ಪಣಜಿ, ಮಾ.31: ಪ್ರವಾಸಿಗರೊಬ್ಬರು ಪ್ಯಾರಾಸೈಲಿಂಗ್ (parasailing) ಮಾಡುತ್ತಿರುವಾಗ ಕೇಬಲ್ ಹಠಾತ್ತನೆ ತುಂಡಾಗಿ ಸಮುದ್ರಕ್ಕೆ ಬಿದ್ದಿದ್ದಾರೆ. ದೋಣಿಯಲ್ಲಿದ್ದ ಸಿಬ್ಬಂದಿ ಪ್ರವಾಸಿಗನನ್ನು ರಕ್ಷಿಸಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ದುರಂತವೊಂದು ತಪ್ಪಿದೆ. ಗೋವಾದ (Goa) ಬಾಗಾ ಬೀಚ್‌ನಲ್ಲಿ (Baga beach) ಈ ಘಟನೆ ನಡೆದಿದೆ. ಈ ಬಗ್ಗೆ ಗೋವಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಬರಬೇಕಿದೆ. ಆದರೆ, ಈ ಘಟನೆಯು ಭಾರತದಲ್ಲಿ ಸಾಹಸ ಕ್ರೀಡೆಗಳ ಸುರಕ್ಷತೆಯ ಬಗ್ಗೆ ಕಳವಳವನ್ನು ಮತ್ತೆ ಹುಟ್ಟುಹಾಕಿದೆ.
ವಿಡಿಯೋ ನೋಡಿ
ಭಾರತದಲ್ಲಿ ನಡೆದಿರುವ ಹಿಂದಿನ ಘಟನೆಗಳು
2025ರಲ್ಲಿ ಸಾಹಸ ಕ್ರೀಡೆಗಳಲ್ಲಿ ನಡೆದಿದ್ದ ಹಲವಾರು ಅಪಘಾತಗಳು ಸಂಭವಿಸಿದ್ದವು. ಅಕ್ಟೋಬರ್ 2025 ರಲ್ಲಿ, ರಾಜ್ಯ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಪ್ಯಾರಾಗ್ಲೈಡಿಂಗ್ ತರಬೇತಿ ಕಾರ್ಯಕ್ರಮದ ಸಮಯದಲ್ಲಿ ವ್ಯಕ್ತಿಯೊಬ್ಬ ಉತ್ತರಾಖಂಡದ ತೆಹ್ರಿ ಸರೋವರಕ್ಕೆ ಬಿದ್ದಿದ್ದ. ಕೋಟಿ ಕಾಲೋನಿ ಬಳಿ ಈ ಘಟನೆ ನಡೆದಿತ್ತು. 26 ವರ್ಷದ ರಿಷಿ ಎಂಬ ತರಬೇತಿದಾರ ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ನೀರಿಗೆ ಬಿದ್ದಿದ್ದ. ಅದೃಷ್ಟವಶಾತ್, ಅವನನ್ನು ರಕ್ಷಿಸಲಾಗಿತ್ತು.
Drowned: ರಾಜ್ಯಾದ್ಯಂತ ನಾಲ್ಕು ಅವಘಡ, ಈಜಲು ತೆರಳಿದ ಐವರು ನೀರುಪಾಲು
ಕಳೆದ ವರ್ಷ ಜುಲೈನಲ್ಲಿ ಹಿಮಾಚಲ ಪ್ರದೇಶದ ಇಂದ್ರುನಾಗ್‌ನಲ್ಲಿ ಟೇಕ್-ಆಫ್ ಸ್ಥಳದಲ್ಲಿ ಪ್ಯಾರಾಗ್ಲೈಡರ್ ಅಪಘಾತಕ್ಕೀಡಾಗಿ ಗುಜರಾತ್‌ನ ಅಹಮದಾಬಾದ್‌ನ 25 ವರ್ಷದ ಪ್ರವಾಸಿಗರೊಬ್ಬರು ಮೃತಪಟ್ಟಿದ್ದರು. ಟೇಕ್ ಆಫ್ ಆಗುವ ಸಮಯದಲ್ಲಿ ಗ್ಲೈಡರ್ ಗಾಳಿಯಲ್ಲಿ ಮೇಲೇರಲು ವಿಫಲವಾಗಿ ಸ್ವಲ್ಪ ದೂರದ ನಂತರ ಅಪಘಾತಕ್ಕೀಡಾಯಿತು. ಸತೀಶ್ ರಾಜೇಶ್ ಭಾಯ್ ಮತ್ತು ಪೈಲಟ್ ಸೂರಜ್ ಇಬ್ಬರೂ ಗಾಯಗೊಂಡರು.
ಜನವರಿ 2025 ರಲ್ಲಿ, ಗೋವಾದಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದಾಗ ಕಂದಕಕ್ಕೆ ಡಿಕ್ಕಿ ಹೊಡೆದು 27 ವರ್ಷದ ಮಹಿಳೆ ಮತ್ತು ಆಕೆಯ ಬೋಧಕ ಮೃತಪಟ್ಟರು. ಪೊಲೀಸರ ಪ್ರಕಾರ, ಉತ್ತರ ಗೋವಾದ ಕೇರಿ ಗ್ರಾಮದಲ್ಲಿ ಈ ಅಪಘಾತ ನಡೆದಿದ್ದು, ಮೃತಪಟ್ಟವರನ್ನು ಪುಣೆಯ ಶಿವಾನಿ ದಬಲ್ ಮತ್ತು ಆಕೆಯ ಬೋಧಕ ನೇಪಾಳದ ಸುಮಲ್ ನೇಪಾಳಿ (26) ಎಂದು ಗುರುತಿಸಲಾಗಿತ್ತು.
ಸಂಜೆ 5 ಗಂಟೆ ಸುಮಾರಿಗೆ ಕೇರಿ ಪ್ರಸ್ಥಭೂಮಿಯ ಬಂಡೆಯಿಂದ ಹಾರಿದ ಸ್ವಲ್ಪ ಸಮಯದ ನಂತರ ಇಬ್ಬರೂ ಕಂದಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು.
ಪ್ರೇಮಿಗೆ ಥಳಿಸಿದ ಗೆಳತಿಯ ಕುಟುಂಬಸ್ಥರು
ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದ ಪ್ರೇಮಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಗೆಳತಿಯ ಕುಟುಂಬದವರು ಕ್ರೂರವಾಗಿ ಥಳಿಸಿರುವ ಘಟನೆ ಉತ್ತರ ಪ್ರದೇಶದ ಪಿಲಿಭಿತ್‌ನ ಬರ್ಖೇಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ಮೂರು ದಿನಗಳ ನಂತರ, ವಿಡಿಯೊ ವೈರಲ್ ಆಗಿದೆ. ಸಂತ್ರಸ್ತನ ತಂದೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಲಿಖಿತ ದೂರು ದಾಖಲಿಸಿದ್ದಾರೆ. ಸಂತ್ರಸ್ತನ ತಂದೆ ನೀಡಿದ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಗಿಯ ಕಡೆಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.