ಡೆಹ್ರಾಡೂನ್, ಆ. 8: ಉದ್ದ ಕೂದಲಿನ ಹುಡುಗಿಯರು ಈಗ ಕಾಣ ಸಿಗೋದು ಈಗ ಅಪರೂಪವಾಗಿ ಬಿಟ್ಟಿದೆ. ಇಂದು ಬಹುತೇಕರು ವೆಸ್ಟರ್ನ್ ಲೈಫ್‌ಸ್ಟೈಲ್‌ಗೆ ಮಾರು ಹೋಗಿ ಶಾಟ್ ಹೇರ್ ಸ್ಟೈಲ್ ಆಯ್ಕೆ ಮಾಡುತ್ತಾರೆ. ಇಂಥವರ ನಡುವೆ ಬರೋಬ್ಬರಿ 8 ಅಡಿ ಉದ್ದ ಕೂದಲನ್ನು ಬೆಳೆಸಿಕೊಂಡಿರುವ ಮಹಿಳೆಯನ್ನು ನೋಡಿದ್ದೀರಾ? ಹೌದು, ಉತ್ತರಾಖಂಡದ ರೇಣು ಧರಿಯಾಲ್ ವಿಶ್ವದಲ್ಲೇ ಅತೀ ಉದ್ದ ಕೂದಲನ್ನು ಬೆಳೆಸಿಕೊಂಡು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಈ ಖುಷಿಯನ್ನು ಆಚರಿಸುವುದರ ಜತೆಗೆ, ರೇಣು ತಮ್ಮ ಕೂದಲಿನಕಾಳಜಿ ಮಾಡುತ್ತಿದ್ದಾರೆ ಎಂಬುದನ್ನು (Viral News) ಬಹಿರಂಗಪಡಿಸಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಈ ಸಾಧನೆಯನ್ನು ತನ್ನ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಉತ್ತರಾಖಂಡದ ರೇಣು ಧರಿಯಾಲ್ ಹೊಸ ದಾಖಲೆ ಬರೆದಿದ್ದಾರೆ ಎಂದು ಪರಿಚಯಿಸಿದೆ. ವಿಶ್ವದಲ್ಲೇ ಅತ್ಯಂತ ಉದ್ದವಾದ ಕೂದಲು ಹೊಂದಿರುವ ಮಹಿಳೆ ರೇಣು. ಅವರ ಈ ಕೂದಲಿನ ಉದ್ದ 271.50 ಸೆಂ.ಮೀ. ಅಂದರೆ 8 ಅಡಿ 10 ಇಂಚು ಎಂದು ತಿಳಿಸಿದೆ. ರೇಣು 2015ರಿಂದ ನಿರಂತರವಾಗಿ ತನ್ನ ಕೂದಲನ್ನು ಬೆಳೆಸುತ್ತಿದ್ದಾಳೆ.
ವೈರಲ್ ಪೋಸ್ಟ್:
ರೇಣು ಅವರ ಕೂದಲನ್ನು ಏಪ್ರಿಲ್‌ನಲ್ಲಿ ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಳೆದು ಪರಿಶೀಲಿಸಲಾಯಿತು. ಆ ಮೂಲಕ ಅವರು ಉಕ್ರೇನ್‌ನ ಅಲಿಯಾ ನಾಸಿರೋವಾ ಅವರ ಹಿಂದಿನ ದಾಖಲೆಯನ್ನು ಮುರಿದಿದಿದ್ದಾರೆ. ಅಲಿಯಾ ನಾಸಿರೋವಾ ಅವರ ಕೂದಲು 257.33 ಸೆಂ.ಮೀ. ಅಂದರೆ 8 ಅಡಿ 5.3 ಇಂಚು ಉದ್ದವಿದೆ.
ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್ ಝೀ ಉದ್ಯೋಗಿ
ತನಗೆ ಸ್ಫೂರ್ತಿ ಏನು ಎಂಬುದನ್ನು ವಿವರಿಸುತ್ತಾ ರೇಣು, "ನಾನು 2015ರಿಂದ ನಿರಂತರವಾಗಿ ನನ್ನ ಕೂದಲನ್ನು ಬೆಳೆಸುತ್ತಿದ್ದೇನೆ. ಭಾರತೀಯ ಸಂಸ್ಕೃತಿಯಲ್ಲಿ, ಉದ್ದನೆಯ ಕೂದಲನ್ನು ಸೌಂದರ್ಯ ಮತ್ತು ಸಂಪ್ರದಾಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದು ನನಗೆ ನನ್ನ ಕೂದಲನ್ನು ಇಷ್ಟು ಉದ್ದವಾಗಿ ಬೆಳೆಯಲು ಸ್ಫೂರ್ತಿ ನೀಡಿತುʼʼ ಎಂದರು.
ಗಿನ್ನೆಸ್ ವಿಶ್ವ ದಾಖಲೆಯ ಪೋಸ್ಟ್‌ಗೆ ಹಲವು ಪ್ರತಿಕ್ರಿಯೆ ಬಂದಿದ್ದು, ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಗಿನ್ನೆಸ್ ಶೇರ್ ಮಾಡಿದ ಫೋಟೊಗಳಲ್ಲಿ ಅವರ ಕೂದಲು ನೆಲದಾದ್ಯಂತ ಹರಡಿಕೊಂಡಿರುವುದು ಕಂಡು ಬಂದಿದೆ. ಹಾಸಿಗೆಯ ಅಂಚಿನಲ್ಲಿ ಕೂದಲು ಹರಡಿಕೊಂಡಿರುವುದು ಮತ್ತು ಅವರು ಕುಳಿತುಕೊಳ್ಳುವಾಗ ಸುತ್ತಲೂ ಸುತ್ತಿಕೊಂಡಿರುವುದನ್ನು ಕಾಣಬಹುದು.
ಈ ಕೂದಲನ್ನು ಕಾಪಾಡಿಕೊಳ್ಳಲು ಅವರು ಯಾವುದೇ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದಿಲ್ಲ. ಮನೆಯಲ್ಲೇ ತಯಾರಿಸಿದ ಎಣ್ಣೆ ಹಾಗೂ ಶ್ಯಾಂಪೂ ಬಳಸುತ್ತಾರೆ. ʼʼಈ ಉದ್ದದ ಕೂದಲನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ಮತ್ತು ತಾಳ್ಮೆ ಬೇಕಾಗುತ್ತದೆ. ನಾನು ನನ್ನ ಕೂದಲನ್ನು ತೊಳೆದು ಒಣಗಿಸಲು ಗಂಟೆಗಟ್ಟಲೆ ಕಳೆಯುತ್ತೇನೆʼʼ ಎಂದು ಅವರು ಹೇಳಿದ್ದಾರೆ.