ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

50 ಲಕ್ಷ ರುಪಾಯಿ ಸಂಬಳವಿದ್ದರೂ ಐಷಾರಾಮಿ ವಸ್ತು ಬಳಸದ ಬೆಂಗಳೂರಿನ ಯುವತಿ: ಜೆನ್‌ ಝೀಗಳಿಗೆ ಮಾದರಿ ಇವರ ನಡೆ

Viral Video: ಬೆಂಗಳೂರಿನಲ್ಲಿ ಉದ್ಯೋಗ ಮಾಡುವ 27 ವರ್ಷದ ಎಂಜಿನಿಯರ್ ಒಬ್ಬರು ವಿಭಿನ್ನ ಜೀವನ ಶೈಲಿ ಅನುಸರಿಸುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಉತ್ತಮ ಸಂಬಳ ಪಡೆಯುತ್ತಿದ್ದರೂ ಸರಳವಾಗಿ ಬದುಕು ಸಾಗಿಸುತ್ತಿದ್ದಾರೆ. ಸದ್ಯ ಈ ಯುವತಿಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಐಷಾರಾಮಿ ವಸ್ತು ಬಳಸದೆ ಜೀವನ ಸಾಗಿಸುವ ಬೆಂಗಳೂರು ಯುವತಿ

ಬೆಂಗಳೂರು, ಏ. 16: ಇಂದಿನ ಫ್ಯಾಷನ್‌ ಯುಗದಲ್ಲಿ ಎಷ್ಟೇ ಸಂಬಳವಿದ್ದರೂ ಖರ್ಚು ವೆಚ್ಚಗಳು ದುಬಾರಿ. ಬ್ರ್ಯಾಂಡೆಡ್‌ ಬಟ್ಟೆ, ಐಷಾರಾಮಿ ವಾಹನ, ಮನೆ ಎಂದು ಇಎಂಐಗೆ ಸಂಬಳ ವ್ಯಯಿಸಬೇಕಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಉದ್ಯೋಗ ಮಾಡುವ 27 ವರ್ಷದ ಎಂಜಿನಿಯರ್ ಒಬ್ಬರು ವಿಭಿನ್ನ ಜೀವನ ಶೈಲಿ ಅನುಸರಿಸುವ ಮೂಲಕ ಸುದ್ದಿಯಾಗಿದ್ದಾರೆ. ಇವರು ಉತ್ತಮ ಸಂಬಳ ಪಡೆಯುತ್ತಿದ್ದರೂ ಸರಳವಾಗಿ ಬದುಕು ಸಾಗಿಸುತ್ತಿದ್ದಾರೆ. ಸದ್ಯ ಈ ಯುವತಿಯ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ಬೆಂಗಳೂರಿನಲ್ಲಿ ಕೆಲಸ ಮಾಡುವ ಡೇಟಾ ಎಂಜಿನಿಯರ್ ವರ್ಷಕ್ಕೆ 50 ಲಕ್ಷ ರುಪಾಯಿ ಗಳಿಸುತ್ತಾರೆ. ಆದರೆ ಇವರು ಐಫೋನ್‌, ಬ್ರ್ಯಾಂಡೆಡ್‌ ಬಟ್ಟೆ ಮತ್ತು ಹ್ಯಾಂಡ್‌ ಬ್ಯಾಗ್‌ಗಳಂತಹ ಐಷಾರಾಮಿ ವಸ್ತುಗಳನ್ನು ಖರೀದಿಸಲು ಆಸಕ್ತಿ ವಹಿಸುವುದಿಲ್ಲ. ಬದಲಿಗೆ ಪ್ರಯಾಣ ಮಾಡಲು, ಉಳಿತಾಯ ಮತ್ತು ಕುಟುಂಬದ ಅಗತ್ಯಗಳಿಗಾಗಿ ಖರ್ಚು ಮಾಡಲು ಬಯಸುತ್ತಾರೆ ಎನ್ನುವುದು ವಿಶೇಷ.

ವಿಡಿಯೊ ನೋಡಿ:



ಸಾಮಾನ್ಯವಾಗಿ ಹೆಚ್ಚಿನ ಸಂಬಳ ಇದ್ದವರು ದುಬಾರಿ ವಸ್ತುಗಳತ್ತ ಗಮನಹರಿಸುತ್ತಾರೆ. ಆದರೆ ಇವರು ಯಶಸ್ಸನ್ನು ತೋರಿಸಲು ವಸ್ತುಗಳಿಗೆ ಖರ್ಚು ಮಾಡುವ ಬದಲು ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುತ್ತಾರೆ . "ನಾನು ಪ್ರದರ್ಶನಕ್ಕಾಗಿ ಹಣ ಖರ್ಚು ಮಾಡುವುದಿಲ್ಲ. ಬದಲಿಗೆ ಭವಿಷ್ಯಕ್ಕಾಗಿ ಉಳಿಸುತ್ತೇನೆ" ಎಂದಿದ್ದಾರೆ. ಆ ಮೂಲಕ ಯುವ ಜನೆತೆಗೆ ಮಾದರಿ ಎನಿಸಿಕೊಂಡಿದ್ದಾರೆ.

ಪಟಾಕಿ ಹುಚ್ಚಿಗೆ ಬಾಲಕಿ ಕಣ್ಣನ್ನೇ ತೆಗೆದನೇ ಬ್ರಿಟಿಷ್‌ ಇನ್‌ಫ್ಲುಯೆನ್ಸರ್‌?

ಅವರು ತಮ್ಮ ಹೆತ್ತವರಿಗಾಗಿ ಖರೀದಿಸಿದ ಮನೆಗೆ ಪ್ರತಿ ತಿಂಗಳು 30,000 ರುಪಾಯಿ EMI ಆಗಿ ಪಾವತಿಸುವುದಾಗಿಯೂ ತಿಳಿಸಿದ್ದಾರೆ. "ಮನೆ ಒಂದು ಹೊಣೆಗಾರಿಕೆ ಎಂದು ನನಗೆ ತಿಳಿದಿದೆ. ನನ್ನ ಹೆತ್ತವರಿಗಾಗಿ ನಾನು ಇದನ್ನು ಮಾಡಲು ಬಯಸಿದ್ದೆ. ಏಕೆಂದರೆ ಅವರು ನನಗಾಗಿ ತುಂಬಾ ಮಾಡಿದ್ದಾರೆʼʼ ಎಂದಿದ್ದಾರೆ. ವಸ್ತುಗಳಿಗಿಂತ ಹೆಚ್ಚಾಗಿ ಪ್ರಪಂಚ ಸುತ್ತಲು ಇಷ್ಟಪಡುವ ಇವರು, 2025ರಲ್ಲಿ ಪ್ರವಾಸಕ್ಕಾಗಿ ಮಾತ್ರವೇ 7 ಲಕ್ಷ ರುಪಾಯಿ ವ್ಯಯಿಸಿದ್ದಾರೆ. ಅವರು ತಿಂಗಳಿಗೆ ಸುಮಾರು 3 ಲಕ್ಷ ರುಪಾಯಿ ಗಳಿಸುತ್ತಾರೆ. ಅದರಲ್ಲಿ ಮತ್ತು SIPಗಳಲ್ಲಿ 1 ಲಕ್ಷ ರುಪಾಯಿ ಹೂಡಿಕೆ ಮಾಡುತ್ತಾರೆ. ಜೀವನ ನಿಭಾಯಿಸಲು 6 ತಿಂಗಳಿಗಾಗುವಷ್ಟು ಹಣವನ್ನು ಪ್ರತ್ಯೇಕವಾಗಿ ಇರಿಸಿದ್ದಾರೆ.

ಕೆಲವರು ಈ ಯುವತಿಯ ಈ ಜೀವನ ಶೈಲಿಗೆ ಫಿದಾ ಆಗಿದ್ದಾರೆ. ಕೆಲವರು ಟೀಕೆ ಟೀಕಿಸಿದ್ದಾರೆ. ಒಬ್ಬರು, ʼʼಕಡಿಮೆ ಸಂಬಳ ಇದ್ದರೂ ಬದುಕು ಸಂತೋಷದಾಯವಾಗಿದೆಯೇ ಎಂಬುವುದು ಮುಖ್ಯʼʼ ಎಂದಿದ್ದಾರೆ. ಮತ್ತೊಬ್ಬರು, ʼʼನೀವು ಜೀವನ ಎಂಜಾಯ್ ಮಾಡುತ್ತಿಲ್ಲ. ಹೂಡಿಕೆ ಮಾತ್ರ ಮುಖ್ಯವಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.