ್ವಜನಿಕರು ಸಹ ಈ ವ್ಯಾಪಾರಿಯಿಂದ ಕುಲ್ಫಿ ಖರೀದಿಸುತ್ತಾರೆ.

ಈ ವೀಡಿಯೊ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಜನರು ವ್ಯಾಪಾರಿಯ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು "ಚಿಂತನಶೀಲರು" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ​ಅತ್ಯುತ್ತಮ ಆಲೋಚನೆ ಮತ್ತು ಶುದ್ಧ ಮನಸ್ಸು ಎಂದು ಬರೆದಿದ್ದಾರೆ.