ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕೇವಲ 7,000 ರೂ.ಗೆ ವಿಮಾನ ನಿರ್ಮಿಸಿದನೇ ಈ ಬಾಲಕ? ವೈರಲ್‌ ವಿಡಿಯೊದ ಅಸಲಿಯತ್ತೇನು?

Teenager builds aircraft: ಹದಿಹರೆಯದ ಬಾಲಕನೊಬ್ಬ ಕೇವಲ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿಕೊಂಡು ವಿಮಾನವನ್ನು ನಿರ್ಮಿಸಿ ಹಾರಿಸುವ ಮೂಲಕ ಸಾವಿರಾರು ಜನರನ್ನು ಬೆರಗುಗೊಳಿಸಿದ್ದಾನೆ. ಬಿಹಾರದ ಮುಜಾಫರ್‌ಪುರದ ನಿವಾಸಿ ಅವಿನೇಶ್ ಕುಮಾರ್ ಎಂಬುವವರು ಈ ಸಾಧನೆ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪಟನಾ: ಹದಿಹರೆಯದ ಹುಡುಗನೊಬ್ಬ ಕೇವಲ ಸ್ಕ್ರ್ಯಾಪ್ ವಸ್ತುಗಳನ್ನು ಬಳಸಿಕೊಂಡು ವಿಮಾನವನ್ನು ನಿರ್ಮಿಸಿ ಹಾರಿಸುವ ಮೂಲಕ ಸಾವಿರಾರು ಜನರನ್ನು ಬೆರಗುಗೊಳಿಸಿದ್ದಾನೆ. ಬಿಹಾರದ ಮುಜಾಫರ್‌ಪುರದ ನಿವಾಸಿ ಅವಿನೇಶ್ ಕುಮಾರ್ ಎಂಬುವವರು ಈ ಸಾಧನೆ ಮಾಡಿದ್ದಾರೆ. ಪ್ರಯೋಗಾಲಯ, ಔಪಚಾರಿಕ ತರಬೇತಿ ಅಥವಾ ತಾಂತ್ರಿಕ ಉಪಕರಣಗಳಿಲ್ಲದೆ ಈ ಸಾಧನೆ ಮಾಡಿರುವುದು ಎಲ್ಲರಲ್ಲೂ ಬೆರಗುಮೂಡಿಸಿದೆ. ಕೇವಲ 7 ದಿನಗಳಲ್ಲಿ ಸುಮಾರು 7,000 ರೂ. ಖರ್ಚು ಮಾಡಿ ಸಿಂಗಲ್ ಸೀಟರ್ ವಿಮಾನವನ್ನು ನಿರ್ಮಿಸಿದ್ದಾರೆ. ಹೀಗೊಂದು ಅಚ್ಚರಿಯ ಸಂಗತಿ ವೈರಲ್‌ ಆಗಿದೆ.

ಅವಿನೇಶ್ ಅವರ ಸ್ವದೇಶಿ ನಿರ್ಮಿತ ವಿಮಾನವು ಸುಮಾರು 300 ಅಡಿ ಎತ್ತರಕ್ಕೆ ಹಾರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಭಾರಿ ಪ್ರಶಂಸೆ ವ್ಯಕ್ತವಾಗಿದೆ. 15 ವರ್ಷದ ಬಾಲಕನ ಚಾತುರ್ಯವನ್ನು ನೆಟ್ಟಿಗರು ಮೆಚ್ಚಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ಅವಿನೇಶ್ ತನ್ನ ತಾತ್ಕಾಲಿಕ ಕಾಕ್‌ಪಿಟ್‌ನಲ್ಲಿ ಶಾಂತವಾಗಿ ಕುಳಿತು, ಎಂಜಿನ್ ಅನ್ನು ಸ್ಟಾರ್ಟ್ ಮಾಡಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದವರ ಹರ್ಷೋದ್ಗಾರ ಕೇಳಿಬಂದಿದೆ. ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿದ ನಂತರ, ವಿಮಾನ ಸೇಫ್‌ ಆಗಿ ಲ್ಯಾಂಡ್‌ ಆಗಿದೆ.

ವೈರಲ್ ಪೋಸ್ಟ್ ಇಲ್ಲಿದೆ:

ಹದಿಹರೆಯದ ಹುಡುಗನೊಬ್ಬ ಕಸದಿಂದ ರಸವನ್ನು ನಿರ್ಮಿಸಿದ್ದಾನೆ. ಬೇಡದೆ ಇರುವ ವಸ್ತುಗಳನ್ನು ಬಳಸಿ, ವಿಮಾನ ನಿರ್ಮಿಸಿದಲ್ಲದೆ ಅದನ್ನು ಆಕಸ್ಮಿಕವಾಗಿ ಹಾರಿಸಿದ್ದಾನೆ. ಈ ಬಗ್ಗೆ ಮಾತನಾಡಿರುವ ಅವಿನೇಶ್, ಬಾಲ್ಯದಿಂದಲೂ ವಿಮಾನ ತಯಾರಿಸುವ ಕನಸು ಕಂಡಿದ್ದರು ಎಂದು ಹೇಳಿದರು. ಕನಸನ್ನು ನನಸಾಗಿಲು ಅವಿನೇಶ್ ಸ್ಕ್ರ್ಯಾಪ್ ಸಂಗ್ರಹಿಸಲು ಪ್ರಾರಂಭಿಸಿರು. ವಿಮಾನ ತಯಾರಿಕೆಯು ಬಹಳ ಕಠಿಣವಾಗಿತ್ತು. ಆದರೆ ಅದು ಅಸಾಧ್ಯವೆಂದು ಎಂದಿಗೂ ಭಾವಿಸಿರಲಿಲ್ಲ ಎಂದು ತಿಳಿಸಿದ್ದಾರೆ.

ವಿಡಿಯೊದ ಅಸಲಿಯತ್ತೇನು?

ಆದರೆ ಈ ವೈರಲಾಗುತ್ತಿರುವ ವಿಡಿಯೊ ನಕಲಿ ಎಂಬ ವಿಚಾರ ಇದೀಗ ಬಯಲಾಗಿದೆ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಇದು ನಕಲಿ ವಿಡಿಯೊ ಎಂದು ತಿಳಿದು ಬಂದಿದೆ. ಎರಡು ವರ್ಷಗಳ ಹಿಂದೆ, ಬಿಎ ವಿದ್ಯಾರ್ಥಿನಿ ರಿಕ್ಕಿ ಶರ್ಮಾ ಎಂಬ ಮತ್ತೊಬ್ಬ ಯುವಕ ಥರ್ಮೋಕೋಲ್ ಮತ್ತು ಮೀನು ಸಂಗ್ರಹಣಾ ಪೆಟ್ಟಿಗೆಗಳನ್ನು ಬಳಸಿ ಯುದ್ಧ ವಿಮಾನವನ್ನು ನಿರ್ಮಿಸಿ ಸುದ್ದಿಯಾಗಿದ್ದ. ಅದು ಕೂಡ 300 ಅಡಿ ಎತ್ತರವನ್ನು ತಲುಪುವಲ್ಲಿ ಯಶಸ್ವಿಯಾಯಿತು. ಆದರೆ ಅವಿನಾಶ್‌ ಅವರ ಈ ವಿಡಿಯೊ ಶುದ್ಧ ಸುಳ್ಳು ಎಂಬು ಸಾಬೀತಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಆನೆ ಮರಿಗಳ ಮುದ್ದಾದ ವಿಡಿಯೋ ವೈರಲ್: ಇದು ‘ಒಡಹುಟ್ಟಿದವರ ಶುದ್ಧ, ಕಾಡು ಪ್ರೀತಿ’!

ಆದರೆ ವಿಡಿಯೊ ನೋಡಿದ ನೆಟ್ಟಿಗರು ಅಸಲಿ ವಿಚಾರ ಗೊತ್ತಿಲ್ಲದೇ ಅವಿನಾಶ್‌ ಅವರನ್ನು ಪ್ರಶಂಸಿಸಿದ್ದಾರೆ. ಯಾವುದೇ ಬೆಂಬಲ ಮತ್ತು ಸೀಮಿತ ಸಂಪನ್ಮೂಲಗಳಿಲ್ಲದೆ, ಅವಿನೇಶ್ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಗ್ರಾಮೀಣ ಪ್ರತಿಭೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರವು ಇಂತಹ ತಳಮಟ್ಟದ ನಾವೀನ್ಯತೆಯನ್ನು ಗುರುತಿಸಿ ಬೆಂಬಲಿಸಬೇಕೆಂದು ಅನೇಕರು ಕರೆ ನೀಡುತ್ತಿದ್ದಾರೆ.