ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಯೋಧ್ಯೆಯಲ್ಲಿ ಗಮನ ಸೆಳೆದ ಜರ್ಮನಿಯ ಪುಟಾಣಿ ಅಂಜನೇಯ: ವಿಡಿಯೊ ನೋಡಿ

Viral Video: ಜರ್ಮನಿಯ ಬಾಲಕನೊಬ್ಬ ಉತ್ತರ ಪ್ರದೇಶದ ಅಯೋಧ್ಯೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾನೆ. ಬಿಳಿ ಬಣ್ಣದ ಉಡುಪು ಧರಿಸಿ ಹಣೆ ತುಂಬಾ ಕುಂಕುಮ ಧರಿಸಿ ಬಾಲಕ ಭಕ್ತಿಯಲ್ಲಿ ಮುಳುಗಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.

ಜರ್ಮನಿಯ ಪುಟಾಣಿ ಬಾಲಕ ಆಂಜನೇಯ

ಲಖನೌ, ಮಾ. 23: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದು, ರಾಮನ ಆಶೀರ್ವಾದ ಪಡೆಯುತ್ತಿದ್ದಾರೆ. ಈ ನಡುವೆ ಜರ್ಮನಿಯ ಬಾಲಕನೊಬ್ಬ ಅಯೋಧ್ಯೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾನೆ. ಬಿಳಿ ಬಣ್ಣದ ಉಡುಪು ಧರಿಸಿ ಹಣೆ ತುಂಬಾ ಕುಂಕುಮ ಧರಿಸಿ ಬಾಲಕ ಭಕ್ತಿ ಭಾವದಲ್ಲಿ ಮುಳುಗಿದ್ದಾನೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ಜರ್ಮನಿಯ ಆಂಜನೇಯ ಎಂಬ ಬಾಲಕ ರಾಮನಿಗೆ ಪ್ರಾರ್ಥನೆ ಸಲ್ಲಿಸಲು ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದ. ಹಣೆಯ ಮೇಲೆ ಕುಂಕುಮ ಹಚ್ಚಿಕೊಂಡು ಸರಳ ಬಿಳಿ ಬಟ್ಟೆಯನ್ನು ಧರಿಸಿದ್ದ ಆ ಹುಡುಗನ ನಡವಳಿಕೆಯು ನೋಡುಗರನ್ನು ಆಕರ್ಷಿಸಿದೆ. ಆತ ಸಂಸ್ಕೃತದಲ್ಲಿ ರಾಮನ ಹೆಸರನ್ನು ಜಪಿಸುತ್ತಿದ್ದು, ಇದು ಕೂಡ ಎಲ್ಲರಲ್ಲಿಯೂ ಕುತೂಹಲ ಉಂಟು ಮಾಡಿದೆ.

ವಿಡಿಯೊ ನೋಡಿ:



ಈ ಪುಟ್ಟ ಬಾಲಕ ವಿದೇಶದವನಾದರೂ ಈತನ ಭಕ್ತಿ ಮತ್ತು ಆಚರಣೆಗೆ ಭಾರತೀಯರು ಫಿದಾ ಆಗಿದ್ದಾರೆ. ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆ ಗಳಿಸಿದೆ. ಮಾಧ್ಯಮದೊಂದಿಗೆ ಮಾತನಾಡಿದ ಬಾಲಕ‌ ರಾಮ ಮಂದಿರದ ಅನುಭವ ಹಂಚಿಕೊಂಡಿದ್ದಾನೆ. ಇಲ್ಲಿನ ಪ್ರಯಾಣ ತುಂಬಾ ಚೆನ್ನಾಗಿತ್ತು. ಆದರೆ ಇಲ್ಲಿ ಬಹಳಷ್ಟು ಬಿಸಿಲಿದೆ. ಆದರೂ ಇದನ್ನು ನಾನು ನಿಭಾಯಿಸುತ್ತೇನೆ ಎಂದಿದ್ದಾನೆ.

ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ಈ ಬಗ್ಗೆ ನೆಟ್ಟಿಗರು ಕೂಡ ನಾನಾ ಬಗೆಯ ಕಮೆಂಟ್ ಮಾಡಿದ್ದು ಬಾಲಕ ತುಂಬಾ ಮುದ್ದಾಗಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಅಯೋಧ್ಯೆಗೆ ಅಮೆರಿಕ, ಜರ್ಮನಿ ವಿವಿಧ ವಿದೇಶದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.