ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಲಂಡನ್-ಬಾಂಗ್ಲಾದೇಶ ಫ್ಲೈಟ್‌ನಲ್ಲಿ ಪ್ರಯಾಣಿಕರಿಬ್ಬರ ಭೀಕರ ಗಲಾಟೆ: ವಿಡಿಯೊ ವೈರಲ್

Viral News: ವಿಮಾನದಲ್ಲಿ ಪ್ರಯಾಣದ ವೇಳೆ ಇಬ್ಬರು ಪ್ರಯಾಣಿಕರ ನಡುವೆ ಮಾರಾಮಾರಿ ಜಗಳ ಉಂಟಾದ ಅಘಾತಕಾರಿ ಘಟನೆಯೊಂದು ನಡೆದಿದೆ. ಇದರಿಂದ ಸಹ-ಪ್ರಯಾಣಿಕರು ಆತಂಕ ಕ್ಕೊಳಗಾಗಿದ್ದು ವಿಮಾನ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ತಿಳಿಗೊಳಿಸಲು ಹರಸಾಹಸ ಪಟ್ಟಿರುವುದು ಕಂಡುಬಂದಿದೆ.

ಇಂಟರ್ ನೆಟ್ ಚಿತ್ರ

ಲಂಡನ್,ಸೆ.18: ಬಾಂಗ್ಲಾದೇಶ ವಿಮಾನದಲ್ಲಿ ಪ್ರಯಾಣದ ವೇಳೆ ಇಬ್ಬರು ಪ್ರಯಾಣಿಕರ ನಡುವೆ ಮಾರಾಮಾರಿ ಜಗಳ ಉಂಟಾದ ಅಘಾತಕಾರಿ ಘಟನೆಯೊಂದು ನಡೆದಿದೆ. ಇದರಿಂದ ಸಹ-ಪ್ರಯಾಣಿಕರು ಆತಂಕಕ್ಕೊಳಗಾಗಿದ್ದು ವಿಮಾನ ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ತಿಳಿಗೊಳಿಸಲು ಹರಸಾಹಸ ಪಟ್ಟಿರುವುದು ಕಂಡುಬಂದಿದೆ. ವೈರಲ್ (Viral News) ದೃಶ್ಯಾವಳಿಗಳಲ್ಲಿ, ಪರಿಸ್ಥಿತಿಯು ದೈಹಿಕ ಸಂಘರ್ಷಕ್ಕೆ ತಿರುಗುವ ಮೊದಲು ಇಬ್ಬರು ವ್ಯಕ್ತಿಗಳು ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ.

ಲಂಡನ್‌ನಿಂದ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದ ಬಿಮಾನ್ ಬಾಂಗ್ಲಾದೇಶ ಏರ್‌ಲೈನ್ಸ್ ವಿಮಾನದಲ್ಲಿ ಈ ಘಟನೆಯೂ ಕಂಡು ಬಂದಿದೆ. ಇಬ್ಬರು ಪ್ರಯಾಣಿಕರು ಕ್ಷುಲಕ ಕಾರಣಕ್ಕೆ ಮೊದಲು ಮಾತಿನ ಚಕಮಕಿ ನಡೆಸಿದ್ದು ಬಳಿಕ ದೈಹಿಕ ಘರ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ವಿಡಿಯೋ ನೋಡಿ:



ವಿಮಾನ ಹಾರಾಟ ವೇಳೆಯಲ್ಲೇ ಇಬ್ಬರು ವ್ಯಕ್ತಿಗಳ ನಡುವೆ ಆರಂಭವಾದ ಸಣ್ಣ ಮಾತುಕತೆ, ವಿಕೋಪಕ್ಕೆ ತಿರುಗಿ ಇಬ್ಬರೂ ಪರಸ್ಪರ ಹಿಗ್ಗಾಮುಗ್ಗಾ ಮುಷ್ಟಿಗೈದು ಹೊಡೆದಾಡಿಕೊಂಡಿದ್ದಾರೆ. ಒಂದು ಹಂತದಲ್ಲಿ, ಸಂಘರ್ಷದ ವೇಳೆ ಒಬ್ಬ ವ್ಯಕ್ತಿಯ ಟಿ-ಶರ್ಟ್ ಹರಿದುಹೋಗುತ್ತದೆ. ಈ ಜಗಳವು ವಿಮಾನದ ಒಳಗೆ ಅಡಚಣೆ ಯನ್ನು ಉಂಟುಮಾಡಿದ್ದು ಹಠಾತ್ ಹಿಂಸಾಚಾರದಿಂದಾಗಿ ಪ್ರಯಾಣಿಕರು ಆತಂಕಕ್ಕೊಳಗಾದರು

Viral Video: ಮರೆಯಾದ ಮಾನವೀಯತೆ; ನೇಪಾಳ ಪ್ರವಾಹದಲ್ಲಿ ಮೃತಪಟ್ಟ ಮಹಿಳೆಯ ಚಿನ್ನದ ಓಲೆ ಕದ್ದ ಕಿಡೀಗೆಡಿಗಳು!

ಇದ್ದಕ್ಕಿದ್ದಂತೆ ನಡೆದ ಈ ಘಟನೆಯಿಂದಾಗಿ ವಿಮಾನದಲ್ಲಿದ್ದ ಇತರ ಪ್ರಯಾಣಿಕರು, ಪ್ರಮುಖವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರು ತೀವ್ರ ಭಯಭೀತರಾದರು. ಅಂತಿಮವಾಗಿ ವಿಮಾನ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರು ಮಧ್ಯಪ್ರವೇಶಿಸಿ ಆ ಇಬ್ಬರು ವ್ಯಕ್ತಿಗಳನ್ನು ಬೇರ್ಪಡಿಸಿದರು.

ಈ ಜಗಳಕ್ಕೆ ನಿಖರವಾದ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ‌. ಕೆಲವರು ಆಸನದ ವಿಚಾರವಾಗಿ ಜಗಳ ಉಂಟಾಗಿರಬಹುದು ಎಂದು ಹೇಳುತ್ತಿದ್ದಾರೆ‌. ವಿಮಾನ ಇಳಿದ ನಂತರ ಆ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆಯೇ ಅಥವಾ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಕೂಡ ಸ್ಪಷ್ಟವಾಗಿಲ್ಲ

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವಿಮಾನದ ಒಳಗೆ ಪ್ರಾಣಾಪಾಯ ಉಂಟುಮಾಡುವ ರೀತಿಯಲ್ಲಿ ನಡೆದುಕೊಂಡ ಇಬ್ಬರೂ ಪ್ರಯಾಣಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತ ವಾಗುತ್ತಿದೆ..ಬಳಕೆದಾರರೊಬ್ಬರು ವಿಮಾನದಲ್ಲಿ ಗೊಂದಲ ಸೃಷ್ಟಿಸಿ, ಇತರರ ಬಗ್ಗೆ ಯೋಚಿಸದೆ ಅಶಾಂತಿ ಉಂಟುಮಾಡಿದ ಆ ಇಬ್ಬರು ವ್ಯಕ್ತಿಗಳನ್ನು ಸುಮ್ಮನೆ ಬಿಡಬಾರದು ಎಂದಿದ್ದಾರೆ.